ಕ್ಷೇತ್ರದ ಮತದಾರರಿಗೂ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದ ಶ್ರೀ ಅಮಾರೇಗೌಡ ಎಲ್.ಪಾಟೀಲ್ ರವರು.

Spread the love

ಕ್ಷೇತ್ರದ ಮತದಾರರಿಗೂ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದ ಶ್ರೀ ಅಮಾರೇಗೌಡ ಎಲ್.ಪಾಟೀಲ್ ರವರು.

ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ  ಶ್ರೀ ಅಮಾರೇಗೌಡ ಎಲ್.ಬಯ್ಯಾಪೂರರವರು ಸೋತರೂ ಕ್ಷೇತ್ರದ ಎಂತಹ ತ್ಯಾಗಕ್ಕೂ ಬದ್ಧನಾಗಿರುತ್ತಾರೆ. ಜನತೆಯೇ ಮಧ್ಯ ಇದ್ದುಕೊಂಡು ಅವರ ಸೇವೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸಿದರು. ಜನರ ಸೇವೆ ಮಾಡಲು ನಾನು ಸದಾ ಮುಂದೆ ಬರುತ್ತೇನೆ. ನನಗೆ ಮತ ಹಾಕಿದ ಕ್ಷೇತ್ರದ ಮತದಾರರಿಗೆ, ಕಾಂಗ್ರೆಸ್‌ ಕಾರ್ಯಕರ್ತರಿಗೆ ಧನ್ಯವಾದ ಎಂದು ಕಾಂಗ್ರೆಸ್ ಅಭ್ಯರ್ಥಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಎಂದರು. ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಸಕ್ತ ಕ್ಷೇತ್ರದ ಜನತೆ ನನ್ನನ್ನು ಅಭಿವೃದ್ಧಿ ಕಾರ್ಯ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗಮನಿಸದೇ ಸೋಲಿಸಿದ್ದಾರೆ. ಆದರೂ ಸಹ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ಕ್ಷೇತ್ರದ ಜನತೆ ಪರವಾಗಿಲ್ಲ. ಕ್ಷೇತ್ರದ ಪ್ರತಿಯೊಬ್ಬ ಮತದಾರರ ಕಷ್ಟ-ನನಗೆ ಸಾಕಷ್ಟು ಗೊತ್ತಿದೆ,ಜನರ ಸಂಕಷ್ಠಗಳಲ್ಲಿ ನಾನು ಭಾಗಿಯಾಗಿ, ಅವರ ನೋವು/ನಲಿವುಗಳಲ್ಲಿ ಒಂದಾಗುವೆ ಎಂದರು. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಸರ್ಕಾರ ರಚನೆ ಮಾಡುವ ಜವಾಬ್ದಾರಿ ಅತಿಹೆಚ್ಚು ಸೀಟು ಗೆದ್ದ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಮತ್ತು ಮುಖಂಡರ ಹೆಗಲೇರಿದೆ. ಬಹಳಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಮತ್ತು ಸೋತದ್ದು ಯಾಕೆ ಅನ್ನುವದಕ್ಕೆ ಜಾತಿ ಲೆಕ್ಕಾಚಾರದಿಂದ ಹಿಡಿದು ಹಲವು ಆಯಾಮಗಳಲ್ಲಿ ಭಿನ್ನ ವಿಭಿನ್ನ ಕಾರಣಗಳು ಎದ್ದು ಕಾಣುತ್ತಿವೆ. ಯಾವುದೇ ಪಕ್ಷದಿಂದ ಆಗಲಿ ಆದರೆ ರಾಜ್ಯದ ಪ್ರತಿ ಹಳ್ಳಿಯ ಗಲ್ಲಿ-ಗಲ್ಲಿಯೂ ಅಭಿವೃದ್ಧಿ ಆಗಲಿ.ಪ್ರತಿ ಅರ್ಹ ಫಲಾನುಭವಿಗೂ ಸರ್ಕಾರದ ಯೋಜನೆಗಳು ಮನೆಯ ಬಾಗಿಲಿಗೆ ತಲುಪುವಂತೆ ಮಾಡಿರುವುದು ನಮ್ಮ ಕಾಂಗ್ರೆಸ್ ಪಕ್ಷ ಮಾತ್ರ… ಸಮಾಜೀಕ ಜಾಲತಾಣಗಳಲ್ಲಿ ಅವರ ಅಭಿವೃದ್ದಿಪರ ಕೆಲಸ,ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ತಮ್ಮ ಅಭಿಪ್ರಾರ್ಯವನ್ನ ಈ ರೀತಿಯಲ್ಲಿ ವ್ಯಕ್ತ ಪಡಿಸಿದ್ದಾರೆ.  “ನೀವು ಸೋತಿಲ್ಲ ಸರ್… ನಾವು ಸೋತಿದ್ದೀವಿ ಕ್ಷೇತ್ರ ಸೋತಿದೆ.. ಅಭಿವೃದ್ಧಿ ಸೋತಿದೆ….. ಎಲ್ಲರೂ ಬಿಟ್ಟು ಹೋಗಲಿ.. ನಾವು ನಿಮ್ಮ ಸ್ವಾಭಿಮಾನದ ಅಭಿಮಾನಿ.. ಇಂದು ಮುಂದು ಎಂದೆಂದಿಗೂ ಜೀವ ಇರುವವರೆಗೂ ನಾವು ನಿಮ್ಮ ಅಭಿಮಾನಿ ಸರ್…. ನೀವು ನಮ್ಮ ಹೆಮ್ಮೆಯ ನಾಯಕ… ಜೈ ಬಯ್ಯಾಪುರ.

ಒಬ್ಬ ವ್ಯಕ್ತಿಯನ್ನು ಸೋಲಿಸಿದ ಅಥವಾ ಗೆಲ್ಲಿಸಿದ ಸಾಮಾನ್ಯ ಕಾರ್ಯಕರ್ತರ ಅಭಿಮಾನ,ಸ್ವಾಭಿಮಾನ,ಪಕ್ಷ ನಿಷ್ಠೆ,ಅಭ್ಯರ್ಥಿಗಳ ಬಂಡಾಯ, ವೈಯುಕ್ತಿಕ ಪ್ರತಿಷ್ಠೆ ಮತ್ತು ಅನುಕಂಪದ ಅಲೆ ಅದೆಲ್ಲ ಎನೇ ಇರಲಿ ಗೆದ್ದವರಿಗೆ ಅಭಿನಂದನೆಗಳು ಮತ್ತು ಸೋತವರಿಗೆ ಸಂತಾಪಗಳು.ಗೆದ್ದವರು ತಮ್ಮ ಗೆಲುವಿನ ಬಗ್ಗೆ ಅಹಂಕಾರ ಪಡದಿರಲಿ ಮತ್ತು ಸೋತವರು ತಮ್ಮ  ಸೋಲಿನ ಬಗ್ಗೆ ಮತ್ತೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಮತದಾರ ಪ್ರಭುವಿನ ಮನಸ್ಸಿನಲ್ಲಿ ಗೆದ್ದವರೂ ನಮ್ಮವರೇ ಮತ್ತು ಸೋತವರೂ ನಮ್ಮವರೇ ಅನ್ನುವ ವಿಶಾಲ ಮನೋಭಾವ ಅಚ್ಚು ಒತ್ತಲಿ.ಬೆರಳಿಗಂಟಿದ ಇಂಕು ಅಳುಕಿ ಹೋಗುತ್ತದೆ,ಗೆದ್ದ ಅಬ್ಯರ್ಥಿ ನಿಮ್ಮ ಹಗಲು ಇರುಳಿನ ಶ್ರಮವನ್ನೆ ಮರೆತುಬಿಡಬಹುದು, ಅಥವಾ ನೀವು ಆರಿಸಿದ ಅಭ್ಯರ್ಥಿ ಅಭಿವೃದ್ಧಿ ಯನ್ನೂ ಮರೆತು ಬಿಡಬಹುದು,ಅಥವಾ ಮತ್ತೊಮ್ಮೆ ಬದಲಾವಣೆಯ ಬಿರುಗಾಳಿಯೂ ಬೀಸಬಹುದು.ಆದರೆ ಗೆದ್ದ ಖುಷಿಯಲ್ಲೋ,ಸೋತ ಹತಾಷೆಯಲ್ಲೋ ಮತ್ತೊಬ್ಬರ ಬಗ್ಗೆ ಆಡಿದ ಮಾತುಗಳು ಅವರ ಮನಸ್ಸು ನೋಯಿಸದಿರಲಿ. ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯದ ಎಲ್ಲ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಗೊಳ್ಳಲಿ ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಿ ನಂದನವನವಾಗಿ ಸಮೃದ್ದಿಯಿಂದ ನಳನಳಿಸಲಿ…

ವರದಿ-ಉಪ್ಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *