ರೈತರ ಉಳುವಿಗಾಗಿ ಜೆಡಿಎಸ್ ಬೆಂಬಲಿಸಿ-ಮಲ್ಲನಗೌಡ ಕೋನನಗೌಡ್ರು.

Spread the love

ರೈತರ ಉಳುವಿಗಾಗಿ ಜೆಡಿಎಸ್ ಬೆಂಬಲಿಸಿಮಲ್ಲನಗೌಡ ಕೋನನಗೌಡ್ರು.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ನೆಲಜೇರಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ್ರವರಿಗೆ ಅಭೂತಪೂರ್ವ ಬೆಂಬಲ. ರೈತರ ಉಳುವಿಗಾಗಿ ಜೆಡಿಎಸ್ ಬೆಂಬಲಿಸಿ,- ಮಲ್ಲನಗೌಡ ಕೋನನಗೌಡ್ರು. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಹೊಂದಾಣಿಕೆ ರಾಜಕಾರಣದಿಂದಾಗಿ ಜನಸಾಮಾನ್ಯರ ಬದುಕು ಬರುಡಾಗಿದೆ. ಕ್ಷೇತ್ರದ ಬದಲಾವಣೆಗಾಗಿ ನನ್ನಂತ ಯುವಕನಿಗೆ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿ ಹಾಲಪ್ಪ ಮತ್ತು ರಾಯರೆಡ್ಡಿ ಅವರನ್ನು ಮನೆಗೆ ಕಳಿಸಿ ಎಂದು ಮನವಿ ಮಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಣ ಮತ್ತು ಹೆಂಡ ಮಾರಕ ಸನ್ಮಾನ್ಯ ಹಾಲಪ್ಪ ಮತ್ತು ರಾಯರೆಡ್ಡಿ ಅವರು ಜನರ ಮುಂದೆ ಮತವನ್ನು ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಕ್ಷೇತ್ರದ ರೈತರಿಗೆ ಮೋಸ ವಂಚನೆ ದ್ರೋಹ ಮಾಡಿ ಅಧಿಕಾರದ ಆಸೆಗಾಗಿ ನೀರಾವರಿಯ ಹೆಸರಿನಲ್ಲಿ ವಂಚಿಸಿ ಅಧಿಕಾರ ಅನುಭವಿಸುತ್ತಿರುವ ಸನ್ಮಾನ್ಯ ಹಾಲಪ್ಪ ಮತ್ತು ರಾಯರೆಡ್ಡಿ ಅವರನ್ನು ಸೋಲಿಸಿ ಮನೆಗೆ ಕಳಿಸಿ. ಸನ್ಮಾನ್ಯ ಕುಮಾರಸ್ವಾಮಿಯವರು ಈ ರಾಜ್ಯದ ಮುಖ್ಯಮಂತ್ರಿಗಳಾದರೆ ಮತ್ತೊಮ್ಮೆ ರಾಜ್ಯದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ. ನನ್ನ ಗರ್ಭಿಣಿ ಸಹೋದರಿಯರಿಗೆ ಪ್ರತಿ ತಿಂಗಳು 6,000 ದಂತೆ ಆರು ತಿಂಗಳು ಒಟ್ಟು 36,000 ಭತ್ಯೆನೀಡುತ್ತೇವೆ. ನನ್ನ ರೈತನಿಗೆ ಬಿತ್ತನೆ ಬೀಜಕ್ಕೆ ಹಾಗೂ ಗೊಬ್ಬರಕ್ಕೆ ಎಕರೆಗೆ 10,000 ದಂತೆ ಒಬ್ಬ ರೈತನ 10 ಎಕರೆಗೆ ಒಟ್ಟು ಒಂದು ಲಕ್ಷ ರೂಪಾಯಿ ದ ವರೆಗೂ ಪ್ರೋತ್ಸಾಹ ಧನವನ್ನು ನೀಡುತ್ತೇವೆ. ತಾಯಂದಿರ ಸ್ತ್ರೀಶಕ್ತಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ. ರಾಜ್ಯದಲ್ಲಿ ಸೀಮೆಎಣ್ಣೆಯನ್ನು ವಿತರಿಸುವ ವ್ಯವಸ್ಥೆ ಮತ್ತೆ ಜಾರಿ ಮಾಡುತ್ತೇವೆ. ಉಚಿತವಾಗಿ ತಾಯಂದಿರಿಗೆ ವರ್ಷಕ್ಕೆ5 ಸಿಲೆಂಡರ್ ಉಚಿತವಾಗಿ ನೀಡುತ್ತೇವೆ. ರೈತನನ್ನು ಮದುವೆಯಾದ ನನ್ನ ಸಹೋದರಿಯರಿಗೆ ಎರಡು ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತೇವೆ. ಕೃಷಿ ಕಾರ್ಮಿಕರಿಗೆ ಒಂದು ಕುಟುಂಬಕ್ಕೆ ಎರಡು ಸಾವಿರ ರೂಪಾಯಿ ಪ್ರತಿ ತಿಂಗಳು ಸೌಲಭ್ಯ ನೀಡುತ್ತೇವೆ. ವಯೋವೃದ್ಧ ತಂದೆ ತಾಯಿಗಳಿಗೆ ಪ್ರತಿ ತಿಂಗಳು 5000 ವೃದ್ಧಾಪ್ಯ ವೇತನವನ್ನು ನೀಡುತ್ತೇವೆ ಹಾಗಾಗಿ ಜೆಡಿಎಸ್ ಪಕ್ಷವನ್ನ ಬೆಂಬಲಿಸಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ನನ್ನಂತ ಯುವಕನಿಗೆ ಒಂದೇ ಒಂದು ಸಾರಿ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ ಖಂಡಿತವಾಗಿಯೂ ನಿಮ್ಮ ಮನೆ ಮಗನಾಗಿ ಪ್ರಾಮಾಣಿಕವಾಗಿ ಸೇವಿ ಸಲ್ಲಿಸಿ ನಿಮ್ಮ ಹೆಸರಿಗೆ ಚ್ಯುತಿ ಬರದ ಹಾಗೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಬಸವರಾಜ್ ಗೌಡ ಮಾಲಿ ಪಾಟೀಲ್ ಪತ್ರೆಪ್ಪ ಲಂಡೇರ. ವಿರೂಪಣ್ಣ ಚುಕುಣಿ ಶರಣಗೌಡ ಪಾಟೀಲ್ ವಿರೂಪಾಕ್ಷಗೌಡ ಪಾಟೀಲ್ ರವಿ ಬಡಿಗೇರ್ ಬಸನಗೌಡ ಪಾಟೀಲ್ ದ್ಯಾಮಣ್ಣ ಡೊಳ್ಳಿನ ಗವಿ ಹಳ್ಳಿ ಮಾರುತಿ ಹಿರೇವಡ್ರಕಲ್ ಶರಣಪ್ಪ ತಳವಾರ್ ಹಾಗೂ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ-ಉಪ್ಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *