‘ಯೋಧಂ ಶರಣಂ ಗಚ್ಛಾಮಿ’ ಇಂಗ್ಲೀಷ ಆವೃತ್ತಿಯ ಪುಸ್ತಕ ಬಿಡುಗಡೆ:

Spread the love

ಯೋಧಂ ಶರಣಂ ಗಚ್ಛಾಮಿಇಂಗ್ಲೀಷ ಆವೃತ್ತಿಯ ಪುಸ್ತಕ ಬಿಡುಗಡೆ:

ಕನ್ನಡದ ಪ್ರಸಿದ್ಧ ಲೇಖಕ ಟಿಎನ್ನೆಸ್ ಅವರ ಯೋಧರ ಕುರಿತಾದ “ಯೋಧರಿಗೊಂದು ನಮನ”    “ಯೋಧಂ ಶರಣಂ ಗಚ್ಛಾಮಿ” ಪುಸ್ತಕಗಳು ಈಗಾಗಲೇ ಕನ್ನಡದಲ್ಲಿ ಒಳ್ಳೆಯ ಹೆಸರನ್ನು ಮಾಡಿದೆ. ಯೋಧಂ ಶರಣಂ ಗಚ್ಛಾಮಿಯು ಇಂಗ್ಲೀಷ, ಹಿಂದಿ, ತೆಲುಗು, ತಮಿಳು ಹಾಗು ಮಲೇಶಿಯಾದ ಬಹಾಸ ಮಲಾಯ ಭಾಷೆಯಲ್ಲಿ ಸಹ ಭಾಷಾಂತರವಾಗುತ್ತಿದ್ದು ಶೀಘ್ರವೇ ಇತರೆ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಗೊಳ್ಳಲಿದೆ. ಇದರ ಇಂಗ್ಲೀಷ್ ಆವೃತ್ತಿಯು ಬಿಡುಗಡೆಗೆ ಸಿದ್ಧವಾಗಿದ್ದು, ಕಾರ್ಗಿಲ್ ನಲ್ಲಿ ಕಾರ್ಗಿಲ್ ಯೋಧರ ಕೈಲಿ ಇದೇ ತಿಂಗಳ ಏಳರಂದು ಬಿಡುಗಡೆಯಾಗಲಿದೆ. ಇದನ್ನು ಇಂಗ್ಲೀಷ್ ಗೆ ಅನುವಾದಿಸಿರುವ ನವ್ಯಶ್ರೀ ರವರೇ ಖುದ್ದಾಗಿ ಕಾರ್ಗಿಲ್ ಗೆ ತೆರಳಿ ಮೇ ಏಳರಂದು ಕಾರ್ಗಿಲ್ ನಲ್ಲಿ ಯೋಧರ ಕೈಲಿ ಬಿಡುಗಡೆಗೊಳಿಸಲಿದ್ದಾರೆ. ಯೋಧರ ಕುರಿತಾದ ಕನ್ನಡ ಪುಸ್ತಕದ ಇಂಗ್ಲೀಷ್ ಆವೃತ್ತಿಯ ಪೋಸ್ಟರ್ ಒಂದು ಈ ರೀತಿ ಕಾರ್ಗಿಲ್ ನಲ್ಲಿ ಬಿಡುಗಡೆಯಾಗುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ಪುಸ್ತಕದ ಲೇಖಕ, ಅನುವಾದಕ ಹಾಗು ಪ್ರಕಾಶಕರಿಗೆ ಶುಭವಾಗಲಿ ಎಂದು ಹಾರೈಕೆ. ಕಾರ್ಗಿಲ್ ನಲ್ಲಿನ ಸಮಸ್ತ ಯೋಧರಿಗೆ ಈ ಮೂಲಕ ನಮ್ಮದೊಂದು ನಮನ.

ವರದಿ: ಡಾ.ಪ್ರಭು ಗಂಜಿಹಾಳ

Leave a Reply

Your email address will not be published. Required fields are marked *