ಮುದೇನೂರು ಗ್ರಾಮದಲ್ಲಿ ಶಾಂತಿಯುತವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ..

Spread the love

ಮುದೇನೂರು ಗ್ರಾಮದಲ್ಲಿ ಶಾಂತಿಯುತವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ..

ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದ ಎಸ್ ಎಸ್ ಎಲ್ ಸಿ  ಪರೀಕ್ಷಾ ಕೇಂದ್ರವಾದ ಸರಕಾರಿ ಪ್ರೌಢಶಾಲೆಯಲ್ಲಿ  ಶಾಂತೂತವಾಗಿ ಪರೀಕ್ಷೆಗಳು ನಡೆದವು. ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಎಸ್‌ಡಿಎಂಸಿ ಅಧ್ಯಕ್ಷರಿಂದ, ಶಿಕ್ಷಕರಿಂದ ಹೂಗುಚ್ಛ ಹಾಗೂ ನೋಟು ಬುಕ್ ನೀಡುವ ಮೂಲಕ ಆತ್ಮೀಯವಾಗಿ ಪರೀಕ್ಷೆಗೆ ಬರಮಾಡಿಕೊಂಡರು. ಮುದೇನೂರಿನ ಈ ಪರೀಕ್ಷಾ ಕೇಂದ್ರದಲ್ಲಿ 117 ಗಂಡು 112 ಹೆಣ್ಣು , ಒಂದು ಗೈರು ಒಟ್ಟು 229 ಮಕ್ಕಳು ಪರೀಕ್ಷೆಯನ್ನು ಬರೆದರು ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕರಾದ ಸೋಮನಗೌಡ ಪಾಟೀಲ್ ತಿಳಿಸಿದರು. ಈ ಪರೀಕ್ಷೆ ಕೇಂದ್ರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಉಪಸ್ಥಿತರಿದ್ದರು.

ವರದಿ:ಚಂದ್ರುಶೇಖರ ಕುಂಬಾರ ಮುದೇನೂರ.

Leave a Reply

Your email address will not be published. Required fields are marked *