ಶಿವಮೊಗ್ಗ ಜಿಲ್ಲೆಯ ಸಕ್ಷಮದ ವತಿಯಿಂದ ಮಾನಸಾಧಾರ ಟ್ರಸ್ಟ್(ರಿ) ಶಿವಮೊಗ್ಗದ ಮನಸ್ಪೂರ್ತಿ ಕಲಿಕಾ ಕೇಂದ್ರಬೌದ್ಧಿಕ ಅಸಮರ್ಥ್ ಮಕ್ಕಳ ವಿಭಾಗದ ವಿಶೇಷಚೇತನ ಮಕ್ಕಳಿಗೆ ಆರೋಗ್ಯ ವಿಮೆ ಯೋಜನೆಯ ಹಾಗೂ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ (UDID)ಕಾರ್ಡ್ ಮಾಡಿಸುವ ಶಿಬಿರ.

Spread the love

ಶಿವಮೊಗ್ಗ ಜಿಲ್ಲೆಯ ಸಕ್ಷಮದ ವತಿಯಿಂದ ಮಾನಸಾಧಾರ ಟ್ರಸ್ಟ್(ರಿ) ಶಿವಮೊಗ್ಗದ ಮನಸ್ಪೂರ್ತಿ ಕಲಿಕಾ ಕೇಂದ್ರಬೌದ್ಧಿಕ ಅಸಮರ್ಥ್ ಮಕ್ಕಳ ವಿಭಾಗದ ವಿಶೇಷಚೇತನ ಮಕ್ಕಳಿಗೆ ಆರೋಗ್ಯ ವಿಮೆ ಯೋಜನೆಯ ಹಾಗೂ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ (UDID)ಕಾರ್ಡ್ ಮಾಡಿಸುವ ಶಿಬಿರ.

28/03/2023 ಮಂಗಳವಾರ ನಿನ್ನೆ ಶಿವಮೊಗ್ಗ ಜಿಲ್ಲೆಯ ಸಕ್ಷಮದ ವತಿಯಿಂದ ಮಾನಸಾಧಾರ ಟ್ರಸ್ಟ್(ರಿ) ಶಿವಮೊಗ್ಗದ ಮನಸ್ಪೂರ್ತಿ ಕಲಿಕಾ ಕೇಂದ್ರಬೌದ್ಧಿಕ ಅಸಮರ್ಥ್ ಮಕ್ಕಳ ವಿಭಾಗದ ವಿಶೇಷಚೇತನ ಮಕ್ಕಳಿಗೆ ಆರೋಗ್ಯ ವಿಮೆ ಯೋಜನೆಯ ಹಾಗೂ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ (UDID)ಕಾರ್ಡ್ ಮಾಡಿಸುವ ಶಿಬಿರವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಬಗ್ಗೆ ರಜನಿ ಪೈ ಮಾನಸಧಾರ ಟ್ರಸ್ಟ್ ನ ಮುಖ್ಯಸ್ಥರು ಮಾತನಾಡಿ ನಿಜಕ್ಕೂ ಈ ಸೌಲಭ್ಯ ನಮ್ಮ ಮಕ್ಕಳಿಗೆ ತುಂಬಾ ಅತ್ಯವಶ್ಯಕವಾಗಿದೆ. ಈ ಸೌಲಭ್ಯವನ್ನು ತಿಳಿಸಿಕೊಡುವುದಕ್ಕೆ ನಮ್ಮ ಈ ಸಂಸ್ಥೆಗೆ ಆಗಮಿಸಿರುವುದು ತುಂಬಾ ಖುಷಿಕೊಟ್ಟಿದೆ ಎಂದರು. ಈ ಸಂದರ್ಭದಲ್ಲಿ ಡಾ.ಪ್ರಶಾಂತ್ ಇಸ್ಲೂರು ಅಧ್ಯಕ್ಷರು ಸಕ್ಷಮ ಇವರು ಮಾತನಾಡಿ ಸಕ್ಷಮ ವಿಶೇಷಚೇತನ ಬಂಧುಗಳ ಏಳಿಗೆಗಾಗಿಯೇ ಇರುವ ಮತ್ತು ಶ್ರಮಿಸುತ್ತಿರುವುದರಿಂದ ಯಾವಾಗಲೂ ವಿಶೇಷಚೇತನರ ಪರವಾಗಿ ನಿಲ್ಲುತ್ತದೆ. ವಿಶೇಷಚೇತನರಿಗೆ ಬೇಕಾಗುವ ಯಾವುದೇ ರೀತಿಯ ಸೌಲಭ್ಯಗಳ ಮಾಹಿತಿಯನ್ನು ಮತ್ತು ಸಹಾಯವನ್ನೂ ಪಡೆಯಬಹುದು ಎಂದು ಪ್ರಸ್ತಾವಿಕ ಭಾಷಣದಲ್ಲಿ ತಿಳಿಸಿದರು. ಇದರಂತೆ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಇವರು ಅಲ್ಲಿನ ಶಿಬಿರವನ್ನು ಉದ್ದೇಶಿಸಿ ಅದರ ಸಂಪೂರ್ಣ ಮಾಹಿತಿಯನ್ನು ವಿಶೇಷಚೇತನರಿಗೆ ಹಾಗೂ ವಿಶೇಷಚೇತನರ ಪೋಷಕರಿಗೆ ಸರ್ಕಾರದ 1999 ನ್ಯಾಷನಲ್ ಟ್ರಸ್ಟ್ ಅಕ್ಟ್ ಅದಿನಿಯಮದಡಿಯಲ್ಲಿ ಬರುವ ನಾಲ್ಕು ವಿವಿಧ ಅಂಗವೈಕಲ್ಯ ಹೊಂದಿದ ಬುದ್ಧಿಮಾಂದ್ಯತೆ, ಸೆರಬ್ರಲ್ ಪಾಲ್ಸಿ,ಆಟಿಸಂ ನ್ಯೂನತೆಗಳನ್ನು ಇರುವಂತ ವಿಶೇಷಚೇತನರಿಗೆ ನಿರಮಯ(ಆರೋಗ್ಯ ವಿಮೆ)ಯೋಜನೆ ಜಾರಿಗೆ ತಂದಿದೆ.ಈ ಆರೋಗ್ಯ ವಿಮೆ ಯೋಜನೆ ಪಡೆಯಲು ಬಡತನ ರೇಖೆಗಿಂತ ಕೆಳಗಿನ BPL ವಿಮೆ ಮೊತ್ತ ಸರ್ಕಾರವೇ ಭರಿಸಲಿದೆ,ಬಡತನ ರೇಖೆಗಿಂತ ಮೇಲಿರುವ APL ಕಾರ್ಡ್ ಹೊಂದಿದವರು 250 ರೂಪಾಯಿ ಕಂತು ಪಾವತಿ ಮಾಡಬೇಕಿದೆ.ಈ ಕಾರ್ಡ್ ಗಳ ನವೀಕರಣಕ್ಕೆ ಯಾವುದೇ ಹಣ ಪಾವತಿಸಬೇಕಿಲ್ಲ.ಚಿಕಿತ್ಸೆಗೆ ಒಳಗಾಗುವವರ ವೈದ್ಯ ತಪಾಸಣೆ,ಆಸ್ಪತ್ರೆ ವೆಚ್ಚ, ಥೆರಪಿ,ಶಸ್ತ್ರಚಿಕಿತ್ಸೆಗೆ ವೆಚ್ಚ ವಿಮೆ ಮೂಲಕ ಭರಿಸಲಿದೆ.ಇಂತಹ ಮಾಹತ್ವಾಕಾಂಕ್ಷೆ ಯೋಜನೆ ಬಗ್ಗೆ ವಿಶೇಷಚೇತನರಿಗೆ ಅರಿವು ಇಲ್ಲದಿರುವುದು ಬೇಸರ ಸಂಗತಿಯಾಗಿದೆ.ವೈದ್ಯ ವೆಚ್ಚಗಳ ಮರು ಪಾವತಿಗಾಗಿ ವಿಶೇಷಚೇತನರು ರಸೀದಿ, ಬಿಲ್ ಸೇರಿದಂತೆ ಇತರೆ ವೆಚ್ಚಗಳನ್ನು ಆಸ್ಪತ್ರೆಯಿಂದ ಬಿಡುಗಡೆಯಾದ 30 ದಿನಗಳ ಒಳಗೆ ಸಲ್ಲಿಸಬೇಕು ಎಂದು ಈ ಶಿಬಿರದಲ್ಲಿ ಮಾಹಿತಿಯನ್ನು ತಿಳಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಕ್ಷಮ. ಶಿವಮೊಗ್ಗ, ಮನಸ್ಪೂರ್ತಿ ಕಲಿಕಾ ಕೇಂದ್ರ ಬೌದ್ಧಿಕ ಅಸಮರ್ಥ ಮಕ್ಕಳ ವಿಭಾಗದ ಶಿಕ್ಷಕರು ಆದ ರಂಗನಾಯಕಿ, ಜೋತಿ, ಸವಿತಾ ಅವರು ಇದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *