ಅತ್ಯಾಚಾರದ ಪ್ರಕರಣಗಳಿಂದಾಗಿ ದೇಶದ ಘನತೆಗೆ ಧಕ್ಕೆ ಉಂಟಾಗುತ್ತಿದೆ: ಜ್ಯೋತಿ, ಜಿ. ಮೈಸೂರು.

Spread the love

ಅತ್ಯಾಚಾರದ ಪ್ರಕರಣಗಳಿಂದಾಗಿ ದೇಶದ ಘನತೆಗೆ ಧಕ್ಕೆ ಉಂಟಾಗುತ್ತಿದೆ: ಜ್ಯೋತಿ, ಜಿ. ಮೈಸೂರು.

ಕೊಪ್ಪಳ ಜಿಲ್ಲೆ ಗಂಗಾವತಿ ಭಾಗದ ಕುಮಾರಿ ಪಲ್ಲವಿ ಶಿವಾನಂದ ಎಂಬ ಮುಗ್ದ ೧೭ ವಯಸ್ಸಿನ ವಿದ್ಯಾರ್ಥಿನಿಯನ್ನು ಸಾಮೂಹಿಕ ಆತ್ಯಾಚಾರ ಹಾಗೂ ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಹೊರಗಿರುವ ಘಟನೆ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಅದರಲ್ಲೂ ಆರೋಪಿಗಳು ಇದನ್ನು ಮುಚ್ಚಿ ಹಾಕವ ಪ್ರಯತ್ನ ಕೂಡ ನಡೆದಿದೆ. ಸೂಸೈಡ್‌, ಕಿಡ್ನಾಪ್‌, ರೇಪ್‌ ಬಂದು ಪೋಲಿಸರೇ ಪೇಸ್‌ ಬುಕ್ ಗಳಲ್ಲಿ ಸುಳ್ಳು ಮಾಹಿತಿಯನ್ನು  ನೀಡುತ್ತಿರುವುದು ಖಂಡನಿಯವಾಗಿದೆ. ಹೆಚ್ಚಾಗುತ್ತಿರುವ ಇಂತಹ ಪ್ರಕರಣಗಳು ಸಮಾಜವನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ. ಇನ್ನೂ ಕೂಡ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದ ಆಡಳಿತ ವ್ಯವಸ್ಥೆಗೆ ನನ್ನ ಧಿಕ್ಕಾರ.ಇಂತಹ ಅತ್ಯಾಚಾರದ ಪ್ರಕರಣಗಳಿಂದಾಗಿ ದೇಶದ ಘನತೆಗೆ ಧಕ್ಕೆ ಉಂಟಾಗುತ್ತಿದೆ. ನ್ಯಾಯಲಯವು ಇಂತಹ ಪ್ರಕರಣಗಳು ಬೇಗನೆ ಇತ್ಯರ್ಥಗೊಳಿಸಿ, ಸರಕಾರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ, ಜಿ. ಮೈಸೂರು ತಿಳಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಜ್ಯೋತಿ, ಜಿ. ಮೈಸೂರು.

Leave a Reply

Your email address will not be published. Required fields are marked *