ಕುಷ್ಟಗಿ ತಾಲೂಕು ಮಟ್ಟದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಿಡದೂರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು..

Spread the love

ಕುಷ್ಟಗಿ ತಾಲೂಕು ಮಟ್ಟದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಿಡದೂರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು..

ಮುಂಜಾನೆ ವೇಳೆಯಲ್ಲಿ ಸಮಸ್ತ ಗಂಗಾಮತ ಸಮಾಜದ ಮಹಿಳೆಯರು  ಎಲ್ಲರೂ ಸೇರಿ ಗಂಗಾಸ್ಥಳದಿಂದ ಕುಂಭ ಕಳಸ ದೊಂದಿಗೆ ಮೇರವಣಿಗೆ ಸಾಗಿತು.  ಸಮಾಜದ ಗುರುಗಳು ಆಗಿರುವ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾ ಸ್ವಾಮಿಗಳು  ಮೇರವಣಿಗೆ ಯಲ್ಲಿ ಉಪಸ್ಥಿತರಿದ್ದರುಮತ್ತು ಸಮಾಜದ ಯುವಕರು ಡೊಳ್ಳು ಕುಣಿತ ಸಕಲ ವಾದ್ಯಗಳೊಂದಿಗೆ ಹೆಜ್ಜೆ ಮತ್ತು ಕೋಲಾಟದೊಂದಿಗೆ ಸಾಗಿ ಬಂದಿತು…..ಕಿಡದೂರು ಗ್ರಾಮದಲ್ಲಿ ಇರುವ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ವರ ವೃತ್ತಕ್ಕೆ. ಗಂಗಾಮತ ಸಮಾಜದ ಹಿರಿಯರು  ಪೂಜೆ ಪುಷ್ಪಾರ್ಪಣೆ ಮಾಡಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾ ಸ್ವಾಮಿಗಳು ವಯಿಸಿದ್ದರು….ವೇದಿಕೆಯಲ್ಲಿ ಕುಳಿತಿರುವ ಅತಿಗಣ್ಯಮಾನ್ಯರು ಹಾಗೂ ಪೂಜ್ಯರು  ಶಿವಾಜಿ ಮೇಟಗಾರವರು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉಧ್ಘಾಟಿಸಿದರು…..ಕುಷ್ಟಗಿ ತಾಲ್ಲೂಕಿನ ಕಿಡದೂರು ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನ ಸಮುದಾಯ ಭವನ ಉಧ್ಘಾಟನೆ ಯನ್ನು ಕುಷ್ಟಗಿ ಕ್ಷೇತ್ರದ ಶಾಸಕರಾದ ಅಮರೆಗೌಡ ಪಾಟೀಲ ಬಯ್ಯಾಪುರ ಉಧ್ಘಾಟನೆ ಮಾಡಿದರು…ವಿಶೇಷ ಉಪನ್ಯಾಸವನ್ನು. ಯುವ ಕವಿ ಬರಹಗಾರರು. ಹಿಮಾಮಸಾಬ ಸಂಶೋದಕರು ಹಡಗಲಿ ಕನಕಗಿರಿ ಯವರು ನಿಜಶರಣ ಅಂಬಿಗರ ಚೌಡಯ್ಯನವರ ವಚನದ ಮೂಲಕ ಸಮಾಜದ ಇತಿಹಾಸ  ಬಗ್ಗೆ ತಿಳಿಸಿದರು…..ಪ್ರಾಸ್ತಾವಿಕವಾಗಿ ಗಂಗಾಮತ ಸಮಾಜದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ವಿರುಪಣ್ಣ ನವಲಿ ಮಾತನಾಡಿದರು….ಉಧ್ಘಾಟನೆ ಬಾಷಣವನ್ನು. ವಿಜಯಪುರ ಗಂಗಾಮತ ಯುವ ಜಿಲ್ಲಾಧ್ಯಕ್ಷರಾದ ಯುವ ಹೋರಾಟಗಾರ  ಶ್ರೀ ಶಿವಾಜಿ ಮೇಟಗಾರವರು.  ಈ ಸಮಾಜದ ಅಂಕುಡೊಂಕಿನ ವಿಚಾರವನ್ನು ಹಾಗೂ ಈ ಸಮಾಜದ ಎಸ್ ಟಿ ಮಿಸಲಾತಿ ಯನ್ನು ನಿಡುವದರಲ್ಲಿ ಮೀನ ಮೇಷ ಮಾಡುತ್ತಿರುವ ಈ ಸರ್ಕಾರದ ವಿರುದ್ಧ ಗುಡುಗಿದರು… ಹತ್ತನೆ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೂ. ಮತ್ತು   ಸರ್ಕಾರಿ ನೌಕರಿಯಲ್ಲಿ  ಸೇವೆ ಸಲ್ಲಿಸುತ್ತಿರುವ ಸಮಾಜದ ಯುವಕರಿಗೆ. ಸಮಾಜದ ಮುಖಂಡರು ಹಾಗೂ ಅತಿಥಿ ಗಣ್ಯಮಾನ್ಯರು ಸನ್ಮಾನಿಸಿದರು.. ಈ ವೇದಿಕೆಯ ಮೇಲೆ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾ ಸ್ವಾಮಿಗಳರವರ ತುಲಭಾರ ಕಾರ್ಯಕ್ರಮವನ್ನು. ಸಮಸ್ತ ಗಂಗಾಮತ ಸಮಾಜದ ಬಂಧುಗಳು ನೇರವೇರಿಸಿದರು…ಈ ಕಾರ್ಯಕ್ರಮದಲ್ಲಿ ಕುಷ್ಟಗಿ ಶಾಸಕರಾದ ಶ್ರೀ ಅಮಾರೇಗೌಡ ಎಲ್.ಬಯ್ಯಾಪೂರ, ಈ ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ಶಾಮಣ್ಣ ಸುಣ್ಣಗಾರ ವಹಿಸಿದ್ದರು…..ಗಂಗಾವತಿ ನಗರಸಭೆ ಸದಸ್ಯರು ಪರಶುರಾಮ ಮಡ್ಡೇರ. ತಾಯಪ್ಪ ಕೋಟಿಹಾಳ. ಹನುಮಂತ ಮಡ್ಡೇರ್, ಬಸವರಾಜ ಕೀಡೂದುರು, ನಿಂಗಪ್ಪ ಮೆಟ್ಟಿಗೇರಿ, ಶ್ರೀ ಬುಡ್ಡಪ್ಪ ಯಲಬುರ್ಗಾ. ಇಲಕಲ್ ನಗರದ ಗಂಗಾಮತ ಸಮಾಜದ ಅಧ್ಯಕ್ಷರಾಗಿರುವ ಬಸವರಾಜ ಜುಮಲಾಪೂರ. ಹಾಗೂ ವೇದಿಕೆ ಮೇಲೆ ಕಾಂಗ್ರೆಸ್ ಪಕ್ಷದ ಹಿರಿಯರಾಗಿರುವ ದೆವೇಂದ್ರಪ್ಪ ಬಳೂಟಗಿ. ಚಂದ್ರಶೇಖರ್ ನಾಲತ್ವಾಡರವರು. ಲಿಂಗರಾಜ ಹಂಚಿನಾಳ. ಶರಣಗೌಡ ಗುಮಗೇರ. ಮಾನಪ್ಪ ತಳವಾರ ಕ್ಯಾದಿಗುಪ್ಪ. ಮಾಜಿ ಗ್ರಾಮ ಪಂ ಅಧ್ಯಕ್ಷರು ಚೆನ್ನನಗೌಡ ಕಿಡದೂರ. ವೆಂಕಟೇಶ್ ಬಡಿಗೇರ, ಶರಣಪ್ಪ ಮೆಣೇದಾಳ, ನಾಗರಾಜ ಇಟಗಿ, ರವಿ ಅಮಾರಾಪೂರ, ಭೀಮಣ್ಣ ಬೇವಿನಾಳ, ಹಾಗೂ ಕುಷ್ಟಗಿ ತಾಲೂಕಿನ ಕಿಡದೂರು. ತಾವರಗೇರಾ. ನಾರಿನಾಳ. ಜುಮಲಾಪೂರ. ಸಾಸ್ವಿಹಾಳ. ಅಡವಿಬಾವಿ. ಹಂಚಿನಾಳ. ಕ್ಯಾದಿಗುಪ್ಪ. ಬಂಡರಗಲ್. ಬೆಳಕಲ್. ಟಕ್ಕಳಕಿ. ಕಾಟಾಪುರ. ನಿಲೋಗಲ್. ಹಾಬಲಕಟ್ಟಿ. ಹನಮನಾಳ. ನಂದಾಪೂರ. ಚಳಗೇರ. ಗ್ರಾಮದ ಸಮಸ್ತ ಗಂಗಾಮತ ಸಮಾಜದ ಬಂಧುಗಳು ಹಿರಿಯರು ಯುವಕರು ಉಪಸ್ಥಿತರಿದ್ದರು.

ವರದಿ – ಅಮಾಜಪ್ಪ ಜುಮಲಾಪೂರ ಪತ್ರಕರ್ತರು

Leave a Reply

Your email address will not be published. Required fields are marked *