ಫೆಬ್ರವರಿಯಲ್ಲಿ ರಾಜ್ಯಕ್ಕೆ ದೆಹಲಿ ಸಿಎಂ ಅದ್ದೂರಿ ಆಗಮನ.

Spread the love

ಫೆಬ್ರವರಿಯಲ್ಲಿ ರಾಜ್ಯಕ್ಕೆ ದೆಹಲಿ ಸಿಎಂ ಅದ್ದೂರಿ ಆಗಮನ.

**ಧಾರವಾಡ: ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಮಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ ಅರವಿಂದ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಫೆಬ್ರವರಿ ೨೬ ರಂದು ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಬ್ಲಾಕ್ ಪದಾಧಿಕಾರಿಗಳ ಶಪಥ ಕಾರ್ಯಕ್ರಮ ಇದೆ. ಅದಕ್ಕೆ ಕೇಜ್ರಿವಾಲ್ ಬರುತ್ತಿದ್ದಾರೆ ಎಂದು ತಿಳಿಸಿದರು. ಫೆಬ್ರವರಿ ಬಳಿಕ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ಕೂಡಾ ಅವರು ಬರಲಿದ್ದಾರೆ. ಫೆಬ್ರವರಿ ೨೬ರ ನಂತರ ಕೇಜ್ರಿವಾಲ್ ಅವರ ಟೂರ್ ಪ್ರೋಗ್ರಾಮ್ ಮಾಡುತ್ತಿದ್ದೇವೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕೇಜ್ರಿವಾಲ್ ಅವರ ಕಾರ್ಯಕ್ರಮಗಳು ಇರಲಿದೆ. ಚುನಾವಣೆಗೆ ಮೊದಲೇ ಈ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ವರದಿ –ಬಾಲರಾಜ ಯಾದವ್

Leave a Reply

Your email address will not be published. Required fields are marked *