ಕೆ.ಆರ್.ಪಿ.ಪಿ.ಕಲ್ಯಾಣ ರಥಯಾತ್ರೆ ವಾಹನ ಪೂಜೆ ಮೂಲಕ ಚಾಲನೆ.

Spread the love

ಕೆ.ಆರ್.ಪಿ.ಪಿ.ಕಲ್ಯಾಣ ರಥಯಾತ್ರೆ ವಾಹನ ಪೂಜೆ ಮೂಲಕ ಚಾಲನೆ.

ಇಂದು ಬೆಳಿಗ್ಗೆ 8.15 ಕ್ಕೆ ಗಂಗಾವತಿ ತಾಲೂಕಿನ ಐತಿಹಾಸಿಕ ತಾಣವಾದ ಶ್ರೀ ಪಂಪಾ ಸರೋವರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿಯವರು ಮತ್ತು ಪತ್ನಿ ಶ್ರೀಮತಿ ಲಕ್ಷ್ಮಿಅರುಣಾ ಜನಾರ್ದನ ರೆಡ್ಡಿಯವರು ಮತ್ತು ಪುತ್ರಿ ಶ್ರೀಮತಿ ಬ್ರಹ್ಮಿಣಿ ರಾಜೀವ್ ರೆಡ್ಡಿ ನೇತೃತ್ವದಲ್ಲಿ ಪ್ರಸಿದ್ಧ ಪಂಪಾ ಸರೋವರದ ಶ್ರೀವಿಜಯಲಕ್ಷ್ಮಿ ದೇವಿ ಮತ್ತು ಪರಮಶಿವ ಮತ್ತು ಮಹಿಷಾಸುರ ಮರ್ದಿನಿ ಹಾಗು ವಿಜಯನಗರದ ವಿದ್ಯಾರಣ್ಯ ಗುರುಗಳಿಗೆ ಪೂಜೆ ಸಲ್ಲಿಸಿಲಾಯಿತು.ನಂತರ ವೇಧಮೂರ್ತಿ ಅನಿಲ್ ಭಟ್ ಜೋಶಿ ಮತ್ತು ಪಂಪಾ ಸರೋವರದ ಅರ್ಚಕರಾದ ಪವನ್ ಭಟ್ ಜೋಶಿ ಯವರು ಕಂಚಿ ವಾದ್ಯ ಮೇಳದೊಂದಿಗೆ ಪ್ರಾರಂಭಗೊಂಡು ಪ್ರಥಮವಾಗಿ ಗಣಪತಿ ಪೂಜೆ ನಂತರ ರಥಯಾತ್ರೆ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವಿಜಯನಗರದ ಹೆಬ್ಬಾಗಿಲು ಆನೆಗುಂದಿ ಶ್ರೀ ರಂಗನಾಧ ಸ್ವಾಮೀ ದೇಗುಲದ ಮುಂಭಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶ್ರೀ ಗಾಲಿ ಜನಾರ್ದನ ರೆಡ್ಡಿ ಮತ್ತು ಪತ್ನಿ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಮತ್ತು ಪುತ್ರಿ ಶ್ರೀಮತಿ ಬ್ರಹ್ಮೀಣಿ ರಾಜೀವ್ ರೆಡ್ಡಿ ನೇತೃತ್ವದಲ್ಲಿ ಬೆಳಿಗ್ಗೆ 10.30 ಕ್ಕೆ ಕಲ್ಯಾಣ ರಥಯಾತ್ರೆ ವಾಹನಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *