ಕಿಲಾರಹಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜನೆ.

Spread the love

ಕಿಲಾರಹಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜನೆ.

ಕುಷ್ಟಗಿ:-ದಿ.30/1/2023ರಂದು ತಾಲೂಕಿನ ಕಿಲಾರಹಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಕಿಲಾರಹಟ್ಟಿ ಕ್ಲಸ್ಟರ್ ಕಲಿಕಾ ಹಬ್ಬ ಕಾರ್ಯಕ್ರಮ ಬೆಳಿಗ್ಗೆ ಕಿಲಾರಹಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶರಣಮ್ಮ ಚವ್ಹಾಣ ಇವರು ಕಲಾತಂಡಗಳ ಮೆರವಣಿಗೆ ಕಾರ್ಯಕ್ರಮವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನಂತರ ಕಿಲಾರಹಟ್ಟಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಛದ್ಮವೇಶ, ಕೋಲಾಟ, ನೃತ್ಯ, ಡೊಳ್ಳು,ಹಲಗೆ, ಕುಂಭದ ಮೆರವಣಿಗೆ ಮೂಲಕ ಇಡೀ ಗ್ರಾಮವನ್ನು ಸುತ್ತು ಹಾಕಿದರು. ಕಲಿಕಾ ಹಬ್ಬವೇದಿಕೆಯ ಕಾರ್ಯಕ್ರಮವನ್ನು ಕಿಲಾರಹಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶರಣಮ್ಮ ಚವ್ಹಾಣರವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಸಂದರ್ಭದಲ್ಲಿ ತಾವರಗೇರಾ ವಲಯದ ಇಸಿಓ ರಾಘಪ್ಪ ಶ್ರೀರಾಮರವರು ಮಾತನಾಡುತ್ತಾ “ಕಲಿಕಾ ಹಬ್ಬ ಕೋವಿಡ್ ಸಂದರ್ಭದಲ್ಲಿ ಆದ ಪಾಠಪ್ರವಚನಗಳ ಕೊರತೆಯನ್ನು ನೀಗಿಸಲು ಈ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರ ಕಲಿಕೆಯ ಸಂತಸ ಹಂಚಿಕೊಳ್ಳಲು ಇದು ಸಹಕಾರಿಯಾಗಿದೆ.” ಎಂದರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಹನಮಗೌಡ ಪೋ.ಪಾಟೀಲರವರು ಮಾತನಾಡುತ್ತಾ ” ಈ ಹಬ್ಬ ಮಕ್ಕಳ ಕಲಿಕೆಗೆ ಪೂರಕವಾಗಿದೆ. ಗ್ರಾಮೀಣ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಮ್ಮ ಗ್ರಾಮದ ಕೀರ್ತಿ ಬೆಳಗಲಿ” ಎಂದರು. ಕಿಲಾರಹಟ್ಟಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮೇಶ್ವರ.ವೀ.ಡಾಣಿಯವರು ಮಾತನಾಡುತ್ತಾ “ಕಲಿಕಾಚೇತರಿಕೆಯ ಪೂರಕವಾದ ಕಾರ್ಯಕ್ರಮ ಇದಾಗಿದ್ದು, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು, ಗ್ರಾಮಪಂಚಾಯತಿ ಸದಸ್ಯರು ಸರ್ವ ಸಹಕಾರ ಈ ಸಂದರ್ಭದಲ್ಲಿ ಲಂಬಾಣಿ ತಾಂಡಾದ ವಿದ್ಯಾರ್ಥಿನಿಯರು ಲಂಬಾಣಿ ನೃತ್ಯ ವಿಶೇಷ ಆಕರ್ಷಣೆಯಾಗಿತ್ತು ಈ ಸಂದರ್ಭದಲ್ಲಿ ಕೊರಡಕೇರಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರಪ್ಪ ಕೊಂಡಗುರಿ, ಕಿಲಾರಹಟ್ಟಿ ಪ್ರೌಢಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಮಾನನಗೌಡ ಕೆರಿಹಾಳ, ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ನಾಗಪ್ಪ ತಳವಾರ, ಗ್ರಾ.ಪಂ.ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಬಸವರಾಜ ರಾವಣಕಿ, ಜುಮಲಾಪೂರ ಸಿ.ಆರ್.ಪಿ. ಯಮನಪ್ಪ, ತಾವರಗೇರಾ ಸಿ.ಆರ್.ಪಿ. ಕಾಶೀನಾಥ, ಕಿಲಾರಹಟ್ಟಿ ಸಿ.ಆರ್.ಪಿ. ದಾವಲಸಾಬ ಮುಲ್ಲಾ ಅಕ್ಷರ ಫೌಂಡೇಶನ್ ನಂದೀಶ್, ಮುದೇನೂರು ಆರೋಗ್ಯ ಸಹಾಯಕರಾದ ಜಗನ್ನಾಥ, ಸ್ಥಳೀಯ ಪ್ರಾಥಮಿಕ ಶಾಲೆಯ ಮು.ಶಿ. ಯಲ್ಲಪ್ಪ ಕುದರಿ,ಉಪಸ್ಥಿತರಿದ್ದರು. ರಮೇಶ್ ಹುನಗುಂದ ಶಿಕ್ಷಕರು ಸ್ವಾಗತಿಸಿದರು. ಸಿಆರ್ಪಿ ದಾವಲಸಾಬ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಹ್ಲಾದ್ ಜಾಧವ ವಂದನಾರ್ಪಣೆ ಮಾಡಿದರು.ಪಿಡ್ಡನಗೌಡ ಹಳೇಗೌಡ ನಿರೂಪಣೆ ಮಾಡಿದರು. ಕಲಿಕಾಹಬ್ಬದ ಸಂಪನ್ಮೂಲ ವ್ಯಕ್ತಿಗಳಾಗಿ. ರಮೇಶ್ ಹುನಗುಂದ, ಪ್ರಹ್ಲಾದ್ ಜಾಧವ, ವೀರೇಶ ಮಳಗಿ, ನಾಗರಾಜ ನಾಯ್ಕ, ನೀಲಕಂಠಪ್ಪ ಕೊರ್ಲಿ ಎರಡು ದಿನಗಳ ಕಾಲ ಕಾರ್ಯ ನಿರ್ವಹಿಸಿದರು.

ವರದಿ – ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *