ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ : ಮಾಜಿ ಸಂಸದ ಶಿವರಾಮೆಗೌಡ ರವರಿಂದ 2ಎ ಸೇರಿಸಲು ಮನವಿ ಪತ್ರ ಸಲ್ಲಿಕೆ..

Spread the love

ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ : ಮಾಜಿ ಸಂಸದ ಶಿವರಾಮೆಗೌಡ ರವರಿಂದ 2ಎ ಸೇರಿಸಲು ಮನವಿ ಪತ್ರ ಸಲ್ಲಿಕೆ..

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿಯೋಗ ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ ತಾಲೂಕಿನ  ವೆಂಕಟಗಿರಿ ಮತ್ತು ಚಿಕ್ಕಮಾದಿನಾಳ ಗ್ರಾಮಗಳಲ್ಲಿ ಆಯೋಗದ ಮುಂದೆ ವೀರಶೈವ ಲಿಂಗಾಯತ  ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರದ ಪ್ರವರ್ಗ 2 ಎ ಮೀಸಲಾತಿಗೆ ಸೇರಿಸುವ ಮತ್ತು ಸಮಾಜ ಸಾಮಾಜಿಕವಾಗಿ ಹಿಂದುಳಿದಿರುವಿಕೆಯ ಸಾಮಾಜಿಕ  ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು  ಆಗಮಿಸಿ ಸಭೆಯನ್ನು ನಡೆಸಿದರು ಕರ್ನಾಟಕ ರಾಜ್ಯದಲ್ಲಿ ಪಂಚಮಸಾಲಿ ಸಮಾಜವು ಸಾಮಾಜಿಕವಾಗಿ ಅತ್ಯಂತ ಹಿಂದೆ ಉಳಿದಿದ್ದು ಸಮಾಜದ ಸಮಸ್ಯೆಗಳನ್ನು ಸಮಾಜದ ಪ್ರಸ್ತುತ ಸ್ಥಿತಿಗತಿಗಳನ್ನು ಅತ್ಯಂತ ವಿವರವಾಗಿ ವಿವರಿಸಲಾಯಿತು ಸಮುದಾಯ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ಬಂದಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರಿಗೆ ಸಮಾಜದ ಶೈಕ್ಷಣಿಕ ಸ್ಥಿತಿಯನ್ನು ಮನದಟ್ಟು ಮಾಡಲಾಯಿತು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘಘಟಕದ ವತಿಯಿಂದ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದರವಿಕೆಯನ್ನು ಸವಿವರವಾಗಿ ಮನದಟ್ಟು ಮಾಡಲಾಯಿತು. ಕನಕಗಿರಿ ತಾಲೂಕು ಚಿಕ್ಕಮಾದಿನಾಳ ಗ್ರಾಮದಲ್ಲಿ  ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ನೇತೃತ್ವದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾಜದ ಜೊತೆಗೆ ಬೇರೆ ಬೇರೆ ಸಮಾಜದವರು ಹಿಂದುಳಿದ ವರ್ಗಗಳು ಸ್ಥಿತಿ ಗತಿ ಏನೆಂಬುದನ್ನು ಗ್ರಹಿಸಿ ಅದನ್ನು ರಾಜ್ಯ ಸರ್ಕಾರಕ್ಕೆ 2ಎ ಮೀಸಲಾತಿ ಬೇಡಿಕೆಗಳ ಮನವಿ ಪತ್ರಗಳನ್ನು ಸಲ್ಲಿಸುತ್ತೇವೆ. ಇಲ್ಲಿ ಎಸ್ಸಿ ಎಸ್ಟಿ ಸೇರ್ಪಡೆ ಮಾಡುವಂತೆ ಬೇಡಜಂಗಮ, ಕುರುಬರು ಸೇರಿದಂತೆ ಇನ್ನಿತರರು ಮನವಿ ಪತ್ರ ಸಲ್ಲಿಸಿದ್ದಾರೆ ಅವುಗಳನ್ನು ಆಯಾ ಆಯೋಗವು ಇದ್ದು ತಮ್ಮ ಮನವಿ ಪತ್ರಗಳನ್ನು ಓಂ ಆಯೋಗಕ್ಕೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು.ಗಂಗಾವತಿ ತಾಲ್ಲೂಕಿನ ಹಣವಾಳ, ಆರ್ಹಾಳ, ವೆಂಕಟಗಿರಿ, ಬೆಣಕಲ್ ದಾಸಸಾಳ, ಬಸಪಟ್ಟಣ ಗ್ರಾಮಗಳ ಸೇರಿದಂತೆ ಎಲ್ಲಾರೂ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ಶಿವಪ್ಪ ಯಲಬುರ್ಗಾ ವಕೀಲರು. ಗಂಗಾವತಿ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಸಮಾಜದ ಮಾಜಿ ಅಧ್ಯಕ್ಷ ಚನ್ನವೀರನಗೌಡ ಕೋರಿ, ವೀರಶೈವ ಲಿಂಗಾಯತ ಪಂಚಮಸಾಲಿ ಜಿಲ್ಲೆ ಮಾಜಿ ಅಧ್ಯಕ್ಷ ಕಳಕನಗೌಡ ಜಮಾಪೂರ. ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಈಶಪ್ಪ , ಬಸಪಟ್ಟಣ ಬಸನಗೌಡ, ವೀರೇಶಪ್ಪ ಮಾಲಿ ಪಾಟೀಲ್, ದೇವೆಂದ್ರಪ್ಪ ದಾಸನಾಳ, ಕೊಪ್ಪಳ ಮಹಾಬಲೇಶ್ವರ, ವೀರೇಶಪ್ಪ ದಾಸವಾಳ, ವೀರೇಶ ಬೆಣಕಲ್. ರಾಜೇಶ್ ಪಾಟೀಲ್, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಗಂಗಾವತಿ ತಾಲೂಕು ಪ್ರಧಾನಕಾರ್ಯದರ್ಶಿ ಸುಭಾಶ ಚಂದೆ ತಿಪ್ಪಶೆಟ್ಟಿ ವಕೀಲರು. ಹಾಗೂ ತಾಲೂಕ ಉಪಾಧ್ಯಕ್ಷರಾದ ಬಸವರಾಜ್ ಪಾಟೀಲ್ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಗಂಗಾವತಿ ತಾಲೂಕು ಸಂಘಟನೆ ಕಾರ್ಯದರ್ಶಿ ಮಂಜುನಾಥ ಹೊಸ್ಕೇರಾ, ಮಲ್ಲಯ್ಯ ಬೆಣಕಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *