ಕೆಲ ಅನುದಾನಿತ ಶಾಲೆಗಳ ಸಮಸ್ಯೆಗಳಿಗೆ ಸ್ಪಂದಿಸುವರಾರು..!?

Spread the love

ಕೆಲ ಅನುದಾನಿತ ಶಾಲೆಗಳ ಸಮಸ್ಯೆಗಳಿಗೆ ಸ್ಪಂದಿಸುವರಾರು..!?

ನವೆಂಬರ್‌ನಲ್ಲಿ ಕನ್ನಡ ಕಹಳೆಯನ್ನು ಎಲ್ಲೆಲ್ಲೂ ಕಾಣುವುದು ಸಹಜವಾಗಿದೆ. ನಾಡು, ನುಡಿಯ ಬಗ್ಗೆ ಭಾಷಣ ನೀಡುವ ರಾಜಕಾರಣಿಗಳು, ಕನ್ನಡದ ಸಹೃದಯದವರು ಎನಿಸಿಕೊಳ್ಳುವ ಸೋ ಕಾಲ್ಡ್ ಬುದ್ಧಿಜೀವಿಗಳು.

ಶಿಕ್ಷಣವೆಂಬುದು ನಮ್ಮ ಜನ್ಮಸಿದ್ಧ ಹಕ್ಕು ಎಂದೆಲ್ಲಾ ಪ್ರತಿಪಾದಿಸುವ ನಾವೆಲ್ಲಾಂದು ಕೆಲವು ಶಾಲಾ, ಕಾಲೇಜುಗಳ ಸಮಸ್ಯೆಗಳನ್ನು ಪರಿಹರಿಸುವ ಗೋಜಿಗೆ ಹೋಗುವುದಿಲ್ಲ. ಏಕೆ..? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಸರ್ಕಾರ ಶಿಕ್ಷಣ ರಂಗಕ್ಕೆಂದೇ ಪ್ರತಿವರ್ಷ ಸುಮಾರು ಕೋಟಿಗಟ್ಟಲೇ ಹಣದ ಹೊಳೆಯನ್ನೆ ಸುರಿಸುತ್ತಿದೆ. ವಾಸ್ತವದಲ್ಲಿ ಆ ಯೋಚಿತ ಯೋಜನೆಗಳು ಹಳ್ಳ ಹಿಡಿದು ಬಿಡುತ್ತವೆ. ಆದರೆ ರಾಜ್ಯದಲ್ಲಿ ಕೆಲ ಅನುದಾನಿತ ಶಾಲೆಗಳಂಥೂ ಕೇಳುವರೆ ಇಲ್ಲವಿದೆ.ಇಂತಹ ಸಮಸ್ಯಗಳಿಗೆ ಕೊನೆಯ ಪಕ್ಷ ಸ್ಪಂದಿಸುವ ಸಣ್ಣ ಗುಣಗಾನವಿಲ್ಲದಿರುವದ ತೀರಾ ಶೋಚನೀಯ ಸಂಗಯಾಗಿದೆ.

ನಮ್ಮ ಕನ್ನಡ ಸರ್ಕಾರಿ  ಶಾಲೆಗಳ ಪರಿಸ್ಥಿತಿಯೇ ಹೀಗೆ ಎಂಬ ಭಾವನೆ ಎಲ್ಲರಿಗೂ ಮೂಡುವುದು ಸಹಜ, ಆದರೆ ಅನುದಾನಿತ ಶಾಲೆಗಳ ಪರಿಸ್ಥಿಯನ್ನು ಸಹ ತಿಳಿಯಂತೇ ತಿಳಿಯಬೇಕಾಗಿದೆ.ಕೆಲವೊಂದು ಸಂಸ್ಥೆಗಳು ಉತ್ತಮ ಹೆಸರು ಪಡೆದಿದ್ದು ಅದರ ನಿರ್ವಹಣೆಯಲ್ಲಿರುವ ಕೆಲವು ಕನ್ನಡ ಮಾಧ್ಯಮ ಶಾಲೆಗಳ ಪರಿಸ್ಥಿಯನ್ನು ಕೇಳುವವರೇ ಇಲ್ಲದಂತಾಗಿ ಅಲ್ಲಿನ ಶಾಲಾ ಮಕ್ಕಳ ಭವಿಷ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ.

ಇಂತಹ ಪರಿಸ್ಥಿಯಲ್ಲಿ ಶಾಲಾ ಮಕ್ಕಳ ಪರಿಹಾರವನ್ನು ಬಗೆಹರಿಸುವುದೆಂದು ಎಂಬ ಪ್ರಶ್ನೆಗಳು ಉದ್ಬವಿಸುವುದು ಸಹಜವಾಗಿದೆ. ನಾನು ಇಲ್ಲಿ ಒಂದು ಶಾಲೆಯ ಮಕ್ಕಳ ಸಮಸ್ಯೆಗಳ ಕುರಿತಂತೆ ಹೇಳ ಬಯಸುವೆ. ಇಲ್ಲಿನ ಮೈಸೂರು ಜಿಲ್ಲೆಯ ಪ್ರತಿಷ್ಟಿತ ನಿರ್ವಹಣೆಯ ಮಂಡಳಿಯ ಅವ್ಯವಸ್ಥೆಯ ಬಗ್ಗೆ ಹೇಳಲಾಗದೆ ಆಹೆಸರನ್ನು ಗೌಪ್ಯವಾಗಿ ಇಡಲಾಗಿದೆ. ಅಲ್ಲದೆ ಇಲ್ಲಿನ ಪ್ರಭಾವಿಶಾಲಿಗಳಾದ ರಾಜಕೀಯ ವ್ಯಕ್ತಿಯು ತನ್ನ ಎದುರಿನಲ್ಲಿರುವ ಶಾಲೆಯ ಪರಿಸ್ಥಿಯ ಬಗ್ಗೆ ಅರಿವಿಲ್ಲದಂತೆ ಇನ್ಯಾವುದೋ ಪ್ರಯೋಜನಕ್ಕೆ ಬರದ ಕೆಲಸಗಳಿಗೆ ಗಮನಹರಿಸುತ್ತಿರುವುದು ಶಾಸಕರಾಗಿ ಅಲ್ಲಿನ ಬಡವರ ಬಗ್ಗೆ, ಶಿಕ್ಷಣದ ಬಗ್ಗೆ ಗಮನ ಹರಿಸದೆ ಚುನಾವಣೆ ಕೊನೆಯ ಕ್ಷಣದಲ್ಲಿ ಅಖಾಡಕ್ಕಿಳಿದಿರುವದು ವಿಷಾದನೀಯ. ತಮ್ಮ ಹಣ ಬಲದಿಂದ ಬರುವ ಇಂತಹ ಅಪ್ರಯೋಜನಕಾರಿ ಶಾಸಕರ ಬಗ್ಗೆ ಹೇಳುವುದು ನಿಜಕ್ಕೂ ಬೇಸರದ ಸಂಗತಿ. ನಾನು ಇಲ್ಲಿ ಬರೆಯುತ್ತಿರುವ ಸತ್ಯ ಶೋಧನೆಯನ್ನು ನಡೆಸಿ ಅದರ ಬಗ್ಗೆ ಹೇಳಬಯಸುತ್ತಿರುವೆ, ಇದು ಸಾಮಾನ್ಯವಾಗಿ  ಯಾವುದೋ ಹಳ್ಳಿಯಲ್ಲೂ, ಇಲ್ಲವೋ ಕುಗ್ರಾಮದಲ್ಲಿಯೋ ಇಂತಹ ಪರಿಸ್ಥಿತಿಯನ್ನು  ಎದುರಿಸುತ್ತಿಲ್ಲ. ಬದಲಾಗಿ ನಮ್ಮ ಮೈಸೂರು ನಗರದ ಹೃದಯ ಭಾಗಕ್ಕೆ ಸೇರುವ ಬಹಳಷ್ಷಟ್ಟು ಶಾಲೆಗಳ ದುಸ್ಥಿತಿಯೇ ಹೀಗೆಯೇ ಇರಬೇಕು ಎಂಬ ಊಹೆ ನನ್ನದಾಗಿದೆ. ಇಲ್ಲಿನ ಆಡಳಿತ ಸಿಬ್ಬಂದಿ ವರ್ಗದವರು ಎಷ್ಷು ಬೇಜಾವಾಬ್ದಾರಿಯಿಂದ ಇದ್ದಾರೆ ಎಂಬುವುದಕ್ಕೆ ಕೈಗನ್ನಡಿಯಾಗಿದೆ.ಅಲ್ಲಿರುವ ಮಕ್ಕಳಿಗೆ ಪ್ರತಿ ವಾರದಲ್ಲಿ ಒಂದು ದಿನ ಪಾಠ ಹೇಳಿಕೊಡಲು ಹೋದಾಗ ಶಾಲೆಯ ಅವ್ಯವಸ್ಥೆಯನ್ನು ಕಂಡು ಮರುಗಾದೆ. ೧ ರಿಂದ ೭ ನೇ ತರಗತಿಯವರೆಗೆ ಇರುವ ಇಲ್ಲಿ ಸುಮಾರು ೧೦೦ ಹೆಚ್ಚು ಮಕ್ಕಳಿದ್ದಾರೆ. ಕೆಲವು ಮಕ್ಕಳು ಬಹಳ ಚುರುಕಾಗಿದ್ದಾರೆ, ಆದರೆ ಇಲ್ಲಿನ ಶಾಲಾ ವ್ಯವಸ್ಥೆಯನ್ನು ನೋಡಿದಾಗ ಮುಂದೆ ಈ ಮುಗ್ದ ಮಕ್ಕಳ ಭವಿಷ್ಯದ ಮೇಲೆ ಬಹಳಷ್ಷಟ್ಟು ಪರಿಣಾಮ ಬೀಳಲಿದೆ. ಅಲ್ಲಿರುವ ಮಕ್ಕಳಿಗೆ ಸರಿಯಾದ ಸಮವಸ್ತ್ರ, ಬೆಂಚ್‌, ಚೇರ್‌ ಅಂತಹ ವ್ಯವಸ್ಥೆಗಳು ಇಲ್ಲದಿರುವುದು ಖೇದಕರ. ಅಲ್ಲದೆ ಇಲ್ಲಿಗೆ ಬರುವ ಮಕ್ಕಳು ಬಡತನದ ಕುಟುಂಬಕ್ಕೆ ಸೇರಿದವರಾಗಿದ್ದು ಅವರಿಗೆ ಸರಿಯಾದ ಸೌಲಭ್ಯಗಳು ಸಿಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಕಳೆದ ೮ ವರ್ಷಗಳಿಂದಲೂ ಸಹ  ಯಾರು ಸಹ ಇಲ್ಲಿಗೆ ಬಂದ ಮಕ್ಕಳ ಬಗ್ಗೆ ವಿಚಾರಸದಿರುವುದು ವಿಷಾದಕ. ಅದರಲ್ಲೂ ಶಾಲೆಯಲ್ಲಿರುವ ಮಕ್ಕಳ ಶೌಚಾಲಯನ್ನು ನಿರ್ವಹಣೆ ಮಾಡದೆ ಸ್ವಚ್ಚತೆ ಕಾಪಾಡದಿರುವುದು, ಸರಿಯಾದ ನೀರಿನ ಸೌಲಭ್ಯ ಹಾಗೂ ಯಾವುದೇ ಕೆಲಸಗಾರು ಸಹ ಇಲ್ಲದಿರುವುದು ಚಿಕ್ಕ ಹೆಣ್ಣು ಮಕ್ಕಳ ಬಗ್ಗೆ ಪರಿಸ್ಥಿತಿ ಯೋಚಿಸಿದಾಗ ಮನಸ್ಸಿಗೆ ಆಘಾತವಾಗುವುದು. ತಮ್ಮ ಸಂಸ್ಥೆ ಎಂದೇ ಹೆಮ್ಮೆಯಿಂದ ಹೇಳುವ ಆಡಳಿತ ಮಂಡಳಿಯವರು ಮಕ್ಕಳ ಬಗ್ಗೆ ನಿರ್ಲಕ್ಷ ವಹಿಸಿರುವುದು ಯಾವ ನ್ಯಾಯ..? ಒಂದು ಸಂತಷದ ಸಂಗತಿಯೆಂದರೆ ಇಲ್ಲಿರುವ ಮಕ್ಕಳಿಗೆ ಇಸ್ಕಾನ್‌ ಇಂದ ಉಚಿತ ಊಟ ಹಾಗೂ ಹಾಲು ದೊರೆಯುತ್ತಿರುವುದು ಬಿಟ್ಟರೆ, ಯಾವುದೇ ಪ್ರಗತಿಯನ್ನು ಕಾಣದೆ ಅಲ್ಲಿರುವ ಶಿಕ್ಷಕರು ಸಹ ಅಸಹನೀಯ ಪರಿಸ್ಥಿತಿಯಲ್ಲಿದ್ದಾರೆ. ಅದೇ ಶಾಲೆಯಲ್ಲಿ ಮತ್ತೊಂದು ಬೇರೆ ಕಾಲೇಜನ್ನು ಅಚ್ಚು ಕಟ್ಟಾಗಿ ನಿರ್ಮಿಸುತ್ತಿರುವ ಆಡಳಿತ ಮಂಡಳಿಯವರು, ಅದೇ ಕಟ್ಟದಲ್ಲಿ  ಮೈದಾದಲ್ಲಿ ಮಕ್ಕಳು ಆಟವಾಡಲು ಸಾಧ್ಯವಾಗದೆ ಹುಲ್ಲುಗಾವಲು ಬೆಳೆದು ನಿಂತಿದೆ. ಒಟ್ಟಿನಲ್ಲಿ ಅವ್ಯವಸ್ಥೆಯ ತಾಣವಾಗಿದೆ. ಇದನ್ನು ಪ್ರಶ್ನಿಸಲು ಹೋದರೆ ನಿಮಗ್ಯಾಕೆ ನಿಮ್ಮ ಕೆಲಸ, ಪಾಠ ಹೇಳಿ ಮುಗಿಸಿಕೊಂಡು ಹೋಗಿ ಎನ್ನುತ್ತಾರೆ ಆಡಳಿತ ಮಂಡಳಿಯವಯರು.ಇತರರು ಗಮನಿಸಿದರೆ ದರ್ಪದ ಮಾತಾನ್ನಾಡುತ್ತಾರೆ. ಇದು ಒಂದು ಶಾಲೆಯ ಪರಿಸ್ಥಿಯಲ್ಲ ಇಂತಹ ಅದೆಷ್ಷೂ ಶಾಲೆಗಳು ಇಂತಹ ಪರಿಸ್ಥಿಯನ್ನು ಎದುರಿಸುತ್ತಿದೆಯೋ..? ಆದರೆ ಈ ಮಕ್ಕಳಿಗೆ ಯಾವುದೇ ಸೌಲಭ್ಯಗಳಿಲ್ಲದಿರುವುದು ಮಾತ್ರ ವಿಷಾದನೀಯವಾಗಿದೆ. ಶಿಕ್ಷಣ ಇಲಾಖೆ ಈ ಕುರಿತು ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.

ವಿಶೇಷ ಲೇಖನ -ಜ್ಯೋತಿ ಜಿ ಮೈಸೂರು. (ಸಾಮಾಜಿಕ ಹೋರಾಟಗಾರ್ತಿ)

Leave a Reply

Your email address will not be published. Required fields are marked *