ನಾಡಿನಾದ್ಯಂತ  ಅದ್ದೂರಿಯಾಗಿ ಜರುಗಿದ ಕೋಟಿ ಕಂಠ ಗಾಯನ…….

Spread the love

ನಾಡಿನಾದ್ಯಂತ  ಅದ್ದೂರಿಯಾಗಿ ಜರುಗಿದ ಕೋಟಿ ಕಂಠ ಗಾಯನ…….

ಯಲಬುರ್ಗಾ : ಕರ್ನಾಟಕ ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಹಾಗೂ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಆದೇಶದಂತೆ ಕರ್ನಾಟಕ ರಾಜ್ಯಾದ್ಯಂತ ಆಯೋಜಿಸಲಾದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನ ಕಳೆದ ವರ್ಷ ಮಾತಾಡ್ ಮಾತಾಡ್ ಕನ್ನಡ ಎಂಬ ಘೋಷ ವಾಕ್ಯದಲ್ಲಿ ಆಯೋಜಿಸಿದ ರಕ್ಷ ಕಂಠ ಗಾಯನಕ್ಕೆ ನಾಡಿನಾದ್ಯಂತ ವ್ಯಾಪಕ ಪ್ರಶಂಸು ವ್ಯಕ್ತವಾಗಿತ್ತು ಈ ಬಾರಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೋಟಿ ಕಂಠ ಗಾಯನ ನಡೆಸಲಾಗಿದೆ. ಯಲಬುರ್ಗಾ ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಕನ್ನಡ ನುಡಿಯ ಹಾಡುಗಳನ್ನು ಹಾಡುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಸದರಿ ಕಾರ್ಯಕ್ರಮವನ್ನು ಜಿಲ್ಲಾ ಉಪ ವಿಭಾಗಾಧಿಕಾರಿಗಳಾದ ಬಸವಣ್ಣಪ್ಪ ಕಲಶೆಟ್ಟಿ ಅವರು ಉದ್ಘಾಟಿಸಿ, ಕನ್ನಡ ನಾಡು ನುಡಿ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ನಗರದ ವಿವಿಧ ಶಾಲೆಯ ಮಕ್ಕಳು ಎಲ್ಲರೂ ಕನ್ನಡ ನೆಲ ಜಲದ ಒಳಿತಿಗೆ ಶ್ರಮಿಸೋಣ ಎಂದು ಶಪತ ಮಾಡುವ ಮೂಲಕ ಕನ್ನಡ ನಾಡ ಗೀತೆ ಹಾಡಿ ಗೌರವ ಸೂಚಿಸಲಾಯಿತು.ತಾಲೂಕಿನ ಮುಧೋಳ ಗ್ರಾಮದಲ್ಲಿ ಕೂಡ ತ್ರಿಲಿಂಗ ಬಸವೇಶ್ವರನ ದೇವಸ್ಥಾನದ ಆವರಣದಲ್ಲಿ ಕೋಟಿ ಕಂಠ ಗಾಯನದಲ್ಲಿ ಎಲ್ಲಾ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಮರೇಶ್ ಹುಬ್ಬಳ್ಳಿ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಳಕಪ್ಪ ಯಲಬುರ್ಗಾ ತಹಶೀಲ್ದಾರ್ ಶ್ರೀಶೈಲ್ ತಳವಾರ್. ತಾಲೂಕ್ ಪಂಚಾಯಿತಿ ಸಂತೋಷ್ ಬಿರಾದಾರ್. ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭಂ. ಮಾಜಿ ತಾ. ಪಂ. ಶಕುಂತಲಾ ದೇವಿ ಮಾಲಿ ಪಾಟೀಲ್. ಪಟ್ಟಣ ಪಂಚಾಯತಿ ಸರ್ವ ಸದಸ್ಯರು. ವಿವಿಧ ಪರ ಕನ್ನಡ ಸಂಘಟನೆಗಳು. ಸಂಗೀತ ಕಲಾವಿದರು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮವ್ವ ಎ ವಡ್ಡರ. ಅಭಿವೃದ್ಧಿ ಅಧಿಕಾರಿಗಳಾದ ರವಿಕುಮಾರ್ ಲಿಂಗಣ್ಣನವರ್ ಗ್ರಾಪಂ ಸರ್ವ ಸದಸ್ಯರು ಎಲ್ಲಾ ಶಾಲೆಯ ಶಿಕ್ಷಕ ಶಿಕ್ಷಕಿಯರು. ಹಾಗೂ ಮಕ್ಕಳು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *