ಶ್ರೀ ರುದ್ರಮುನಿ ಜಿನ್ನಿಂಗ್ ಫ್ಯಾಕ್ಟರಿಯಿಂದ ಚನ್ನಬಸವ ಸ್ವಾಮಿಗಳಿಗೆ ತುಲಭಾರ ಕಾರ್ಯಕ್ರಮ…..

Spread the love

ಶ್ರೀ ರುದ್ರಮುನಿ ಜಿನ್ನಿಂಗ್ ಫ್ಯಾಕ್ಟರಿಯಿಂದ ಚನ್ನಬಸವ ಸ್ವಾಮಿಗಳಿಗೆ ತುಲಭಾರ ಕಾರ್ಯಕ್ರಮ…..

ನಾವು ಗಳಿಸಿದ ಆಸ್ತಿ ಅಂತಸ್ತು ಬೆಳ್ಳಿ-ಬಂಗಾರ ಇವುಗಳು ಯಾವುದು ಶಾಶ್ವತವಲ್ಲ ಬದಲಾಗಿ ಗಳಿಸಿದ ಹಣವನ್ನು ದಾನ ಧರ್ಮ ಉಪಕಾರ ಮಾಡುವುದರ ಮೂಲಕ ಈ ಸಮಾಜದ ಋಣವನ್ನು ತೀರಿಸಬೇಕೆಂದು ಶ್ರೀ ಚನ್ನಬಸವ ಮಹಾಸ್ವಾಮಿಗಳು ಶಿವಯೋಗ ಮಂದಿರ ನಿಡುಗುಂದಿ ಕೊಪ್ಪ ಹೇಳಿದರು. ಯಲಬುರ್ಗಾ : ತಾಲೂಕಿನ ಮುಧೋಳ ಗ್ರಾಮದಲ್ಲಿ ದೀಪಾವಳಿ ಬಲಿಪಾಡ್ಯಮಿ ನಿಮಿತ್ಯವಾಗಿ ದೀಪ ಬೆಳಗಿಸುವುದರ ಮೂಲಕ ಚನ್ನಬಸವ ಮಹಾಸ್ವಾಮಿಗಳು ಶಿವಯೋಗ ಮಂದಿರ ನಿಡುಗುಂದಿ ಕೊಪ್ಪ ಇವರಿಗೆ ತುಲಭಾರ ಕಾರ್ಯಕ್ರಮ ಜರಗಿತು. ಶ್ರೀ ರುದ್ರಮುನಿ ಜಿನ್ನಿಂಗ್ ಫ್ಯಾಕ್ಟರಿ 20 ವರ್ಷಗಳಿಂದ ದಾನ ಧರ್ಮದಲ್ಲಿ ಒಂದು ಕೈಯಿಂದ ಎನ್ನುತ್ತಾ ದಿವಂಗತರಾದ  ರೇಣುಕಮ್ಮ ಶರಣಪ್ಪ ಕಜ್ಜಿ ಇವರ ಹಿರಿಯ ಮಗನಾದ ಗುಡದಿರಪ್ಪ ಕಜ್ಜಿ ಸೋಹೋದರ ಅಶೋಕ್ ಕಜ್ಜಿ ಇವರ ನೇತೃತ್ವದಲ್ಲಿ ನಡೆದ ತುಲಾಭಾರ ಮತ್ತು ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ದೇಶವನ್ನೇ ಗರ್ಜಿಸುವಷ್ಟು ಶ್ರೀಮಂತರು ಇದ್ದಾರೆ ಆದರೆ ಅವರಿಗೆ ತಿನ್ನಲಿಕ್ಕೆ ಬಾಯಿ ಇಲ್ಲ ಅನಾರೋಗ್ಯ ಅವರನ್ನು ಕಾಡುತ್ತಿವೆ ಆದ್ದರಿಂದ ಇಂದಿನ ದಿನಮಾನಗಳಲ್ಲಿ ಕಜ್ಜಿ ಸಹೋದರರು ಮಾಡುವಂತಹ ದಾನ ಗುಣಗಳು ಸ್ವಾಗತಾರ್ಹ ಎಂದು ತುಲಾಭಾರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಮಾಜಿ ತಾಲೂಕ್ ಪಂಚಾಯ್ತಿ ಸದಸ್ಯ ಶರಣಪ್ಪ ಇಳಿಗೆರ್ ಅವರು ಮಾತನಾಡಿ ಕೇವಲ ದುಡಿಮೆ ಯಾಗಬಾರದು ದುಡಿಮೆಯ ಜೊತೆಗೆ ದಾನ ಧರ್ಮ ಕೂಡ ಒಂದು ಶ್ಲಾಘನೀಯವಾಗಿದೆ ಎಂದರು. ನಂತರ ನಿವೃತ್ತ ಶಿಕ್ಷಕರು ಸಿ ಆರ್ ಕಜ್ಜಿ ಅವರು ಮಾತನಾಡಿದರು, ಗ್ರಾಮದ ಹಿರಿಯ ವಿಶ್ರಾಂತಿ ಜೀವಿಗಳ ನೌಕರ ನಿವೃತ್ತರಿಗೆ ಸನ್ಮಾನ ಮಾಡಿದರು. ಹಾಗೂ ಪತ್ರಿಕಾ ಮಾಧ್ಯಮದವರಿಗೂ ಸನ್ಮಾನ ಮಾಡಿದರು. ನಂತರ ಶ್ರೀ ರುದ್ರಮುನಿ ಜಿನ್ನಿಂಗ್ ಫ್ಯಾಕ್ಟರಿ ಮಾಲಕರಾದ ಗುಡದಿರಪ್ಪ ಕಜ್ಜಿ ದಂಪತಿಗಳಿಗೆ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶಿವ ಶರಣಪ್ಪ ಬಳೆಗಾರ ನಿರೂಪಣೆ ಮಾಡಿದರು. ಇದೇ ಸಮಾರಂಭದಲ್ಲಿ ಮುಖಂಡರಾದ ರತನ ದೇಸಾಯಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರು. ಉಮೇಶಪ್ಪ ವಿವೇಕಿ. ಚಂದ್ರು ದೇಸಾಯಿ. ಶರಣಪ್ಪ ಹಲಗೇರಿ. ಸಿದ್ದರಾಮಪ್ಪ ದೇಸಾಯಿ ಪ್ರಸಿದ್ದಪ್ಪ ಸಿಳ್ಳಿನ ಡಾ,ಎ ಎಸ್ ಬಾವಿಕಟ್ಟಿ. ಲಾಲಸಾಬ್ ಆರಾಬಳ್ಳಿನ್. ಜೆ ಸಿ ಬಳಿಗಾರ್. ಸಂಗೀತ ಬಳಗದ ಕಲಾವಿದರಿಗೆ ಸನ್ಮಾನ ಮಾಡಿದರು  ಮಲ್ಲಯ್ಯ ಮಾದಿನೂರು ಮಠ. ಉಪಸ್ಥಿತರಿದ್ದ ಜಿನ್ನಿಂಗ್ ಫ್ಯಾಕ್ಟರಿ ಕೂಲಿ ಕಾರ್ಮಿಕರು ಹಾಗೂ ಸುತ್ತಮುತ್ತಲ ಗ್ರಾಮದವರು  ಸಾರ್ವಜನಿಕರು ಭಾಗವಹಿಸಿದ್ದರು.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *