ಸರ್ಕಾರಿ ಪ್ರೌಢ ಶಾಲೆ ಜುಮಲಾಪುರ ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿರುವ ‘ಚಿಗುರು’ ಪುಸ್ತಕಗಳನ್ನು ವಿತರಿಸಲಾಯಿತು.

Spread the love

ಸರ್ಕಾರಿ ಪ್ರೌಢ ಶಾಲೆ ಜುಮಲಾಪುರ ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿರುವ ‘ಚಿಗುರು’ ಪುಸ್ತಕಗಳನ್ನು ವಿತರಿಸಲಾಯಿತು.

ತಾವರಗೇರಾ ಹೋಬಳಿಯ ಸಮೀಪದ ಸರ್ಕಾರಿ ಪ್ರೌಢ ಶಾಲೆ ಜುಮಲಾಪುರ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿರುವ ‘ ಚಿಗುರು’  ಪುಸ್ತಕಗಳನ್ನು  ವಿತರಿಸಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀ ಕನಕಪ್ಪ ನಾಯಕ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಶ್ರೀ ಮಹಾದೇವಪ್ಪ ಗಂಗಾಮತ ಶ್ರೀ ನಿರುಪಾದೆಪ್ಪ ಹರಿಜನ  ಶ್ರೀ ಅಮರೇಶ ಕುಷ್ಟಗಿ ಶ್ರೀ ಬಸವರಾಜ ಮೇಟಿ ಶ್ರೀ ಗ್ಯಾನಪ್ಪ ಕುರಿ ಶ್ರೀಮತಿ ಪದ್ಮಾ ನಾಯಕ್ ಶ್ರೀಮತಿ ಯಲ್ಲಮ್ಮ ಹಾಗೂ ಬಸವರಾಜ ರಾಟಿ ನಾಗರಾಜ ಊರಾಳ ಭಾಗವಹಿಸಿದ್ದರು.  ಶಾಲಾ ಮುಖ್ಯ ಗುರುಗಳಾದ ಶ್ರೀ ಸೋಮನಗೌಡ ಪಾಟೀಲ್ ಮಾತನಾಡಿ ವಿದ್ಯಾರ್ಥಿನಿಯರು ಉಚಿತ ಸಮವಸ್ತ್ರಗಳನ್ನು ತಕ್ಷಣವೇ ತಯಾರು ಮಾಡಿಕೊಂಡು ಶಾಲೆಗೆ ಕಡ್ಡಾಯವಾಗಿ ಧರಿಸಿಕೊಂಡು ಬರುವುದು ಹಾಗೂ ‘ ಚಿಗುರು ‘ ಪುಸ್ತಕಗಳನ್ನು ಅಭ್ಯಸಿಸಿ ಸದುಪಯೋಗಪಡಿಸಿಕೊಳ್ಳಲು ಹಾಗೂ ಪರೀಕ್ಷಾ ದೃಷ್ಟಿಯಿಂದ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಸಹಾಯಕ ವಾಗುತ್ತಿರುವ ‘ಚಿಗುರು’ ಪುಸ್ತಕಗಳನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಲು ಹತ್ತನೇ ತರಗತಿಯ  ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .ಸಮಾಜ ವಿಜ್ಞಾನ ಶಿಕ್ಷಕಿ ಅಕ್ಕಮ್ಮ ಅರಳಿಕಟ್ಟಿ ಸ್ವಾಗತಿಸಿದರು .ಹಾಗೂ ಕನ್ನಡ ಭಾಷಾ ಶಿಕ್ಷಕರಾದ  ಚಿದಾನಂದಪ್ಪ ಕಂದಗಲ್ ಶಿಕ್ಷಕರು ವಂದಿಸಿದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *