ಕಡ್ಡಾಯ ಕನ್ನಡ ಬಳಕೆ, ಖಾಸಗಿ ಕಛೇರಿ, ಶಾಲೆ,ಕಾಲೇಜುಗಳಿಗೂ ಅನ್ವಯವಾಗಲಿ.

Spread the love

ಕಡ್ಡಾಯ ಕನ್ನಡ ಬಳಕೆ, ಖಾಸಗಿ ಕಛೇರಿ, ಶಾಲೆ ,ಕಾಲೇಜುಗಳಿಗೂ ಅನ್ವಯವಾಗಲಿ.

ಇನ್ನೇನು ನವೆಂಬರ್‌ ಬಂತೆಂದರೆ ಎಲ್ಲಲ್ಲಿಯೂ ಕನ್ನಡದ ಇಂಪು ಕೇಳಿಸುವುದು, ಸುಮಧುರ ಗೀತೆಗಳು ಕನ್ನಡ ಎಂದು ಘೋಷಣೆ ಕೋಗುತ್ತಾ ಎಲ್ಲಡೆಯಲ್ಲಿಯೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ…. ಕನ್ನಡದ ಹೆಸರಾಂತ ಕವಿಗಳಾದ ನೆಮ್ಮೆಲ್ಲರ ಕುವೆಂಪು ಹಾಡಿನ ರಚನೆ ಬರೆದರೆ ಇದಕ್ಕೆ ಉತ್ತಮ ಸ್ವರ ನೀಡಿ ಅದಕ್ಕೆ ಮತ್ತಷ್ಟು ಮಹತ್ವ ತಂದವರು ಡಾ.ರಾಜ್ ಕುಮಾರ್ ರವರು … ಎಲ್ಲಾದರು ಇರು; ಎಂತಾದರು ಇರು ..ಎಂದೆಂದಿಗು ನೀ ಕನ್ನಡವಾಗಿರು. ..ಕನ್ನಡ ಗೋವಿನ ಓ ಮುದ್ದಿನ  ಕರು,…ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು! ಎಷ್ಟು ಸೊಗಸಾಗಿ ಬರೆದಿದ್ದಾರೆ ನಮ್ಮ ಕವಿಗಳು ನಿಜಕ್ಕೂ ಹೆಮ್ಮೆಯ ವಿಷಯವೇ ಆಗಿದೆ… ಬರೀ ಕೇವಲ ನವೆಂಬರ್‌ ಗೆ ಸೀಮಿತವಾಗದೆ ಪ್ರತಿ ನಿತ್ಯವೂ ನಾವು ಕನ್ನಡ ಭಾಷೆಯನ್ನು ಬಳಸಬೇಕು… ನಾವು ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ,ಕಛೇರಿಗಳಲ್ಲಿ, ನಾವು ಕನ್ನಡವನ್ನು ಬಳಸುತ್ತೇವೆ. ಆ ಮಕ್ಕಳಿಗೆ ಕನ್ನಡ ಭಾಷೆ ಸುಲಲಿತ ಅದೆ ನಾವು ಖಾಸಗಿ ಶಾಲಾ ಮಕ್ಕಳಿಗೆ ಕೇಳಿದರೆ ಕನ್ನಡ ಭಾಷೆಯು ಕಬ್ಬಿಣದ ಕಡಲೆ, ಅದಕ್ಕೆಯಂತಲೇ ಇಂಟರ್‌ ನ್ಯಾಷನಲ್‌ ಸ್ಕೂಲ್ ಹಾಗೂ ಕಾಲೇಜುಗಳಲ್ಲಿ ಹಲವಾರು ಐಚ್ಚಿಕ ವಿಷಯಗಳಿರುವುದರಿಂದ ಅವರಿಗೆ ಕನ್ನಡ ಕಡ್ಡಾಯ ವಾಗಿರುವುದಿಲ್ಲ ಅಲ್ಲದೆ ಮನೆಯ ವಾತವರಣವು ಬೇರೆ ಭಾಷೆಗಳನ್ನೇ ಮಾತನಾಡುತ್ತಾರೆ…ಇನ್ನು ಕನ್ನಡ ಕಡ್ಡಾಯ ಹೇಗೆ ಸಾದ್ಯ ಇನ್ನೂ ಸಮಾರಂಭಗಳಂತೂ ಕನ್ನಡ ಕಾಣುವುದೇ ಇಲ್ಲ..ಮಾತನಾಡಿದರೂ ಅದು ಮಕ್ಕಳಿಗೆ ಅರ್ಥವಾಗುವುದಿಲ್ಲ.. ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ನೀನು ಇಂಗ್ಲೀಷ್‌ ಮೀಡಿಯಮ್ ನಲ್ಲಿ ಓದುತ್ತಿರುವುದು.. ಎಂದು ಹೇಳುತ್ತಾರೆ… ಇನ್ನೂ ಹೇಗೆ ತಾನೆ ಸಾದ್ಯ ಕನ್ನಡ ಬೆಳೆಯಲು , ನಮ್ಮ ಕರ್ನಾಟಕದಲ್ಲಿಯೇ ಬೆಂಗಳೂರಿನಲ್ಲಿ ಸರಿಯಾಗಿ ಕನ್ನಡ ಮಾತನಾಡಲು ಬಂದರೂ ಬಳಸುವುದಿಲ್ಲ.. ಇನ್ನೂ ಪ್ಲೇಸ್ಕ್ ಗಳ ಬಗ್ಗೆ ಹೇಳತೀರದು…ಇನ್ನೂ ಶಾಪ್ ಗಳಲಂತೂ ಕನ್ನಡ ಕಾಣುವುದು ಅಪರೂಪವಾಗಿದೆ. ಸರ್ಕಾರಿ ಹುದ್ದೆಯಲ್ಲಿರುವ ಎಲ್ಲ ನೌಕರರು ಮಕ್ಕಳನ್ನು ಸರ್ಕಾರಿ ಮಾದ್ಯಮದಲ್ಲಿ ಓದಿಸದೆ ಇಂಗ್ಲೀಷ್‌ ಮೀಡಿಯಂನಲ್ಲಿಯೇ ಓದಿಸುವ ಪ್ಯಾಸನ್‌ ಹೆಚ್ಚಾಗಿ ಹೋಗಿದೆ ಇನ್ನೂ ಗ್ರಾಮೀಣದ ಜನರಲ್ಲಿಯೂ ಬಹುತೇಕರು ಬೇರೆ ರಾಜ್ಯಗಳಿಂದ ಬಂದವರಾಗಿದ್ದು ಕನ್ನಡ ಬಳಸುವುದೇ ಅಪರೂಪವಾಗುತ್ತಿದೆ . ಅದೇನೆ ಇರಲಿ ಕರ್ನಾಟಕದಲ್ಲಿ ಬಂದ ಮೇಲೆ ಕನ್ನಡದಲ್ಲಿಯೇ ವ್ಯವಹರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ . ಅಭಿವೃದ್ದಿ ಹೊಂದಿರುವ ದೇಶಗಳಾದ ಚೀನಾ,ಜಪಾನ್‌,ದುಬೈ,ಅರಬ್‌ ದೇಶಗಳಲ್ಲಿ ತಮ್ಮ ಭಾಷೆಗೆ ಪ್ರಾಧ್ಯನ್ಯತೆ ಕೊಡುವಾಗ ನಮ್ಮ ನೆರೆ ಹೊರೆ ರಾಜ್ಯಗಳಾದ ತಮಿಳುನಾಡು, ಕೇರಳದಲ್ಲಿಯೂ ಭಾಷೆಗೆ ಹೆಚ್ಚಿನ ಪ್ರಾಧ್ಯನ್ಯತೆಯನ್ನು ಕೊಡುತ್ತಾರೆ . ಆದರೆ ನಾವು ಎಲ್ಲರಿಗೂ ಆಶ್ರಯ ನೀಡುವಾಗ ನಮ್ಮ ಕರ್ನಾಟಕದಲ್ಲಿ ಮಾತ್ರ ಭಾಷೆಯು ಎಲ್ಲೂ ಮರಿಚೀಕೆಯಾಗುತ್ತದೆ ಕನ್ನಡ ಮಾತನಾಡುವವರು ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಇತರ ಎರಡು ಜಿಲ್ಲೆಗಳು ಉತ್ತರ ಕನ್ನಡ ಮತ್ತು ಬೀದರ್. ಹಾಗೂ ಮೈಸೂರು ಮಂಡ್ಯ,ಕೊಡಗು ಅಲ್ಲದೆ 5 ನೇ ಶತಮಾನದ ಕದಂಬ ಲಿಪಿಯಿಂದ ವಿಕಸನಗೊಂಡ ಕನ್ನಡ ಲಿಪಿಯನ್ನು ಬಳಸಿಕೊಂಡು ಕನ್ನಡ ಭಾಷೆಯನ್ನು ಬರೆಯಲಾಗಿದೆ. ಕನ್ನಡವು ಸುಮಾರು ಒಂದೂವರೆ ಸಹಸ್ರಮಾನಗಳ ಕಾಲ ಶಾಸನಾಧಾರಿತವಾಗಿ ದೃಢೀಕರಿಸಲ್ಪಟ್ಟಿದೆ ಮತ್ತು 6 ನೇ ಶತಮಾನದ ಗಂಗಾ ರಾಜವಂಶದಲ್ಲಿ ಮತ್ತು 9 ನೇ ಶತಮಾನದ ರಾಷ್ಟ್ರಕೂಟ ರಾಜವಂಶದ ಅವಧಿಯಲ್ಲಿ ಸಾಹಿತ್ಯಿಕ ಹಳೆಯ ಕನ್ನಡವು ಪ್ರವರ್ಧಮಾನಕ್ಕೆ ಬಂದಿತು.ಕನ್ನಡವು ಸಾವಿರ ವರ್ಷಗಳ ಅವಿಚ್ಛಿನ್ನ ಸಾಹಿತ್ಯಿಕ ಇತಿಹಾಸವನ್ನು ಹೊಂದಿದೆ. ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ನೀಡಲಾಗಿದೆ, ಯಾವುದೇ ದ್ರಾವಿಡ ಭಾಷೆಗೆ ಅತ್ಯಧಿಕ ಮತ್ತು ಯಾವುದೇ ಭಾರತೀಯ ಭಾಷೆಗೆ ಎರಡನೇ ಅತ್ಯುನ್ನತ ಪ್ರಶಸ್ತಿಗಳು. ದೊರಕಿಲ್ಲ ಇದು ಎಲ್ಲ ಕನ್ನಡಿಗರು ಹೆಮ್ಮೆ ಪಡುವ ವಿಷಯವಾಗಿದೆ  ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯವನ್ನು ೯ನೇ ಶತಮಾನದಲ್ಲಿಯೇ  ನೃಪತುಂಗನ ಕವಿರಾಜಮಾರ್ಗದಿಂದ ಪ್ರಾರಂಭವಾಯಿತು  ಮತ್ತು ಪಂಪನ ಭರತವು ಅನುಸರಿಸಿತು. ಆರಂಭಿಕ ವ್ಯಾಕರಣವನ್ನು ೧೨ನೇ ಶತಮಾನದ  ನಾಗವರ್ಮನಿಂದ ಮುಂದುವರೆದು ಈಗಲೂ  ಕೇಶಿರಾಜನ  ವ್ಯಾಕರಣವನ್ನು ಗೌರವಿಸಲಾಗುತ್ತದೆ. ಇನ್ನೂ 20 ನೇ ಶತಮಾನದ ಆರಂಭದಲ್ಲಿ, “ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹ” ಎಂದು ಪರಿಗಣಿಸಲ್ಪಟ್ಟ ಬಿ.ಎಂ. ಶ್ರೀಕಂಠಯ್ಯ (‘ಬಿ. ಎಂ. ಶ್ರೀ’) ಅವರು ಪ್ರಾಚೀನ ಕನ್ನಡ ರೂಪಗಳಿಂದ ದೂರ ಸರಿಯುತ್ತಿರುವಾಗ ಆಧುನಿಕ ಕನ್ನಡದಲ್ಲಿ ಮೂಲ ಕೃತಿಗಳನ್ನು ಬರೆಯುವ ಹೊಸ ಯುಗಕ್ಕೆ ಕರೆಯನ್ನು ನೀಡುವ ಮೂಲಕ ಹೊಸ ಕ್ರಾಂತಿಗೆ ನಾಂದಿಯಾಯಿತು ನಂತರ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್‌ನ ನಿರ್ದೇಶಕ ಉದಯ ನಾರಾಯಣ ಸಿಂಗ್, 2006 ರಲ್ಲಿ ಭಾರತ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸುವ ಮೂಲಕ  ಕನ್ನಡವನ್ನು ಭಾರತದ ಶಾಸ್ತ್ರೀಯ ಭಾಷೆಯನ್ನಾಗಿ ಮಾಡಬೇಕೆಂದು ವಾದಿಸಿದರು. ಅದರ ಫಲವಾಗಿ 2008 ರಲ್ಲಿ ಭಾರತ ಸರ್ಕಾರವು ಕನ್ನಡವನ್ನು ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿ ಗುರುತಿಸಬೇಕೆಂದು ಘೋಷಿಸಿದರು ತದನಂತರ ಸಂಸ್ಕೃತಿ ಸಚಿವಾಲಯವು  ಭಾಷಾ ತಜ್ಞರನ್ನು ನೇಮಿಸುವುದರ ಮೂಲಕ  ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಭಾರತ ಸರ್ಕಾರವು ಕನ್ನಡವನ್ನು ಭಾರತದ ಶಾಸ್ತ್ರೀಯ ಭಾಷೆಯಾಗಿ ಗೊತ್ತುಪಡಿಸಿ ಜುಲೈ 2011 ರಲ್ಲಿ, ಭಾಷೆಗೆ ಸಂಬಂಧಿಸಿದಂತೆ ಸಂಶೋಧನೆಗೆ ಅನುಕೂಲವಾಗುವಂತೆ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಭಾಗವಾಗಿ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಯಿತು. 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ  ಸುಮಾರು 3.61% ರಷ್ಟಿರುವ ಸುಮಾರು 4,37,06,512 ಕನ್ನಡ ಮಾತನಾಡುವ ಜನರೊಂದಿಗೆ ಗಮನಾರ್ಹ ಸಂಖ್ಯೆಯ ಕನ್ನಡಿಗರನ್ನು ಇತರ ರಾಜ್ಯಗಳಲ್ಲಿ ಕಾಣಬಹುದು. ಅಲ್ಲದೆ, ಕರ್ನಾಟಕದಲ್ಲಿ 12.9 ಮಿಲಿಯನ್‌ಗೂ ಹೆಚ್ಚು ಮಾತೃಭಾಷಿಕರಿದ್ದಾರೆ ಹೀಗೆ ಇಷ್ಟೂಂದು ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಕನ್ನಡ ಭಾಷೆಗೆ ಇದೇ ತಿಂಗಳಲ್ಲಿ ಸದನದಲ್ಲಿ ಕನ್ನಡ ಬಳಕೆ ಕಡ್ಡಾಯ ಹಾಗೂ ಬಳಸದಿದ್ದರೆ ಜೈಲು ಶಿಕ್ಷೆ ಎಂದು ಸನ್ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದಾರೆ  ಇದು ನಿಜಕ್ಕೂ ಎಲ್ಲ ಕನ್ನಡಿಗರಿಗೂ ಖುಷಿಯ ಸಂಗತಿ ಆದರೆ ವಾಸ್ತವದಲ್ಲಿ ಬೆಂಗಳೂರಿನಲ್ಲಿಯೇ ಸರ್ಕಾರಿ ಕಛೇರಿಗಳಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ಸಹ ಬಳಕೆಯಾಗದಿರುವುದು ವಿಷಾದನಿಯ ಸಂಗತಿಯಾಗಿದೆ ಕನ್ನಡ ಮಾತನಾಡುವುದೇ ವಿರಳವಾಗಿರುವಾಗ ಇಂತಹ ಕಾನೂನುಗಳನ್ನು ಕಟ್ಟು ನಿಟ್ಟಾಗಿ ತಂದಾಗ ಮಾತ್ರ  ಖಾಸಗಿ ವಲಯಗಳಲ್ಲಿ ಎಲ್ಲ ವರ್ಗದವರು ಕನ್ನಡದಲ್ಲಿಯೇ ಸುಲಭವಾಗಿ ವ್ಯವಹರಿಸಬಹುದು ….  ಸಿಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ, –

ವಿಶೇಷ ಲೇಖನ :- ಜ್ಯೋತಿ ಜಿ,ಮೈಸೂರು (ಸಾಮಾಜಿಕ ಹೋರಾಟಗಾರ್ತಿ)

 

Leave a Reply

Your email address will not be published. Required fields are marked *