ಮುಧೋಳ ಅಮೃತ ಸರೋವರದ ಕೆರೆ ದಡದಲ್ಲಿ ಮಾಜಿ ಸೈನಿಕರಿಂದ 75 ನೇ ಸ್ವಾತಂತ್ರ್ಯ ಮಹೋತ್ಸವದ ಧ್ವಜಾರೋಹಣ..

Spread the love

ಮುಧೋಳ ಅಮೃತ ಸರೋವರದ ಕೆರೆ ದಡದಲ್ಲಿ ಮಾಜಿ ಸೈನಿಕರಿಂದ 75 ನೇ ಸ್ವಾತಂತ್ರ್ಯ ಮಹೋತ್ಸವದ ಧ್ವಜಾರೋಹಣ..

ಯಲಬುರ್ಗಾ : ಅಮೃತ ಸರೋವರ ಯೋಜನೆ ಅಂತರ್ಜಲ ಮೂಲಗಳನ್ನು ಅಭಿವೃದ್ಧಿಗೊಳಿಸುವುದು ಅಂತರ್ಜಲ ಚೇತನ ಹೆಚ್ಚಿಸಿ, ನೀರಿನ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಅಮೃತ ಸರೋವರ ಕೆರೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಮಾಜಿ ಸೈನಿಕರಾದ ವಿರೂಪಾಕ್ಷಪ್ಪ ಅಕ್ಕಿ ರವರು ಹೇಳಿದರು. ತಾಲೂಕಿನ ಮುಧೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರ ಕೆರೆ ದಡದಲ್ಲಿ ಆಯೋಜಿಸಲಾದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಗ್ರಾಮೀಣ ಭಾಗದಲ್ಲಿನ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಅಮೃತ ಸರೋವರ ಯೋಜನೆಯಡಿ ಸರೋವರ ಅಭಿವೃದ್ಧಿ ಪಡಿಸಲಾಗಿದ್ದು. ಇದರಿಂದ ಗ್ರಾಮೀಣ ಭಾಗದಲ್ಲಿನ ಜಲಭದ್ರತೆ, ನೀರಿನ ಬವಣೆಯನ್ನು ನಿಭಾಯಿಸಲು ಸಹಕಾರಿಯಾಗುತ್ತದೆ ಎಂದರು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಎಲ್ಲಾ ಮಹಾನ್ ಚೇತನರಿಗೆ ಇಂದು ನಾವು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ದೇಶಕ್ಕಾಗಿ ಹೋರಾಡಿದ ಮಹಾನ್ ಚೇತನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಇಂದಿನ ಸ್ವಾತಂತ್ರ್ಯ ದಿನಾಚರಣೆ ನಮಗೆಲ್ಲಾ ಸ್ಫೂರ್ತಿ ನೀಡಲಿ ಎಂದು ಹಾರೈಸುತ್ತಾ ಈ ಶುಭ ಸಮಾರಂಭದಲ್ಲಿ ಭಾಗವಹಿಸಿದ ತಮಗೆಲ್ಲರಿಗೂ ಮತ್ತೊಮ್ಮೆ ಸ್ವತಂತ್ರ ದಿನಾಚರಣೆಯ ಶುಭಹಾರೈಕೆಗಳು ಎಂದು ಹೇಳಿದರು.ಗ್ರಾಂ ಪಂ ಪಿ ಡಿ ಒ ರವಿಕುಮಾರ್ ಲಿಂಗಣ್ಣನವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ಭಾರತ ದೇಶದ ಜನತೆಗೆ ಬಹಳ ವಿಶೇಷಕರ ಸಂಗತಿಯಾಗಿದೆ. ಏಕೆಂದರೆ ಈ ವರ್ಷ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ತುಂಬಿದ ಶುಭ ಸಂದರ್ಭವಾಗಿದೆ. ಹಾಗಾಗಿ ಈ ಬಾರಿಯ ಸ್ವಾತಂತ್ಯೋತ್ಸವ ಪ್ರತಿ ಪ್ರಜೆಗೂ ಬಹಳ ವಿಶೇಷವಾಗಿದೆ ಎಂದರು.ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಭಾರತಿ ಚೆಲುವಾದಿ, ಮುಖಂಡರಾದ ರುದ್ರಪ್ಪ ಹುನುಗುಂದ. ದೇವಪ್ಪ ಕುರಿ. ಶರಣಪ್ಪ ಹುಂಡಿ. ಮಾಜಿ ಸೈನಿಕ ಹನುಮಂತಪ್ಪ ಉಮಚಗಿ. ಗ್ರಾಮ ಪಂಚಾಯಿತಿ ಸದಸ್ಯರು. ಬಿಎಫ್ ಟಿ ಗುರುಬಸಯ್ಯ. ಯಮನೂರಪ್ಪ ಚೆಲುವಾದಿ. ಗ್ರಾಮದ ಸಾರ್ವಜನಿಕರು ಹಾಗೂ ಇನ್ನು ಹಲವಾರು ಉಪಸ್ಥಿತರು ಇದ್ದರು.

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *