ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ ಜಾಗೃತಿಗೆ 21 ಕಿ ಮೀ ಮ್ಯಾರಥಾನ್ ಓಡಿದ ಮೋಹನ್ ಕುಮಾರ್ ದಾನಪ್ಪ..

Spread the love

ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ ಜಾಗೃತಿಗೆ 21 ಕಿ ಮೀ ಮ್ಯಾರಥಾನ್ ಓಡಿದ ಮೋಹನ್ ಕುಮಾರ್ ದಾನಪ್ಪ..

ಬೆಂಗಳೂರು ಆಗಸ್ಟ್ 15: ರಂದು ಬೆಂಗಳೂರು ನಗರದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ  ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ, ಜಾಗೃತಿಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ರಾಷ್ಟ್ರ ಧ್ವಜ ಹಿಡಿದು 21 ಕಿಲೋ ಮೀಟರ್ ವಿನೂತನ ಮ್ಯಾರಥಾನ್ ಓಡುವ ಮೂಲಕ ಜನತೆಯ ಗಮನ ಸೆಳೆದರು, ನಂತರ ಮಾತನಾಡಿದ ಮೋಹನ್ ಕುಮಾರ್ ರವರು ಅಪಘಾತವಾದಾಗ ಮತ್ತು ಜೀವಕ್ಕೆ ಅಪಾಯವಿದ್ದಾಗ ತುರ್ತು ಸೇವೆ ನೀಡುವ ಆಂಬುಲೆನ್ಸ್‌ಗಳಿಗೆ ದಾರಿ ಬಿಡುವುದು. ನಮ್ಮ ಕರ್ತವ್ಯವೆಂದು ತಿಳಿಯಬೇಕು ಹಾಗೂ ಎಲ್ಲೆ ಅಪಘಾತವಾದರೂ ಅಪಘಾತಕ್ಕೀಡಾದವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕು, ಅಪಘಾತಕ್ಕೊಳಗಾದವರನ್ನ ಆಸ್ಪೆತ್ರೆಗೆ ಸೇರಿಸುವ ವ್ಯಕ್ತಿಗಳು ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬೇಕಿಲ್ಲ ಅನ್ನುವುದನ್ನ ತಿಳಿಯಬೇಕು ಹಾಗೂ ಪರೋಪಕಾರಿ ಗುಣಗಳನ್ನು ಬೆಳೆಸಿಕೊಳ್ಳಬೇಕು,  ಕಾಲ ಬದಲಾದ ಹಾಗೇ ಮಾನವೀಯತೆಯನ್ನು ಮತ್ತು ನಾವು ಮಾಡಬೇಕಾದ ಕರ್ತವ್ಯಗಳನ್ನು ಮರೆತಿದ್ದೇವೆ. ತುರ್ತು ಚಿಕಿತ್ಸೆಗೆ ತೆರಳುವ ಆಂಬುಲೆನ್ಸ್‌ಗಳಿಗೆ ದಾರಿಬಿಡದೇ ಅಪಾಯದಲ್ಲಿರುವ ಜೀವದ ಜೊತೆ ಆಟ ಆಡುವ ಪ್ರವೃತ್ತಿ ನಿಲ್ಲಿಸಬೇಕೆಂದರು, ಸದರಿ ಮ್ಯಾರಥಾನ್ ಓಟವನ್ನ ವಿಧಾನ ಸೌಧದಿಂದ ಪ್ರಾರಂಭಿಸಿ, ರಾಜ್ ಭವನ, ಶಾಸಕರ ಭವನ, ಕೆ. ಆರ್. ವೃತ್ತ, ಫ್ರೀಡಂ ಪಾರ್ಕ್, ಕನ್ನಿಂಗ್ ಹ್ಯಾಮ್ ರಸ್ತೆ, ಶಿವಾನಂದ ವೃತ್ತ, ರಸ್ತೆ ಮೂಲಕ ಹೈ ಕೋರ್ಟ್ ವರೆಗೆ ಸಾಗಿ ಅಂತ್ಯಗೊಳಿಸಿದರು, ಸದರಿ ಓಟದಲ್ಲಿ ಕಾನೂನು ವಿದ್ಯಾರ್ಥಿಗಳಾದ ಮನೋಜ್ ಕುಮಾರ್ ದಾನಪ್ಪ, ಸೈಯದ್ ವಾರೀಶ್, ಎನ್. ಸಂಕಲ್ಪ್ ಪಟ್ಟಣ ಶೆಟ್ಟಿರವರು ಜೊತೆಗೂಡಿದ್ದರು, ಈ ಜಾಗೃತಿ ಹೋರಾಟದ ಯಶಸ್ಸನ್ನು ಸುಪ್ರೀಂ ಕೋರ್ಟಿನ ಎಎಸ್ಜಿ ಕೆ.ಎಂ.ನಟರಾಜ್ ಮತ್ತು ಲೋಕಾಯುಕ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ರಫಿರವರಿಗೆ ಸಲ್ಲಿಸಿದರು, ಈ ಜಾಗೃತಿ ಓಟಕ್ಕೆ ರಾಜ್ಯದ ಸಚಿವರು,ಹಿರಿಯ ಐಎಎಸ್. ಐಪಿಎಸ್. ಎಎಜಿ, ಎಎಸ್ಜಿಗಳು, ಎಸ್ಪಿಸಿ, ಸಿಜಿಸಿಗಳು ಹಾಗೂ ಹಲವಾರು ಗಣ್ಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು!

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *