ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕೋಹಳ್ಳಿ ಗ್ರಾಮ ಸ್ವಚ್ಚಗೊಳಿಸಿದ ಎನ್.ಎಸ್.ಎಸ್ ಶಿಬಿರಾರ್ಥಿಗಳು.

Spread the love

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕೋಹಳ್ಳಿ ಗ್ರಾಮ ಸ್ವಚ್ಚಗೊಳಿಸಿದ ಎನ್.ಎಸ್.ಎಸ್ ಶಿಬಿರಾರ್ಥಿಗಳು.

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಬೆಳಗಾವಿ  ಹಾಗೂ ಜಾಧವಜಿ ಶಿಕ್ಷಣ ಸಂಸ್ಥೆಯ, ಶ್ರೀ ಕೆ.ಎ.ಲೋಕಾಪುರ ಕಲಾ, ವಿಜ್ಞಾನ,ವಾಣಿಜ್ಯ ಮಹಾವಿದ್ಯಾಲಯ,ಅಥಣಿ ಸಹಯೋಗದಲ್ಲಿ “ಅಮೃತ ಸಮುದಾಯ ಅಭಿವೃದ್ದಿ ಯೋಜನೆ” ಮತ್ತು “ಆಜಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ ಏಳು ದಿನಗಳ ಜಿಲ್ಲಾ ಮಟ್ಟದ ನಾಯಕತ್ವ ಶಿಬಿರ ಏರ್ಪಟ್ಟಿದ್ದು ಈ ನಿಮಿತ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ಕೋಹಳ್ಳಿ ಗ್ರಾಮವನ್ನು ಸ್ವಚ್ಚಗೊಳಿಸಿದರು. ಬೆಳಿಗ್ಗೆ ಕಸಬರಿಗೆ, ತ್ಯಾಜ್ಯದ ಬುಟ್ಟಿ, ಸಲಾಕೆ ಹಿಡಿದು ಗಲ್ಲಿ ಗಲ್ಲಿಗಳಲ್ಲಿ ತಿರುಗಾಡಿ ಇಡೀ ಕೋಹಳ್ಳಿ ಗ್ರಾಮವನ್ನು ಸ್ವಚ್ಚಗೊಳಿಸಿ ಕೋಹಳ್ಳಿ ಜನತೆಗೆ ಸ್ವಚ್ಚತೆಯ ಪಾಠ ಮಾಡಿದರು. ಜೊತೆಗೆ ಜನತೆಗೆ ಸ್ವಚ್ಚತೆಯ ಬಗೆಗೆ ಅರಿವು ಮೂಡಿಸಿ ಜನರಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ತಿಳಿಸಿದರು. ಈ ವೇಳೆ ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾದ ಎನ್ ಬಿ ಝರೆ, ಬಿ ಪಿ ಗುಂಡಾ ಸೇರಿದಂತೆ ಅನೇಕ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ವಿಶೇಷ ವರದಿ – ಮಹೇಶ ಶರ್ಮಾ

Leave a Reply

Your email address will not be published.