ನಾಣ್ಯಾಪುರ:ಗ್ರಾಮದಲ್ಲಿಯೇ ಪಡಿತರ ವಿತರಣೆ ಕ್ರಮಕ್ಕೆ, ವಂದೇ ಮಾತರಂ ಆಗ್ರಹ,,,,

Spread the love

ನಾಣ್ಯಾಪುರ:ಗ್ರಾಮದಲ್ಲಿಯೇ ಪಡಿತರ ವಿತರಣೆ ಕ್ರಮಕ್ಕೆ, ವಂದೇ ಮಾತರಂ ಆಗ್ರಹ,,,,

ವಿಜಯನಗರ  ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು, ದಶಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದಲ್ಲಿ. 300ಪಡಿತರ ಚೀಟಿಗಳಿದ್ದು ಪಲಾನುಭವಿಗಳು ಪಡಿತರ ದಾನ್ಯ ಪಡೆಯಲು, 2ಕಿಮೀ ದೂರದ ಹೊಸಕೇರಿ ಗ್ರಾಮದಲ್ಲಿರುವ ನ್ಯಾಯಾ ಬೆಲೆ ಅಂಗಡಿಗೆ ತೆರಳಬೇಕಿದೆ. ಸರ್ಕಾರ ನೀಡೋ ಉಚಿತ ಪಡಿತರ ಧಾನ್ಯ ನಾಣ್ಯಾಪುರ ಪಡಿತರ ಫಲಾನುಭವಿಗಳಿಗೆ, ಬಲು ದುಭಾರಿಯಾಗಿ ಪರಿಣಮಿಸಿದೆ. ಕಾರಣ 2ಕಿಮೀ ಕ್ರಮಿಸಲು ಪಡಿತರ ಪಲಾನುಭವಿಗಳು ಆಟೋ ಗಳನ್ನು ಅವಲಂಬಿಸಿದ್ದಾರೆ, ಇವರು ಪಡಿತರ ಪಡೆಯಲು ಪ್ರತಿ ತಿಂಗಳು ಇಪ್ಪತ್ತು ರಿಂದ ಮೂವತ್ತು ರೂ ವ್ಯಯಿಸಬೇಕಿದೆ. ತಾಲೂಕಾಡಳಿತ ಹಾಗೂ ಆಹಾರ ಇಲಾಖೆಯ ಅವೈಜ್ಞಾನಿಕ ಕ್ರಮದಿಂದಾಗಿ, ಸರ್ಕಾರ ಕೊಡೋ ಪುಕ್ಕಟೆ ಪಡಿತರ ನಾಣ್ಯಾಪುರ ಗ್ರಾಮಸ್ಥರಿಗೆ ಬಲು ದುಭಾರಿಯಾಗಿ ಪರಿಣಮಿಸಿದೆ. ವೃದ್ಧರು, ಮಹಿಳೆಯರು, ಮಕ್ಕಳು ಪಡಿತರ ಧಾನ್ಯ ಹೊಂದಲು ಹಣ ಕರ್ಚುಮಾಡಲೇಬೇಕಿದೆ. ಇದು ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ,ಇದು ಸರ್ಕಾರ ಆಹಾರ ಭದ್ರತೆ ನಿಯಮ ಉಲ್ಲಂಘನೆಯಾಗಿದೆ ಎಂದು ಹೋರಾಟಗಾರರಿಂದ ಖಂಡನೆ ವ್ಯಕ್ತವಾಗಿದೆ. ಸಂಬಂಧಿಸಿದಂತೆ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡ ವಿ.ಜಿ.ವೃಷಭೇಂದ್ರ ಮಾತನಾಡಿ, ಆಹಾರ ಭದ್ರತಾ ಕಾಯ್ದೆ ಅನ್ವಯ 250 ಪಡಿತರ ಚೀಟಿ ಇರುವೆಡೆ, ಪಲಾನುಭವಿಗಳಿಗೆ ಪಡಿತರ ವಿತರಿಸುವಂತೆ ಸರ್ಕಾರ ನಿಯಮ ರೂಪಿಸಿದೆ. ಇಲ್ಲಿ ನ್ಯಾಯಬೆಲೆ ಅಂಗಡಿಯವರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ,ತಹಶಿಲ್ದಾರರು ಶೀಘ್ರವೇ  ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ. ಹೆಚ್ಚಾಗಿ ಪರಿಶಿಷ್ಟ ಜಾತಿ ಪಂಗಡ ಇರೋ ನಾಣ್ಯಾಪುರ ಗ್ರಾಮದಲ್ಲಿ, ಕಡು ಬಡವರು ಕಾರ್ಮಿಕರು,ರೈತಾಪಿ ವರ್ಗ ವಿದ್ದು ಅವರಿಗೆ ಹೆಚ್ಚುವರಿ ಕರ್ಚಿನ ಹೊರೆ ಬೀಳಲಿದೆ. ಕಾರಣ ಜಿಲ್ಲಾಧಿಕಾರಿಗಳು ಶೀಘ್ರವೇ ಗಮನಿಸಬೇಕು,ಜೂಲೈ ತಿಂಗಳ ಮಾಹೆಯನ್ನು ನಾಣ್ಯಾಪುರ ಗ್ರಾಮದಲ್ಲಿಯೇ ವಿತರಿಸುವಂತೆ ಕ್ರಮ ಜರುಗಿಸಬೇಕಿದೆ. ತಹಶಿಲ್ದಾರರಾದ ಶರಣಮ್ಮರವರು ಪ್ರಾಮಾಣಿಕರು ಜನಪರ ಕಾಳಜಿ ಉಳ್ಳವರಾಗಿದ್ದಾರೆ, ಸಂಬಂಧಿಸಿದಂತೆ  ಅವರು ಖುದ್ದು ಪರಿಶೀಲಿಸಿ ನಾಣ್ಯಾಪುರದಲ್ಲಿ ಪಡಿತರ ವಿತರಿಸುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ವೃಷಭೇಂದ್ರ ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯ ತೋರಿದ್ದಲ್ಲಿ ಅಥವಾ ಇನ್ನಾವುದೇ ಕಾರಣಕ್ಕೆ ಕೋರಿಕೆಗೆ ಸ್ಪಂದಿಸದಿದ್ದಲ್ಲಿ,  ನ್ಯಾಯಬೆಲೆ ಅಂಗಡಿಯಲ್ಲಿ ಜರುಗುವ ಅಕ್ರಮ ಹಾಗೂ ಅವ್ಯವಹಾರಗಳ ಕುರಿತಂತೆ ದೂರು ನೀಡಲಾಗುವುದು. ಸಂಬಂಧಿಸಿದಂತೆ ವಂದೇ ಮಾತರಂ ಜಾಗೃತಿ ವೇದಿಕೆ ಹಗರಿಬೊಮ್ಮನಹಳ್ಳಿ ಘಟಕ ದಿಂದ, ಕಾನೂನು ರೀತ್ಯಾ ಹೋರಾಟ ನಡೆಸಲಾಗುವುದೆಂದು ಅವರು ಈ ಮೂಲಕ ಎಚ್ಚರಿಸಿದ್ದಾರೆ.

ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published.