ತಾವರಗೇರಾ ಪಟ್ಟಣದ ಖಾಸಗಿ ಆಸ್ಪತ್ರೆಗಳ ಮೇಲೆ ರಾತೋ/ರಾತ್ರಿ ದೀಡಿರ್ ದಾಳಿ.

Spread the love

ತಾವರಗೇರಾ ಪಟ್ಟಣದ ಖಾಸಗಿ ಆಸ್ಪತ್ರೆಗಳ ಮೇಲೆ ರಾತೋ/ರಾತ್ರಿ ದೀಡಿರ್ ದಾಳಿ.

ದಾಳಿ ಮಾಡಿದ ಖಾಸಗಿ ಆಸ್ಪತ್ರೆ

ಸೀಜ್ ಮಾಡಿದ ಖಾಆಸಗಿ ಆಸ್ಪತ್ರೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ದಿಯತ್ತ ಸಾಗುತ್ತಿದೆ. ಇದರ ಗುರಿಯನ್ನು ಇಟ್ಟುಕೊಂಡು ತಾವರಗೇರಾ ಪಟ್ಟಣದಲ್ಲಿ ನಕಲಿ ವೈಧ್ಯರು, ಹಣ ದೋಚಲು ತಾವರಗೇರಾ ಪಟ್ಟಣವನ್ನು ಆಯ್ಕೆ ಮಾಡಿಕೊಂಡು ಪಟ್ಟಣದಲ್ಲಿ ಒಂದು ಮಳಿಗೆಗೆ ತಿಂಗಳಿಗೆ 4 ರಿಂದ 5 ಸಾವಿರ ರೂ/ ಬಾಡಿಗೆ ನೀಡಿವ ಮೂಲಕ ಟಿಕ್ಕಾಣಿ ಉರಿದ್ದಾರೆ ಎಂದು ತಾವರಗೇರಾ ಪಟ್ಟಣದ ಬುದ್ದಿವಂತವರ ಅಭಿಪ್ರಾಯವಾಗಿದೆ. ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೊವೀಡ್ ನಿಯಮ ಉಲ್ಘನೆ ಮಾಡಿದ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಹಾಗೂ ತಾವರಗೇರಾ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ರಾತೋರಾತ್ರಿ ದಾಳಿ ಮಾಡಿ ಕೆಲವು ಖಾಸಗಿ ಆಸ್ಪತ್ರೆಗಳನ್ನು ಸೀಜ್ ಮಾಡಿದ ಅಧಿಕಾರಿಗಳು. ತಹಶೀಲ್ದಾರರಾದ ಎಂ.ಸಿದ್ದೇಶ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಯಾದ ಆನಂದ್ ಗೋಟುರ್, ತಾಲೂಕ ಪಂಚಾಯತಿ ಸಹಾಯಕ ನಿರ್ದೇಶಕರಾದ ವೆಂಕಟೇಶ ವಂದಾಲಿ ಹಾಗೂ ಪಟ್ಟಣದ ಆರ್.ಐ.ಶರಣಪ್ಪ ದಾಸರ್ ಜೊತೆಗೆ ಗ್ರಾಮ, ಲೆಕ್ಕಾಧಿಕಾರಿಯಾದ ಸೂರ್ಯಕಾಂತ್ ಹಾಗೂ ಪಟ್ಟಣದ ಎ.ಎಸ್.ಐ. ಮಲ್ಲಪ್ಪ ವಜ್ರದ, ಪ.ಪಂ.ಯ ಸಿಬ್ಬಂಧಿಗಳಾದ ಶ್ಯಾಮೂರ್ತಿ ಕಟ್ಟಿಮನಿ  ಉಪಸ್ಥಿತರಿದ್ದರು. ಒಟ್ಟಿನಲ್ಲಿ ಖಾಸಗಿ ಆಸ್ಪತ್ರೆಯವರು ರಾಜಾ ರೋಷವಾಗಿ ತಾವರಗೇರಾ ಪಟ್ಟಣದ ಜನರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಮುಗ್ದ ಜನರ ಸಣ್ಣ ಪಟ್ಟ ಖಾಯಿಲೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗೆ ಬಂದರೆ ಖಾಸಗಿ ಆಸ್ಪತ್ರೆಯವರು ಒಬ್ಬ ರೋಗಿಗೆ ಸುಮಾರು 300 ರಿಂದ 500 ವರೆಗೆ ಚಾರ್ಜ ಮಾಡುತ್ತಾರೆ. ಇದರಲ್ಲಿ ರೋಗಿಯ ಔಷಧಿ ಮತ್ತು ಖಾಸಗಿ ವೈಧ್ಯನ ಚಾರ್ಜ. ಇದನ್ನೆ ಗುರಿ ಇಟ್ಟುಕೊಂಡು ತಾವರಗೇರಾ ಪಟ್ಟಣದಲ್ಲಿ ನಾನಾ ಕಡೆ ತಲೆ ಎತ್ತಿರುವ ಖಾಸಗಿ ಆಸ್ಪತ್ರೆಗಳು  ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೇ ತಾವರಗೇರಾ ಪಟ್ಟಣದ ಖಾಸಗಿ ವೈದ್ಯರು ಅಲ್ಲದೇ ಪಕ್ಕದ ಸಿ.ಟಿ.ಯಿಂದ ಬಂದು ಖಾಸಗಿ ಆಸ್ಪತ್ರೆ ನಡೆಸುತ್ತಾರೆ. ಈ ಖಾಸಗಿ ಆಸ್ಪತ್ರೆಯ ವಿಷಯವನ್ನು ಮಾನ್ಯ ತಹಶೀಲ್ದಾರರು ಗಂಭಿರವಾಗಿ ಮನಗಟ್ಟು ನಿನ್ನೆ ರಾತ್ರಿ ತಾಲೂಕಾ ಆರೋಗ್ಯ ಅಧಿಕಾರಿಗಳು ಜೊತೆಗೆ ತಾ.ಪಂ.ಯ ಸಹಾಯಕ ನಿರ್ದೇಶಕರ ಒಗ್ಗೂಡಿ ರಾತೋ/ರಾತ್ರಿ ತಾವರಗೇರಾ ಪಟ್ಟಣಕ್ಕೆ ಅಗಮೀಸಿ, ಪಟ್ಟಣದ ಆರ್.ಐ. ಗ್ರಾಮ ಲೆಕ್ಕಿಗ, ಜೊತೆಗೆ ಪಟ್ಟಣದ ಎ.ಎಸ್.ಐ. ಮತ್ತು ಪ.ಪಂ.ಯ ಸಿಬ್ಬಂದಿಗಳ ನೇತೃತ್ವದಲ್ಲಿ  ಖಾಸಗಿ ಆಸ್ಪತ್ರೆಗಳ ಮೇಲೆ ದೀಡಿರನೆ ದಾಳಿ ಕೈಗೊಂಡಾಗ ಖಾಸಗಿ ವೈದ್ಯರ ಬಣ್ಣ ಬಯಲು ಮಾಡಿ, ಕೆಲ ಖಾಸಿಗಿ ಆಸ್ಪತ್ರೆಗಳನ್ನು ಸೀಜ್ ಮಾಡಲಾಗಿದ್ದು, ಈ ವಿಷಯದ ಕುರಿತು ತಾವರಗೇರಾ ಪಟ್ಟಣದಲ್ಲಿ ಸುದ್ದಿ ಹರಡುತ್ತಿದ್ದಂತೆ ಚಾಣಕ್ಷ ಖಾಸಗಿ ಆಸ್ಪತ್ರೆಯ ವೈದ್ಯರು ಬಾಗೀಲು ಮುಂಚಿಕೊಂಡು ಪರಾರಿಯಾಗಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಾಲೂಕಿನ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕಾರ್ಯ ಕೈಗೊಂಡಿದ್ದಾರೆ ನಿಜಕ್ಕೂ ಇಂತಹ ಪ್ರಮಾಣಿಕ ದಕ್ಷ ಅಧಿಕಾರಿಗಳಿಗೆ ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಪೋರ್ಟಲ್  ಬಳಗದವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಿದ್ದೆವೆ.

(ಇನ್ನೂ ಪಟ್ಟಣದಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ತೆಲೆ ಎತ್ತಿವೆ, ಆ ಆಸ್ಪತ್ರೆಗಳಿಗೂ ತಕ್ಕ ಪಾಠ ಕಲಿಸಬೇಕಾಗಿದೆ. ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂದೆನೂ ರಾಜಾ ರೋಷವಾಗಿ ಖಾಸಗಿ ಆಸ್ಪತ್ರೆಗಳು ತೆಲೆ ಎತ್ತಿವೆ ಇತ್ತ ಗಮನ ಅರಿಸಲಿ ಎಂಬುವುದು ಪಟ್ಟಣದ ಸಾರ್ವಜನೀಕರ ಆಶಯ.)

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *