ಕೂಡ್ಲಿಗಿ:ಯೋಗದಿಂದ ಸಕಲ ಸುಯೋಗ-ಮುಖ್ಯ ಶಿಕ್ಷಕಿ ನಿಂಗಮ್ಮ …..

Spread the love

ಕೂಡ್ಲಿಗಿ:ಯೋಗದಿಂದ ಸಕಲ ಸುಯೋಗ-ಮುಖ್ಯ ಶಿಕ್ಷಕಿ ನಿಂಗಮ್ಮ …..

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದ ಒಂದನೇ ವಾರ್ಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ,ಜೂ 21 ವಿಶ್ವ ಯೋಗದಿನದಂದು ಮಕ್ಕಳಿಗೆ ಮುಖ್ಯ ಶಿಕ್ಷಕರಾದ ನಿಂಗಮ್ಮ ನೇತೃತ್ವದಲ್ಲಿ. ಶಾಲಾಮಕ್ಕಳಿಗೆ ಯೋಗ ಶಿಕ್ಷಣ ನೀಡುವ ಮೂಲಕ,ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಅವರು ಮಾತನಾಡಿ, ಯೋಗ ದೇಹಕ್ಕೆ ಮಾತ್ರವಲ್ಲ ಮಾನಸಿಕವಾಗಿಯೂ ವ್ಯಾಯಾಮ ವಾಗಲಿದೆ. ಬೆಲೆ ಕಟ್ಟಲಾಗದ ಆರೋಗ್ಯ ನೆಮ್ಮದಿಗಳನ್ನು, ಯೋಗ ಮತ್ತು ಧ್ಯಾನದಿಂದ ಪಡೆಯಬಹುದಾಗಿದೆ. ಆದ್ದರಿಂದ  ಮನುಷ್ಯನ ಪಾಲಿಗೆ ಯೋಗ ಸಕಲ ಸುಯೋಗಗಳನ್ನು ಕಲ್ಪಿಸುತ್ತದೆ ಎನ್ನಬಹುದಾಗಿ, ಮಕ್ಕಳು ಪೋಷಕರು ಸೇರಿದಂತೆ ಸರ್ವರೂ ಯೋಗವನ್ನು ನಿತ್ಯ ಜೀವನದಲ್ಲಿ ರೂಡಿಸಿಕೊಳ್ಳಬೇಕಿದೆ ಎಂದರು. ನಂತರ ಶಿಕ್ಷಕಿಯರಾದ ಸುನೀತಾಶ್ರೀ, ಮಹಾದೇವಿ ಮಾತನಾಡಿದರು. ಶಿಕ್ಷಕಿಯರೊಂದಿಗೆ ಬಿಸಿಯೂಟ ಕಾರ್ಯಕರ್ತೆಯಾದ ಕೆ.ನಾಗವೇಣಮ್ಮ, ಮಕ್ಕಳಿಗೆ ಯೋಗ ಶಿಕ್ಷಣ ನೀಡುವ ಮೂಲಕ ಯೋಗ ದಿನಾಚರಣೆ ಯಶಸ್ವಿಯಾಗಿ ನೆರವೇರಿಸಿದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published.