30 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದೆ ಎಂದು ಮಾಜಿ ಎಂಎಲ್ಎ ತಿಪ್ಪೇಸ್ವಾಮಿ ಆರೋಪಿಸಿದ್ದಾರೆ,,

Spread the love

30 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದೆ ಎಂದು ಮಾಜಿ ಎಂಎಲ್ಎ ತಿಪ್ಪೇಸ್ವಾಮಿ ಆರೋಪಿಸಿದ್ದಾರೆ,,

ರಸ್ತೆ ಅಗಲೀಕರಣ ಕಾಮಗಾರಿಯನ್ನು 30ಕೋಟಿ ಗಳು ವೆಚ್ಚದಲ್ಲಿ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ.. ಗುಣಮಟ್ಟದ ಗ್ರವಲ್ ಹಾಕದೆ ರಸ್ತೆ ಬದಿಯಲ್ಲಿದ್ದ ಬಾವಿಯ ಮಣ್ಣನ್ನು ಹಾಕಲಾಗಿದೆ ಎಂದು ಆರೋಪಿಸಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವ್ಯಾಪ್ತಿಗೆ ಬರುವ ಸೇತುವೆಗಳು ನಿರ್ಮಾಣಕ್ಕೆ 12mm ಮತ್ತು 16 ಎಂಎಂ ಕಬ್ಬಿಣದ ಸರಳುಗಳನ್ನು ಬಳಸದೆ ಸಣ್ಣಪುಟ್ಟ ಡಕುಗಳೆಗೆ ಬಳಸುವಂತಹ ಕಬ್ಬಿಣವನ್ನು ಬಳಸುತ್ತಾರೆ. ಗುತ್ತಿಗೆದಾರರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದೌರ್ಜನ್ಯದಿಂದ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ದೂರಿನನ್ವಯ ನಾನು ವೀಕ್ಷಣೆ ಮಾಡಿ ಯಾವುದೇ ಕಾರಣಕ್ಕೂ ಕಳೆಪೆ ಮಾಡದೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರುಗಳು ಮತ್ತು ಮತ್ತು ಸಿಬ್ಬಂದಿಗಳು ಊರಿನ ಮುಖಂಡರಾದ ವೆಂಕಟೇಶ್ ,ದರ್ಶನ್ ,ರಫಿ ,ರೈತ ಸಂಘದ ತಾಲೂಕ ಅಧ್ಯಕ್ಷರಾದ ರವಿ ಇನ್ನು ಮುಂತಾದವರು ಭಾಗವಹಿಸಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *