ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಿಲಾರಹಟ್ಟಿ ಕಾರ್ಯಕ್ರಮದಲ್ಲಿ ಜುಮಲಾಪೂರ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಜಿ ಪಂ ದೂರು ದೆವಪ್ಪ ಎಸ್ ಮಡಿವಾಳರ.

Spread the love

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಿಲಾರಹಟ್ಟಿ ಕಾರ್ಯಕ್ರಮದಲ್ಲಿ ಜುಮಲಾಪೂರ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಜಿ ಪಂ ದೂರು ದೆವಪ್ಪ ಎಸ್ ಮಡಿವಾಳರ.

ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮ ಪಂ ವ್ಯಾಪ್ತಿಯ ಸಾಸ್ವಿಹಾಳ ಗ್ರಾಮದ ಹತ್ತಿರ.  ಜಿ ಪಂ ಇಪ್ಪತ್ತು ಲಕ್ಷ ರೂ ಅನುದಾನದಲ್ಲಿ. ಗ್ರಾಮ ಪಂಚಾಯಿತ ಅಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿದ್ದಾರೆ.  ಘನತ್ಯಾಜ್ಯ ವಿಲೇವಾರಿ ಘಟಕ ಸಂಭಂದಿಸಿದಂತೆ ಕೆಲವು ತಿಂಗಳುಗಳ ಹಿಂದೆ ಸಾಸ್ವಿಹಾಳ ಗ್ರಾಮದ ಗ್ರಾಮಸ್ಥರು ದಿನಾಂಕ 13/1/2022 ರಂದು ಮುದೇನೂರ ಪಂಚಾಯಿತಿಯ ಘನತ್ಯಾಜ್ಯ ತಂದು ಇಲ್ಲಿಗೆ ಹಾಕುವುದು ಸೂಕ್ತವಲ್ಲ ಎಂದು ಲಿಖಿತವಾಗಿ ದೂರು ಸಲ್ಲಿಸಿ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಮತ್ತು ಸಾಸ್ವಿಹಾಳ ಗ್ರಾಮದ ನಿವಾಸಿಯಾದ ದೆವಪ್ಪ ಎಸ್ ಮಡಿವಾಳರ ದಿನಾಂಕ 29/1/2022  ರಂದು ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿ ಘನತ್ಯಾಜ್ಯ ವಿಲೇವಾರಿ ಘಟಕ ಸಂಭಂದಿಸಿದಂತೆ ಈ ಕಾಮಗಾರಿಯೂ ಯಾವ ಗುತ್ತಿಗೆದಾರರಿಗೆ ಆಗಿದೆ ಮತ್ತು ಯಾವಾಗ ಆಗಿದೆ ಮತ್ತು ಈ ಕಾಮಗಾರಿಯ ಕ್ರಿಯಾ ಯೋಜನೆ ಎಸ್ಟಿಮೇಟ್ ಸೂಕ್ತ ದಾಖಲೆ ನಿಡಬೇಕೆಂದು  ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ನಿಡಿದರು ಇಲ್ಲಿಯವರೆಗೆ ಯಾವುದೇ ರೀತಿಯಿಂದ ದಾಖಲೆ ನಿಡಿರುವದಿಲ್ಲ.ಕೆಲಸವನ್ನು ಬಂದ್ ಮಾಡಿಸಿ ಎಂದು ಹೆಳಿದರೆ ಆಯ್ತು ಬಂದ್ ಮಾಡಿಸುತ್ತೇನೆ ಅಂತಹ ಹೇಳಿ ಕೆವಲ ಮೂರು ನಾಲ್ಕು ದಿನ ಬಂದ್ ಮಾಡಿಸಿ. ಪುನಃ ಕಾಮಗಾರಿಯನ್ನು ಪ್ರಾರಂಭ ಮಾಡಿಸಿ ದ್ದಾರೆ.  ಅಧಿಕಾರಿಗಳಿಗೆ ಸಾರ್ವಜನಿಕವಾಗಿ ಹಾಗೂ ವ್ಯಯಕ್ತಿತವಾಗಿ ಅರ್ಜಿ ನಿಡಿದರು ಕೂಡ  ಅರ್ಜಿಯನ್ನು ಲೆಕ್ಕಿಸದೆ ಲೆಬರ್ ಪೆಮೇಂಟ್  ಆಗಿರುವುದು ಗಮನಿಸಿದರೆ ಅಧಿಕಾರಿಗಳು ಹಾಗೂ ಜೆ ಇ ಅವರು ಗುತ್ತಿಗೆದಾರರ ಅನೂಕಲ ತಕ್ಕಂತೆ ಆಟ ಆಡುತ್ತಿದ್ದಾರೆ ಎಂದು ದೆವಪ್ಪ ಎಸ್ ಮಡಿವಾಳರ ಆರೋಪಿಸಿದ್ದಾರೆ.  ಈ ವಿಷಯಕ್ಕೆ ದಿನಾಂಕ 13/4/2022 ರಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಕೂಡ ಅರ್ಜಿ ಸಲ್ಲಿಸಿದ್ದೇವೆ. ವ್ಯಕ್ತಿ ಅಂತ ಸಮಸ್ಯೆ ಬಂದರೆ ನಾಳೆ ಬಾ ನಾಡಿದ್ದು ಬಾ  ಎನ್ನುತ್ತಾರೆ ಅಧಿಕಾರಿಗಳು. ಮತ್ತು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಿಲಾರಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಿಖಿತವಾಗಿ ಸಂಭಂದಿಸಿದ ಅಧಿಕಾರಿಗಳಿಗೆ ಕೂಡ ದೂರು ಸಲ್ಲಿಸಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *