ಕೊರಟಗೆರೆ:ಧರ್ಮ ದಂಗಲ್ ನಡುವೆ ಸಾಮರಸ್ಯ ಮೆರೆದ ಕೊರಟಗೆರೆ ತಹಶೀಲ್ದಾರ್ ನಾಹೀದಾ,,

Spread the love

ಕೊರಟಗೆರೆ:ಧರ್ಮ ದಂಗಲ್ ನಡುವೆ ಸಾಮರಸ್ಯ ಮೆರೆದ ಕೊರಟಗೆರೆ ತಹಶೀಲ್ದಾರ್ ನಾಹೀದಾ,,

ಕೊರಟಗೆರೆ:ಧರ್ಮ ದಂಗಲ್ ನಡುವೆ  ಸಾಮರಸ್ಯ ಮೆರೆದ ಕೊರಟಗೆರೆ ತಹಶೀಲ್ದಾರ್ ನಾಹೀದಾ-ಕೊರಟಗೆರೆ ತಾಲ್ಲೂಕಿನ ಸುಪ್ರಸಿದ್ದ ಸಸ್ಯ ಸಂಜೀವಿನಿ ತಾಣವಾದ ಸಿದ್ದರಬೆಟ್ಟ ಕ್ಷೇತ್ರದಲ್ಲಿ, ದೈವಕ್ಕೆ ತಹಶಿಲ್ದಾರರಾದ ಮುಸ್ಲೀಂ ಸಮುದಾಯದ ನಾಹೀದ ಜಮ್ ರವರು. ದೈವಿಕ ಕಾರ್ಯಚಟುವಟಿಕೆಗಳಲ್ಲಿ, ಶ್ರದ್ಧಾ ಭಕ್ತಿಯಿಂದ ಪೂಜಾ  ಕೈಕಂರ್ಯಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿ ಸಾಮರಸ್ಯ ಸಾರಿದ್ದಾರೆ. ಮುಜರಾಯಿ ಇಲಾಖೆಯಿಂದ ನಡೆದ ಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ, ಅವರು ತಮ್ಮ ಕುಟುಂಬ ಸದಸ್ಯರೊಡಗೂಡಿ ತೊಡಗಿಸಿಕೊಂಡರು. ಮೊದಲಿಗೆ ಸಿದ್ದರಬೆಟ್ಟದ ಶ್ರೀಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು, ನಂತರ ಪ್ರಸಾದ ಸೇವೆಯ ಕಾರ್ಯದಲ್ಲಿ ಭಕ್ತರಿಗೆ ತಹಶೀಲ್ದಾರ್ ನಾಹೀದಾ ಜಮ್ ಪ್ರಸಾದ ಬಡಿಸಿದರು. ಮತ್ತು ಸಿದ್ದೇಶ್ವರ ಸ್ವಾಮಿಯ ಭಕ್ತರೊಂದಿಗೆ ಆತ್ಮೀಯ ಕುಶಲೋಪಹರಿ ವಿಚಾರೀಸಿದರು, ಭಕ್ತರಿಗೆ ಪ್ರಸಾದ ಬಡಿಸೋ ಮೂಲಕ  ತಹಶೀಲ್ದಾರ್ ನಾಹೀದಾರವರು ಭಕ್ತಿಯೊಂದಿಗೆ ಸೌರ್ಹಾರ್ಧತೆ ಮೆರೆದರು. ರಥೋತ್ಸವವು ಮುಜುರಾಯಿ ಇಲಾಖೆಯ ನೇತೃತ್ವದಲ್ಲಿ ಜರುಗುತ್ತದೆ, ಸಂಪ್ರದಾಯದಂತೆ ತಹಶಿಲ್ದಾರರು ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ರಥೊತ್ಸವಕ್ಕೆ ಚಾಲನೆ ನೀಡಿದರು. ಇತ್ತೀಚಿನ ಧರ್ಮ ದಂಗಲ್ ನಡುವೆ  ಎಲ್ಲರೂ ಒಂದೇ ಅನ್ನೋ ಸಂದೇಶವನ್ನು ಸಾರಿದ್ದರೆ ತಹಶೀಲ್ದಾರ್ ನಾಹೀದಾರವರು, ಸೌಹಾರ್ಧತಾ ಮನೋಭಾವ ಹಾಗೂ ಸರ್ವ ಧರ್ಮ ಸಹಿಷ್ಣುತೆಯನ್ನು ಅವರು ಮೆರೆದಿದ್ದಾರೆ.

ವರದಿ – ️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *