ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಹತ್ತು  ಹಲವು ಸಮಸ್ಯೆಗಳಿಂದ  ಜನರ  ಸಾವುಗಳು /ನೋವುಗಳು ಹೆಚ್ಚಾಗಿವೆ.

Spread the love

ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಹತ್ತು  ಹಲವು ಸಮಸ್ಯೆಗಳಿಂದ  ಜನರ  ಸಾವುಗಳು ಹೆಚ್ಚಾಗಿವೆ.

ಹೆಲ್ತ್ ಮಾಫಿಯಾ ಜನತೆಯ ಜೀವದ ಜೊತೆ ಆಟ ಆಡುತ್ತಿದ್ದ ಕೇಳಮಟ್ಟದ ಅಧಿಕಾರಿಗಳು

ಆಕ್ಷಿಜನ್,ವೆಂಟಿಲೆಟರ್, ಅಗತ್ಯ ಔಷಧ, ವೈದ್ಯರ ಮತ್ತು ನರ್ಸ್, ಸಿಬ್ಬಂದಿ ಕೊರತೆ ಸರಿಪಡಿಸದಿದ್ದರೆ ಸಾವುಗಳ ಪ್ರಮಾಣ ಇನ್ನಷ್ಟು  ಹೆಚ್ಚಾಗುತ್ತವೆ. ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಮತ್ತು ಸಂಸದರು  ಮತ್ತು  ಶಾಸಕರಿಗೆ  ರೋಗಿಗಳ  ಅಕ್ರಂದನ ಮತ್ತು ಜೀವನ್ಮರಣದ  ವಾಸ್ತವತೆ ಗೊತ್ತಾಗಬೇಕಾದರೆ ಇವರು  ಪ್ರತಿನಿತ್ಯ ಒಂದು  ಗಂಟೆಯವರೆಗೆ  ಆಸ್ಪತ್ರೆಗಳಲ್ಲಿ ಕುಳಿತುಕೊಳ್ಳಬೇಕೆಂದು ಕೋರುತ್ತೇವೆ.   ಜಿಲ್ಲೆಯಲ್ಲಿ ಸೋಂಕು ತೀವ್ರಗೊಂಡಿದ್ದರಿಂದ ಜನರು ಬೆಳಿಗ್ಗೆ 8 ರಾತ್ರಿ 10 ಗಂಟೆವರೆಗೆ ಕೋವಿಢ್ ಸೆಂಟರ್   ಸ್ಲ್ಯಾಬ್ ಟೆಸ್ಟ್ ನ ಮುಂದೆ  ಸಾಲುಗಟ್ಟಿ ನಿಂತಿರುತ್ತಾರೆ. ಜಿಲ್ಲಾ ಆಸ್ಪತ್ರೆಯ Sari (ಕೋವಿಢ್ ರೋಗಿಗಳಿಗೆ ಚಿಕಿತ್ಸೆ ಕೊಡುವ ವಾರ್ಡ )  ವಾರ್ಡನ ಹೊಳ ರೋಗಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.  ಈ ವಾರ್ಡಿನಲ್ಲಿ    ವೈದ್ಯರು,  ನರ್ಸ್  ಸಿಬ್ಬಂದಿಗಳ ಕೊರತೆ ಇದೆ  ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ  ಚಿಕಿತ್ಸೆ ಕೊಡಲು “ಕಡಿಮೆ ಸಂಖ್ಯೆಯ” ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಹಲವು  ಜನರು, ಸ್ಲ್ಯಾಬ್ ಟೆಸ್ಟ್ ಮಾಡುವ ಸಿಬ್ಬಂದಿಗಳನ್ನು ಬಿಡದೆ ತಮ್ಮ  ಗೋಳು ಕೇಳಿ ಎಂದು ದುಂಬಾಲು ಬಿದ್ದಿರುತ್ತಾರೆ.  ಗೋಳಾಟ ಚಿರಾಟದಲ್ಲಿದ್ದ ರೋಗಿಗಳ ಸಂಬಂಧಿಗಳು   ವೈದ್ಯರ ಮೇಲೆ ರೇಗಾಡಿದರೆ ಇನ್ನು ಕೆಲವರು  ಸರ್ಕಾರದ ನಿರ್ಲಕ್ಷ್ಯತೆಗೆ ಶಾಪ ಹಾಕುತ್ತಿದ್ದರು. ಎರಡು ದಿನದ ಹಿಂದಿನ ರಾತ್ರಿ  11 ಗಂಟೆಗೆ 20 ಕ್ಕೂ ಹೆಚ್ಚು ಪಾಜಿಟಿವ್  ರೋಗಿಗಳು ಈ ವಾರ್ಡಿಗೆ ಬಂದು  ಸೇರಿಕೊಂಡರು.   ಉಸಿರಾಟದ ತೊಂದರೆಯಿಂದ   ಚಿರಾಡುತ್ತಿದ್ದ ಹಲವು  ರೋಗಿಗಳಿಗೆ ತಕ್ಷಣ ಆಮ್ಲಜನಕ ಕೊಡಲು ಸಾಧ್ಯವಾಗಲಿಲ್ಲ.  ಈ ಕಾರಣದಿಂದಲೇ ಕೊಪ್ಪಳ ತಾಲೂಕಿನ ಹನುಕುಂಟಿ ಗ್ರಾಮದ ಶಿವಪ್ಪ  ಎನ್ನುವ ವ್ಯಕ್ತಿ ಪ್ರಾಣ ಕಳೆದುಕೊಂಡನು. ( ICU ಮತ್ತು  ಬೇರೆ ಬೇರೆ ವಾರ್ಡಿನಲ್ಲಿ ಇನ್ನೆಷ್ಟು ಜನರು ಸತ್ತರೋ ಗೊತ್ತಿಲ್ಲ- ಪ್ರತಿನಿತ್ಯದ ಸಾವುಗಳ ಸಂಖ್ಯೆ  ಸರಿಯಾಗಿ  ಗೊತ್ತಾಗುತ್ತಿಲ್ಲ.) ಕಡಿಮೆ ಸಂಖ್ಯೆಯಲ್ಲಿರುವ ವೈದ್ಯರು ನರ್ಸ್ ಗಳು   ಹರಸಾಹಸ ಪಡುತ್ತಿದ್ದಾರೆ. ಜಿಲ್ಲಾಅಧಿಕಾರಿಗಳು ಮತ್ತು  ಜಿಲ್ಲಾಡಳಿತ  ಯಾವುದೆ ಕೊರತೆ ಇಲ್ಲ ಎಂದು ಸುಳ್ಳು  ಹೇಳುತ್ತಿದ್ದಾರೆ. ಎಲ್ಲಾ ವ್ಯವಸ್ಥೆ ಸರಿ ಇದ್ದರೆ ಜನರ ಸಾವುಗಳು ಯಾಕೆ ಹೆಚ್ಚಾಗುತ್ತಿವೆ. ಸರಕಾರ  ಜನರ ಆರೋಗ್ಯವನ್ನು ಸರಿಯಾಗಿ ಕಾಪಾಡದಿದ್ದರೆ, ಕರ್ನಾಟಕ ರೈತ ಸಂಘ (AIKKS) ಕೋವಿಢ್ ನಿಯಮಗಳನ್ನು ಪಾಲಿಸುತ್ತ ಹೋರಾಟಕ್ಕೆ ಮುಂದಾಬೇಕಾಗುತ್ತದೆ.

ಸರ್ಕಾರಕ್ಕೆ  ಹಕ್ಕೊತ್ತಾಯಗಳು

1) ಜಿಲ್ಲೆಯಲ್ಲಿ ಕೊರತೆ ಇರುವ ವೈದ್ಯರು, ನರ್ಸ್ ಇತರೆ  ಸಿಬ್ಬಂದಿಗಳನ್ನು ಹೆಚ್ಚಿಸಬೇಕು.

2) ಖಾಸಗಿ ವೈದ್ಯರಿಗೆ 2 ಕೋಟಿ ಹಾಗೂ ನರ್ಸಿಂಗ್ ಸಿಬ್ಬಂದಿಗಳಿಗೆ 1 ಕೋಟಿ ರೂ, ಜೀವ ವಿಮೆ ಮಾಡಿಸಿ ಕೋವಿಢ್ ಸೇವೆಗೆ ನಿಯೋಜಿಸಬೇಕು.

3) ಎಂಬಿಬಿಎಸ್ ಮತ್ತು  ನರ್ಸಿಂಗ್ ವಿದ್ಯಾರ್ಥಿಗಳಿಗೆ 50 ಲಕ್ಷ ರೂ. ಜೀವ ವಿಮೆ ಮಾಡಿಸಿ ಅವರನ್ನು ಕೂಡ ಸೇವೆಯಲ್ಲಿ ತೊಡಗಿಸಬೇಕು.

4) ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜಗಳನ್ನು ಕಲ್ಯಾಣ ಮಂಟಪ,ಮಠ, ಮಸೀದಿಗಳನ್ನು  ಕೋವಿಢ್ ಆಸ್ಪತ್ರೆಯಾಗಿ ಪರಿವರ್ತಿಸಬೇಕು.

6) ಆಯಾ ಕ್ಷೇತ್ರದ ಶಾಸಕರು ಇದರ ಉಸ್ತುವಾರಿ ವಹಿಸಿಕೊಂಡು ಜಿಲ್ಲೆಯ ಉದ್ಯಮಿಗಳ ಸಹಾಯ ಪಡೆದು ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸಬೇಕು.

7)  ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಷಿಜನ್ ಸೌಲಭ್ಯ ಸಿಗುವಂತ ವ್ಯವಸ್ಥೆ ಕಲ್ಪಿಸಬೇಕು.

8)  ಗವಿ ಶ್ರೀಗಳು 100 ಹಾಸಿಗೆಗಳ ಕೋವಿಢ್ ಕೇರ್ ಸೆಂಟರ್ ತೆರೆಯುವ ಬರವಶೆ ಕೊಟ್ಟಿದ್ದಾರೆಂದು ಗೊತ್ತಾಗಿದೆ.

ಇದಲ್ಲದೇ     ಗವಿ ಸಿದ್ಧೇಶ್ವರ ಶಾಲಾ ಕಾಲೇಜ್ ನಲ್ಲಿ  ಕೋವಿಢ್ ಆಸ್ಪತ್ರೆ ತೆರೆದು  ಜಿಲ್ಲಾಡಳಿತ ನಿರ್ವಹಣಿ ಜವಾಬ್ದಾರಿ ವಹಿಸಿಕೊಂಡರೆ ಅತ್ಯಂತ  ಅನುಕೂಲವಾಗಿದೆ.ವಿಶಾಲವಾದ ಈ ಜಾಗದಲ್ಲಿ  ಹೆಚ್ಚಿನ ಜನರಿಗೆ ಅಂತರ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ.

9) ಬೆಡ್ ಗಳ ಕೊರತೆಯಿಂದ ಶೇಕಡ 80 ರಷ್ಟು ಪಾಜಿಟಿವ್ ರೋಗಿಗಳನ್ನು  ಹೋಂ ಐಸೋಲೇಶನ್ ಗೆ ಕಳುಹಿಸಲಾಗಿದೆ.

10) ಸರಕಾರದ ಈ ನಿರ್ಧಾರ  ಇನ್ನಷ್ಟು ಜನರನ್ನು  ಅಪಾಯಕ್ಕೆ ತಳ್ಳಿದಂತಾಗಿದೆ. ಏಕೆಂದರೆ ಹೆಚ್ಚಿನ ಜನರು ಬಡವರಾಗಿರುತ್ತಾರೆ.  ಮನೆಯಲ್ಲಿ ಜಾಗದ ಸಮಸ್ಯೆಯಿಂದ ಪ್ರತ್ಯೇಕ ರೂಂ   ಮತ್ತು ಟಾಯ್ಲೆಟ್ ಅನುಕೂಲ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೊಂ ಐಸೋಲೇಶನ್ ನಿರ್ಧಾರ ಕೈ ಬಿಟ್ಟು ಕೋವಿಢ್ ಆಸ್ಪತ್ರೆಗಳಲ್ಲಿ ಉಳಿಸಿಕೊಂಡು ಚಿಕಿತ್ಸೆ ಮುಂದುವರೆಸಬೇಕು. ಸ್ನೇಹಿತರೇ  ಮತ್ತು  ಹಿರಿಯರೇ  ನಾಲ್ಕು ದಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ  ಅಡ್ಮಿಂಟ್ ಆಗಿದ್ದರಿಂದ ನನಗೆ ಅಲ್ಲಿನ ಒಟ್ಟು ಸಮಸ್ಯೆಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು.

ಡಿ.ಹೆಚ್. ಪೂಜಾರ  ರಾಜ್ಯಾಧ್ಯಕ್ಷರು,  ಬಸವರಾಜ ನರೆಗಲ ಜಿಲ್ಲಾ ಕಾರ್ಯದರ್ಶಿ , ಕರ್ನಾಟಕ ರೈತ ಸಂಘ (AIKKS).        ವರದಿ – ಸಂಪಾದಕೀಯ

Leave a Reply

Your email address will not be published. Required fields are marked *