ಕಟ್ಟಡ ಕಾರ್ಮಿಕ ಸಂಘ ತಾವರಗೇರಾ ಐವರಿಂದ 9ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿ ಸಂವಿಧಾನ ಹಿತಾ ರಕ್ಷಣಾ ಸಮಿತಿಯವರಿಗೆ ಸಂಪೂರ್ಣ ಬೆಂಬಲ ನೀಡಿದರು.
ತಾವರಗೇರಾ ಪಟ್ಟಣದಲ್ಲಿಂದು 9ನೇ ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಈ ಹೋರಾಟಕ್ಕೆ ವಿಶೇಷವಾಗಿ ಶ್ರೀ ಶ್ಯಾಮೀದಲಿ ಬಾರ್ ಬೈಂಡಿಗ್ ಸೆಂಟರಿಂಗ್ ಕಟ್ಟಡ ಕಾರ್ಮಿಕ ಸಂಘವು ಈ ಹೋರಾಟದಲ್ಲಿ ಭಾಗಿಯಾಗುವುದರ ಜೊತೆಗೆ ಐವರಿಂದ ಉಪವಾಸ ಸತ್ಯಾಗ್ರಹದಲ್ಲಿ ಪಾಲುಗೊಂಡಿರುವುದು ವಿಶೇಷವಾಗಿದೆ. ಡಾ॥ ಅಂಬೇಡ್ಕರ್ ಶಿಲ್ಪಿಗೆ ಮಾಲರ್ಪಣೆ ಮಾಡುವ ಮೂಲಕ ಕಾರ್ಯಕಮಕ್ಕೆ ಚಾಲನೆ ನೀಡಿದರು. ಉಪವಾಸ ಸತ್ಯಾಗ್ರಹದಲ್ಲಿ ಪಾಲುಗೊಂಡವರಾದ 1)ಅಮರೇಶ ಚಲುವಾದಿ 2) ಬಸವರಾಜ ಭೋವಿ 3) ಶ್ಯಾಮಣ್ಣ ಬಂಗಾರಿ 4) ಚಿದನಂದ ಬಡಿಗೇರ್ 5) ಲಾಲಸಾಬ್ ಇಳಕಲ್ ರವರು ಪಾಲುಗೊಂಡರು. ನ್ಯಾಯಧೀಶರ ವಿರುದ್ದ ಹಲವು ಘೋಷಣೆ ಕೂಗುವುದರ, ಜೊತೆಗೆ ಹೋರಾಟದ ಹಾಡುಗಳನ್ನ ಹಾಡುವ ಮೂಲಕ ಯುವಕರಿಗೆ ಹುರಿದುಂಬಿಸಿದರು. ಈ ಹೋರಾಟಕ್ಕೆ ತಾವರಗೇರಾ ಪಟ್ಟಣದ ಹಿರಿಯ ನಾಯಕರು ಹಾಗೂ ಬುದ್ದಿ ಜೀವಿಗಳು ಜೊತೆಗೆ ಸಂಘ/ಸಂಸ್ಥೆಯವರು ಬೆಂಬಲ ನೀಡಿದರು. ಈ ದಿನದೊಂದು ವಿಶೇಷವಾಗಿ ಸಮಾಜದ ಹಿತಾ ಚಿಂತಕರು ಪಾಲಗೊಂಡರು. ಈ ಕೂಡಲೆ ವಕೀಲರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಈ ಹೋರಾಟವು ಮುಂದಿನ ದಿನಮಾನಗಳಲ್ಲಿ ಇನ್ನೂ ವಿಶೇಷವಾಗಿ ಉಪವಾಸ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ತಾವರಗೇರಾ ಪಟ್ಟಣದ ಸಂವಿಧಾನ ಹಿತಾ ರಕ್ಷಣಾ ಸಮೀತಿಯು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ವರದಿ – ಸಂಪಾದಕೀಯ