“ದೇಶ” ಪ್ರೇಮಿಗಳಿಗೆ ಇಂದು ಮರೆಯಲಾದ ದಿನ..
ಫೆಬ್ರವರಿ 14 ವ್ಯಾಲೆಂಟೈನ್ ಡೇ ಈ ದಿನಾಂಕ ಎದುರಿಗೆ ಬಂದ ತಕ್ಷಣ ನೆನಪಾಗೋದು ಪ್ರೀತಿಯ ಹುಡುಗಿ ಇಲ್ಲವೇ ಹುಡುಗನ ಮುದ್ದು ಮುಖ, ಇಂದು ಹೇಗೆಲ್ಲಾ ನೆಚ್ಚಿನ ನಲ್ಲೆಯ ಎದುರು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆಂಬ ಒದ್ದಾಟ. ಅಲ್ವಾ..? ನಾಳೆಯ ವಿಚಾರಗಳನ್ನು ಬಿಡಿ ಸದ್ಯ 3 ವರ್ಷದ ಹಿಂದೆ ಪ್ಲಾಷ್ ಬ್ಯಾಕಿಗೆ ಹೋಗಿ. ಆ ದಿನವನ್ನು ನೆನಪಿಸಿಕೊಳ್ಳಿ ಯಾಕಂದ್ರ ಹೃದಯದ ತುಂಬ ಪ್ರೇಮವನ್ನ ತುಂಬಿಕೊಂಡು ಇರಬೇಕಾಗಿದ್ದ ದೇಶದ ಜನರು ಪುಲ್ವಾಮ ಅಟ್ಯಾಕ್ ಎಂಬ ಎಂತಹ ಕಲ್ಲು ಹೃದಯವಾದರೂ ಕಿತ್ತುಬರುವಂತಹ ಘಟನೆ ನೆಡೆಯಿತು. ಜೈಷ್ ಸಂಘಟನೆಯ ಭಯೋತ್ಪಾದಕನೊಬ್ಬ 80 ಕೆ.ಜಿ ಆರ್.ಡಿ.ಎಕ್ಸ್ ಇರುವ ಕಾರಿನ ಜೊತೆ ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರನ್ನ ಕರೆದುಕೊಂಡು ಹೋಗುತ್ತಿದ್ದ ವಾಹನದ ಮೇಲೆ ನುಗ್ಗಿ 40 ಯೋಧರ ಜೀವವನ್ನು ಬಲಿತೆಗೆದುಕೊಂಡಿದ್ದ. ಇಷ್ಟೇ ಅಲ್ಲ, ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ 40ಯೋಧರಲ್ಲಿ ಕನ್ನಡದ ಯೋಧ ಗುರು ಕೂಡ ವೀರಮರಣವನ್ನಿಪ್ಪಿದ್ರು. ಮಂಡ್ಯ ಜಿಲ್ಲೆ ಗುಡಿಗೆರೆ ಗ್ರಾಮದ ಗುರು ಅವರನ್ನ ಕಳೆದ್ಕೊಂಡು ಕರುನಾಡಿಗೆ ಕರುನಾಡೇ ಕಂಬನಿ ಮಿಡಿದಿತ್ತು. ಕರುನಾಡ ಹೆಮ್ಮೆಯ ಕುವರನ ಕಳೆದ್ಕೊಂಡು ಎಲ್ಲರ ಕರುಳು ಹಿಂಡಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರೇಮದಲ್ಲಿ ಮಿಂದೇಳಬೇಕಿದ್ದ 130 ಕೋಟಿ ಭಾರತೀಯ ಹೃದಯದಲ್ಲಿ ಸೂತಕದ ಛಾಯೆಯು ಆವರಿಸಿತು. ಅಂದು 40 ವೀರ ಯೋಧರನ್ನ ಹೃದಯವನ್ನು ಚಿದ್ರಗೊಳಿಸಿದ್ದ ಕ್ಷುದ್ರಶಕ್ತಿಗಳ ವಿರುದ್ಧ ಇಡೀ ದೇಶವೇ ಒಗ್ಗಟ್ಟಾಗಿತ್ತು. ನಂತರದ ಸಮಸ್ತ ದೇಶಪ್ರೇಮಿಗಳ ನಿರೀಕ್ಷೆಯಂತು ಸುಳ್ಳಾಗಲಿಲ್ಲ ಪುಲ್ವಾಮ ದಾಳಿ ನೆಡೆದ 12 ದಿನಗಳ ಬಳಿಕ 1 ಸಾವಿರ ಕೆ.ಜಿ ಇಸ್ರೇಲ್ ನಿರ್ಮಿತ ಬಾಂಬ್ ಗಳನ್ನು ಹೊತ್ತು ಭಾರತದ ವಾಯುದಳದ 12 ಮಿರಾಜ್ 2000 ಯುದ್ಧ ವಿಮಾನಗಳು ಅಂತರಾಷ್ಟ್ರೀಯ ಗಡಿರೇಖೆಯನ್ನು ದಾಟಿ ಸೀದಾ ಪಾಕಿಸ್ತಾನದೊಳಕ್ಕೆ ನುಗ್ಗಿ ಒಟ್ಟು ನಾಲ್ಕು ಕಡೆಗಳಲ್ಲಿದ್ದ ಉಗ್ರರ ಕ್ಯಾಂಪ್ ಗಳನ್ನು ನಾಶಗೊಳಿಸಿ ಬಂದವು. ಅದರಲ್ಲಿ ಬಾಲಕೋಟ್ ಕೂಡ ಒಂದು. ವೀರಯೋಧರ ಬಲಿದಾನಕ್ಕೆ ಬಾಲಾಕೋಟ್ ಏರ್ ಸ್ಟ್ರೈಕ್ ಅರ್ಪಿತವಾಯಿತು. ಅಂದು ನನ್ನ ದೇಶದ ಜನತೆಯು ದೇಹಪ್ರೀತಿಗೆ ಜೋತು ಬೀಳದ ದೇಶಪ್ರೇಮಕ್ಕಾಗಿ ಎದ್ದು ನಿಂತಿತು. ಈ ಘಟನೆಯಂತೂ ದೇಶಪ್ರೇಮಿಗಳಿಗೆ ಮರೆಯಲಾದ ” ಮರೆಸಲಾಗದ ಕಹಿ ಘಟನೆಯಾಗಿಯೇ ” ಇದೆ. ಬಿಸಿಲು.. ಚಳಿ.. ಗಾಳಿ ಲೆಕ್ಕಿಸದೇ ಗಡಿಕಾಯೋ ಭಾರತಾಂಬೆಯ ಮಕ್ಕಳು ನೀವು.. ಗಡಿಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನಮ್ಮನ್ನ ಕಾಯೋ ನಿಮಗೊಂದು ಸೆಲ್ಯೂಟ್. ನಿಮ್ಮ ನೆನಪು ಅಜರಾಮರ. ನಮ್ಮ ಹೃದಯದಲ್ಲಿ ಎಂದಿಗೂ ನಿಮ್ಮ ನೆನಪು ಅಜರಾಮರವಾಗಿರಲಿದೆ. ಈ “ದೇಶ” ಪ್ರೇಮಿಗಳ ದಿನದಂದು ನಮ್ಮ ಪ್ರೀತಿಯ ಸೈನಿಕನಿಗಾಗಿ ನಲ್ಮೆಯ ಗುಲ್ ಮೊಹರನ್ನ ಅರ್ಪಿಸೋಣ ” ದೇಶ ” ಪ್ರೇಮಿಗಳಾಗೋಣ.
✍ಆರ್.ಬಿ.ಅಲಿಆದಿಲ್ ✍️ ದೇಶಪ್ರೇಮಿ