ಭಾವೈಕತೆಗಾಗಿ  ವಸ್ತ್ರ ಸಂಹಿತೆ ಪಾಲಿಸುವಂತೆ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಕುಮಾರ್ ನಾಯಕ್

Spread the love

ಭಾವೈಕತೆಗಾಗಿ  ವಸ್ತ್ರ ಸಂಹಿತೆ ಪಾಲಿಸುವಂತೆ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಕುಮಾರ್ ನಾಯಕ್ ಮನವಿ.

ಕಳೆದೆರಡು ವರ್ಷಗಳಿಂದ ಕೋವಿಡನ ಪರಿಣಾಮದಿಂದ ಸರಿಯಾಗಿ ತರಗತಿಗಳು ನಡೆಯದಿರುವ ಕಾರಣ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿರುವ ಘಾಸಿ ಇನ್ನೂ ಮಾಯವಾಗದಿರುವಾಗಲೇ ಸಮಾಜದಲ್ಲಿ ಐಕ್ಯತೆ ಮೂಡಿಸುವಲ್ಲಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಸಂತ ಶಿಶುನಾಳ ಮತ್ತು ಕನಕದಾಸರ ನಾಡಿನಲ್ಲಿ  ಇತ್ತೀಚಿಗೆ ಕೆಲ ಕಾಲೇಜುಗಳಲ್ಲಿ ಇದೀಗ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಪ್ರಾರಂಭವಾಗಿರುವುದು ಶೋಚನೀಯ ಸಂಗತಿವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ  ವಿದ್ಯಾರ್ಥಿಗಳಿಗೆ ಭಾವೈಕತೆಯ ಶಿಕ್ಷಣವೇ ಮುಖ್ಯ ಎಂಬ ಸಂವಿಧಾನದ ಆಶಯವನ್ನು ಮರೆತು ಕೆಲವರು ಶಾಲ್ ಮತ್ತು ಹಿಜಾಬ್ ಗಳನ್ನು ಅಸ್ತ್ರವಾಗಿಟ್ಟುಕೊಂಡು ಸುಖಾಸುಮ್ಮನೆ ವಿವಾದಗಳನ್ನು ಸೃಷ್ಟಿಸುವ ಷಡ್ಯಂತ್ರಗಳು ನಡೆಸುತ್ತಿರುವುದು ಖೇದಕರದ ಸಂಗತಿ. ರಾಜ್ಯದ ವಿದ್ಯಾರ್ಥಿ  ಸಮುದಾಯದಲ್ಲಿ ಇಂತಹ ವಿಷ ಬೀಜವನ್ನು ಬಿತ್ತಿ ಸಮಾಜದಲ್ಲಿ ಐಕ್ಯತಾ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿರುವವರ ಕುರಿತಾಗಿ ಸರಕಾರ ಉನ್ನತ ಹಂತದಲ್ಲಿ ತನಿಖೆಯನ್ನು ಮಾಡುವಂತೆ ಕುಮಾರ್ ನಾಯಕ್ ಸರಕಾರಕ್ಕೆ ಆಗ್ರಹಿಸಿದ್ದಾರೆ. ಪರೀಕ್ಷೆಯ ಸಮಯ ತುಂಬಾ ಹತ್ತಿರವಿದ್ದು ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥ ಮಾಡದೇ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲನ್ನು ಧರಿಸದೇ ಕಾಲೇಜು ಸಮವಸ್ತ್ರವನ್ನು ಧರಿಸಿ ವಿದ್ಯಾರ್ಜನೆ ಕಡೆ ಗಮನ ಹರಿಸಿ ಎಂಬುವುದು ಕುಮಾರ್ ನಾಯಕ್ ಆಶಯವಾಗಿದೆ. ಸಮಾಜದ ಐಕ್ಯತೆಗಾಗಿ ಮತ್ತು ಯುವಕರ ಒಗ್ಗಟ್ಟಿಗಾಗಿ ಶಾಲಾ ಕಾಲೇಜುಗಳಲ್ಲಿ ಸರಕಾರ ವಸ್ತ್ರ ಸಂಹಿತೆ  ಹೇಗಿರಬೇಕೆಂದು ಸುತ್ತೋಲೆಯ ಮೂಲಕ ಸೂಚಿಸಿರುವುದನ್ನು ಪಾಲನೆ ಮಾಡುವಂತೆ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಕಮಾರ್ ನಾಯಕ್, ಮಾಧ್ಯಮ ಮೂಲಕ ಮನವಿ ಮಾಡಿದ್ದಾರೆ  – ಕುಮಾರ್ ನಾಯಕ್ ವಿದ್ಯಾರ್ಥಿ ಯುವ ಮುಖಂಡ ಸಿರುಗುಪ್ಪ…

ವರದಿ – ಮಹೇಶ ಶರ್ಮಾ ಅಥಣಿ

Leave a Reply

Your email address will not be published. Required fields are marked *