5ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿ ಮೂವರಿಂದ ಕೇಶ ಮಂಡಣೆ ಮಾಡುವ ಮೂಲಕ ನ್ಯಾಯಧೀಶರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಟ್ಟು ಹೀಡಿದ ಸಂವಿಧಾನ ಹಿತಾ ರಕ್ಷಣಾ ಸಮಿತಿ ತಾವರಗೇರಾ.

Spread the love

5ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿ ಮೂವರಿಂದ ಕೇಶ ಮಂಡಣೆ ಮಾಡುವ ಮೂಲಕ ನ್ಯಾಯಧೀಶರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಟ್ಟು ಹೀಡಿದ ಸಂವಿಧಾನ ಹಿತಾ ರಕ್ಷಣಾ ಸಮಿತಿ ತಾವರಗೇರಾ.

ತಾವರಗೇರಾ ಪಟ್ಟಣದಲ್ಲಿಂದು 5ನೇ ದಿನಕ್ಕೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಈ ಹೋರಾಟಕ್ಕೆ ಬೆನ್ನೆಲುಭಾಗಿ ವಿಶೇಷವಾಗಿ ಸುಡುಗಾಡು ಸಿದ್ದ ಸಮಾಜ ಹಾಗೂ ಬುಡುಗ ಜಂಗಮ ಸಮಾಜದವರಿಂದ ಈ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಸಂವಿಧಾನ ಹಿತ ರಕ್ಷಣಾ ಸಮೀತಿವತಿಯವರಿಗೆ ಬೆಂಬಲ ನೀಡಿದರು. ಡಾ॥ ಅಂಬೇಡ್ಕರ್ ಶಿಲ್ಪಿಗೆ ಮಾಲರ್ಪಣೆ ಮಾಡುವ ಮೂಲಕ ಕಾರ್ಯಕಮಕ್ಕೆ ಚಾಲನೆ ನೀಡಿದರು. ಉಪವಾಸ ಸತ್ಯಾಗ್ರಹದಲ್ಲಿ ಪಾಲುಗೊಂಡವರಾದ 1) ಯಮನೂರಪ್ಪ ಬಿಳೆಗುಡ್ಧ 2) ಅಲಿಆದಿಲ್ ವರದಿಗಾರರು 3) ಶ್ಯಾಮೀದಸಾಬ ಮೆಣೇದಾಳ 4) ಹನುಮೇಶ ಬಜೇಂತ್ರಿ 5) ಅಶೋಕ ಬಜೇಂತ್ರಿಯವರು ಪಾಲುಗೊಂಡರು. ನ್ಯಾಯಧೀಶರ ವಿರುದ್ದ ಹಲವು ಘೋಷಣೆ ಕೂಗುವುದರ, ಜೊತೆಗೆ ಹೋರಾಟದ ಹಾಡುಗಳನ್ನ ಹಾಡುವ ಮೂಲಕ ಯುವಕರಿಗೆ ಹುರಿದುಂಬಿಸಿದರು. ಈ ಹೋರಾಟಕ್ಕೆ ತಾವರಗೇರಾ ಪಟ್ಟಣದ ಹಿರಿಯ ನಾಯಕರು ಹಾಗೂ ಬುದ್ದಿ ಜೀವಿಗಳು ಜೊತೆಗೆ ಸಂಘ/ಸಂಸ್ಥೆಯವರು ಬೆಂಬಲ ನೀಡಿದರು. ಈ ದಿನದೊಂದು ವಿಶೇಷವಾಗಿ ಸಮಾಜದ ಹಿತಾ ಚಿಂತಕರು,ಹಾಗೂ ದಲಿತ ಹಾಗೂ ಹೋರಾಟ ಮಹಿಳೆಯರು ಈ ಉಪವಾಸ ಸತ್ಯಾಗ್ರಹದಲ್ಲಿ  ಪಾಲಗೊಂಡರು. ಇಂದು ಈ ಹೋರಾಟದಲ್ಲಿ ಕೇಶ ಮಂಡಣೆ ಕಾರ್ಯಕ್ರಮವು ವಿಶೇಷವಾಗಿ ಜರುಗಿತು. ಕಾರಣ ಪ್ರತಿಯೊಂದು ಹೋರಾಟವು ದಿನ ದಿನೆ ವಿಶೇಷವಾಗಿ ಹೋರಾಟ ಹಮ್ಮಿಕೊಂಡರೆ ಅದುವೆ ಒಂದು ಹೋರಾಟದ ಕಿಚ್ಚು ಎಂದು ಹೇಳಿದರು. ಕೇಶ ಮಂಡನೆ ಮಾಡಿದವರು 1) ರಾಜಾನಾಯಕ 2) ಹೇಮರಾಜ ವೀರಾಪುರ 3) ಸುರೇಶ ಕಂಬನಿ ರವರು ಪಾಲುಗೊಂಡು. ಕೇಶ ಮಂಡಣೆ ನೀಡಿದರು. ಈ ಕೂಡಲೆ ವಕೀಲರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಈ ಹೋರಾಟವು ಮುಂದಿನ ದಿನಮಾನಗಳಲ್ಲಿ ಇನ್ನೂ ವಿಶೇಷವಾಗಿ ಉಪವಾಸ ಸತ್ಯಾಗ್ರಾಹ ಮುಂದುವರೆಯುತ್ತದೆ ಎಂದು ತಾವರಗೇರಾ ಪಟ್ಟಣದ ಸಂವಿಧಾನ ಹಿತಾ ರಕ್ಷಣಾ ಸಮೀತಿಯು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಉಪವಾಸ ಸತ್ಯಾಗ್ರಹ ಕುರಿತು ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ಮುಖೀಯಾಜಿಯವರು ಈ ಹೋರಾಟವು ಇಲ್ಲಿಗೆ ಬಿಡುವುದಿಲ್ಲ ಮುಂದಿನ ದಿನಮಾನಗಳಲ್ಲಿ ಕೆವಲ ಉಪವಾಸ ಕೂಡುವುದರ ಜೊತೆಗೆ ತಾವರಗೇರಾ ಹೋಬಳಿಯ ಜನರು ಸಹಕರಿಸಬೇಕೆಂದು ತಮ್ಮ ಮನದಾಳದ ಮಾತನ್ನ ಹೇಳಿದರು. ಜೊತೆಗೆ ಈ ಜಾಬ್ ಗಲಾಟೆ. ಕೇಸರಿ ಗಲಾಟೆ ಮಾಡುವ ಬದಲು ಡಾ॥ ಅಂಬೇಡ್ಕರ್ ಸಮಾಜಕ್ಕೆ ನೀಡಿರುವ ಹಲವು ಕೊಡುಗೆಗಳನ್ನ ಮರೆತು, ನ್ಯಾಯಧೀಶ ವಕೀಲರು ನೀಡಿರು ಹೇಳಿಕೆ ಮಾರೆಮಾಚುವುದಕ್ಕೆ ಈ ಎಲ್ಲಾ ಪಿತೂರಿಗಳು ಎಂದು ಸಣ್ಣ ಹನುಮಂತ ಹುಲಿಹೈದರ ಹೇಳಿದೂ. ಇದರ ಜೊತೆಗೆ ಹಿರಿಯ ಸಮಾಜ ಚಿಂತಕರು ಶ್ಯಾಮಿದ ದೋಟಿಹಾಳರವರು ಈ ಹೋರಾಟದ ಕುರಿತು. ಹಲವು ಕೆಡಕುಗಳನ್ನು ಹುಟ್ಟಿಸುತ್ತಿರುವ ರಾಜಕೀಯ ಈ ಸರ್ಕಾರದ ವಿರುದ್ದ ದಂಗೆ ಎದ್ದರು. ನಿವೇನಾದರು ಈ ಹೋರಾಟಕ್ಕೆ ಶೆಡ್ಡಾಂತರ ರೂಪಿಸಿದರೆ ನಾವು ಬೀಡುವುದಿಲ್ಲ ಎಂದರು. ಅಪಮಾನ ಮಾಡಿದಂತ ವಕೀಲನ್ನು ಕೂಡಲೆ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಈ ವಕೀಲರಿಗೆ ಸರ್ಕಾರವೇ ಸಾತ್ ನೀಡುವ ತಂತ್ರ ರೂಪಿಸಿದರೆ ನಿಮಗೆ ಮುಂದೆ ಉಳಿಗಾಲವಿಲ್ಲವೆಂದರು. ಹಾಗೇ  ಇಡಿ ರಾಜ್ಯದ್ಯಾಂತ ನ್ಯಾಯಧೀಶರವಿರುದ್ದ ದಲಿತರು, ಅಲ್ಪಸಂಖ್ಯಾತರು,ಪ್ರಗತಿ ಪರ ಸಂಘಟಕರು ಪಾಲುಗೊಂಡು ಹುಸೇನಪ್ಪ ಮುದೇನೂರು ರವರು ಈ ಹೋರಾಟದ ಕುರಿತು ಪ್ರತಿಯೊಬ್ಬರು ಧ್ವನಿ ಸರ್ಕಾರಕ್ಕೆ ಮುಟ್ಟಬೇಕು ನಮಗೆ ನ್ಯಾಯ ಸಿಗುವುತನಕ ಈ ನಮ್ಮ ನಿರಂತರ ಹೋರಾಟ ಹಮ್ಮಿಕೋಳ್ಳಬಲಾಗುವುದೆಂದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *