(ಹೊಟ್ಟೆ ಹಸಿದ( ನಾಯಿ) ಬಾಳು ಬಡವ)

Spread the love

(ಹೊಟ್ಟೆ ಹಸಿದ( ನಾಯಿ) ಬಾಳು ಬಡವ)

 ಹಸಿದ ನಾಯಿ ಒಂದು ಇತ್ತು

ದಿನಾಲು ಹೊಟ್ಟೆಗಾಗಿ ಅಡವಿ ತಿರುಗತ್ತಿತ್ತು

ಮರದ ಕೆಳಗೆ ಇಟ್ಟ ರೈತರ ಊಟದ ಬುತ್ತಿ

ತುಡುಗು ಮಾಡಿಕೊಂಡು ಹೋಗುತ್ತಿತ್ತು

 

ತುಡುಗುಮಾಡಿದ ಅನ್ನ ತಿಂದುಉಳಿಯುತ್ತಿತ್ತು

ಅದನ್ನು ಅಲ್ಲೇ ಬಿಟ್ಟು ಹೋಗುತ್ತಿತ್ತು

ಹಳ್ಳ ಕೆರೆ ಹೊಲಗದ್ದೆಗಳಲ್ಲಿ ನೀರು ಕುಡಿಯುತ್ತಿತ್ತು

ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿತ್ತು

 

ಸಂಚರಿಸುತ್ತಾ ಊರ ಕಡೆಗೆ ಸಾಗುತ್ತಿತ್ತು

ರಾತ್ರಿ ಮಠ ಮಸೀದಿಗಳಲ್ಲಿ ಮಲಗುತ್ತಿತ್ತ

ಮಾಲೀಕ ನೊಬ್ಬ ತನ್ನ ನಾಯಿಗೆ ಅನ್ನ ಹಾಕೋದು ನೋಡುತ್ತಿತ್ತು

ಅಡವಿ ನಾಯಿ ನೋಡಿ ಕಣ್ಣಲ್ಲಿ ನೀರು ಸುರಿಸುತ್ತಿತ್ತು

 

ನಾಯಿಯಂತೆ ಬಡವರ ಬಾಳು ಆಯಿತು

ಹೊಟ್ಟೆ ತುಂಬಿಸಿಕೊಳ್ಳಲಿಕೆ ಕೂಲಿ ಮಾಡುತ್ತಿದ್ದ

ಬಂದ ಹಣ ದಿನವಿಡೀ ಹೊಟ್ಟೆಗೆ ಆಗುತ್ತಿತ್ತು

 ಇವನ ಬಾಳು ಚಿತ್ರಕ್ಕೆ ಬಣ್ಣ ತುಂಬಾದಂತಾಯಿತು

 ಹಣಇದ್ದ ಜನ ವೇಷಭೂಷಣದಲ್ಲಿ ಮುಳುಗಿತ್ತ

ಇದನ್ನು ನೋಡಿ ಬಡವನ ಮನಸ್ಸು  ಮರಗತ್ತಿತ್ತು

ನಾಯಿಯಂತೆ ಆಯಿತು ಬಡವರ ಬದುಕು ಇವತ್ತು

ನಿಯತ್ತಾಗಿ ಇದ್ದ ಮನುಷ್ಯನಿಗಿಲ್ಲ ಯಾವತ್ತು ಸಂಪತ್ತು

ಮೌನೇಶ ಇಟಗಿ ತಾ ಕುಷ್ಟಗಿ ಜಿಲ್ಲಾ ಕೊಪ್ಪಳ

Leave a Reply

Your email address will not be published. Required fields are marked *