ತಾವರಗೇರಾ ಪಟ್ಟಣದಲ್ಲಿಂದು ಸಂವಿಧಾನ ಹಿತಾ ರಕ್ಷಣಾ ಸಮಿತಿ ಮೂವರಿಂದ ಉಪವಾಸ ಸತ್ಯಗ್ರಾಹ 3ನೇ ದಿನಕ್ಕೆ ಹಲವು ಮಾಹನಿಯರಿಂದ ಬೆಂಬಲ.

Spread the love

ತಾವರಗೇರಾ ಪಟ್ಟಣದಲ್ಲಿಂದು ಸಂವಿಧಾನ ಹಿತಾ ರಕ್ಷಣಾ ಸಮಿತಿ ಮೂವರಿಂದ ಉಪವಾಸ ಸತ್ಯಗ್ರಾಹ 3ನೇ ದಿನಕ್ಕೆ ಹಲವು ಮಾಹನಿಯರಿಂದ ಬೆಂಬಲ.

ತಾವರಗೇರಾ ಪಟ್ಟಣದ ಸಂವಿಧಾನ ಹಿತ ರಕ್ಷಣಾ ಸಮೀತಿವತಿಯಿಂದ ತಾವರಗೇರಾ ಬಂದ ಕಾರ್ಯಕ್ರಮ ಮುಂದುಡಿಸಿ ಇಂದು ಡಾಬಿ.ಆರ್. ಅಬೇಡ್ಕರ್ ವೃತ್ತದಲ್ಲಿ ಇಂದು ಮೂವರಿಂದ ಸರಣಿ ಉಪವಾಸ ಸತ್ಯಗ್ರಾಹ ಪ್ರಾರಂಭಿಸಿದರು. ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ  ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ದೂರು ಕೋರಿ. ದಿನಾಂಕ 26-01-20 22 ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆಗಣರಾಜ್ಯೋತ್ಸವ  ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯದೀಶ  ಮಲ್ಲಿಕಾರ್ಜುನ್ ಗೌಡ, ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು  ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ ಇವರು ನ್ಯಾಯದೀಶ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ. ಇದು ರಾಯಚೂರ್ ಜಡ್ಜ್ ದೇಶ ದ್ರೋಹ ಕೃತ್ಯ. ಕೂಡಲೇ  ರಾಷ್ಟ್ರದ್ರೋಹ ಪ್ರಕರಣವನ್ನ ದಾಖಲೀಸಬೇಕು. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂವಿಧಾನ ಹಿತ ರಕ್ಷಣಾ ಸಮಿತಿವತಿಯಿಂದ ಇಂದು ಮೂವರಿಂದ ಉಪವಾಸ ಸತ್ಯಗ್ರಾಹ ಹಮ್ಮಿಕೊಂಡರು 1) ಹೇಮರಾಜ್ ವೀರಾಪೂರು, ಗೌತಮ್ ಬಂಡಾರಿ, ಮಹಾಂತಮ್ಮ ಪಾಟೀಲ್ ಇವರು ಉಪವಾಸ ಸತ್ಯಗ್ರಾಹ ಹಮ್ಮಿಕೊಂಡು ಪ್ರಭಲವಾದ ಬೇಡಿಕೆಯನ್ನು ಮುಂದಿಟ್ಟುಕೊಂಡ ವಿಷಯ :- ಶ್ರೀ ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ  ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ಕೂಡಲೆ ದೂರು ದಾಖಲಾಗುಬೇಕು. ಇಲ್ಲದಿದ್ದರೆ ನಿರಂತರ ಉಪವಾಸ ಸತ್ಯಗ್ರಾಹ ಧರಣಿ ಹಮ್ಮಿಕೊಳ್ಳುತ್ತೆವೆ ಎಂದು ಹೇಳಿಕೆ ನೀಡಿದರು. ನ್ಯಾಯಧೀಶರ ವಿರುದ್ದ ಹಲವು ಘೋಷಣೆ ಕೂಗಿದರು, ಜೊತೆಗೆ ಹೋರಾಟದ ಗೀತೆಗಳನ್ನ ಹಾಡುವ ಮೂಲಕ ಯುವಕರಿಗೆ ಹುರಿದುಂಬಿಸಿದರು. ಹೋರಾಟಕ್ಕೆ ತಾವರಗೇರಾ ಪಟ್ಟಣದ ಹಿರಿಯ ನಾಯಕರು ಹಾಗೂ ಬುದ್ದಿ ಜೀವಿಗಳು ಜೊತೆಗೆ ಸಾರ್ವಜನಿಕರು ಸಹ ಬೆಂಬಲ ನೀಡಿದರು. ಇಂದು 3ನೇ ದಿನಕ್ಕೆ ಕಾಲಿಟ್ಟಿದ್ದು, ಈ ಉಪವಾಸ ಸತ್ಯಗ್ರಾಹದಲ್ಲಿ ಪುನಃಹ ಮೂವರು ಪಾಲುಗೊಂಡಿದ್ದು ಇರುತ್ತದೆ, ಹೇಮರಾಜ ವೀರಾಪುರ, ಗೌತಮ್ ಬಂಡಾರಿ, ಮಹಾಂತಮ್ಮ ಪಾಟೀಲ್ ಇಂದು ಹೊಸದಾಗಿ ಈ ಹೋರಾಟಗಾರರಿಗೆ ಸಾತ್ ನೀಡುವುದರ ಜೊತೆಗೆ ಉಪವಾಸ ಸತ್ಯಗ್ರಾಹದಲ್ಲಿ ಪಾಲುಗೊಂಡಿರುವುದು ವಿಶೇಷವಾಗಿದೆ ಇಂದು ಮುಸ್ಲೀಂ ಸಮಾಜದ ಮಹೀಳಾ ಸಂಘಟಕರು  ಭಾಗಿಯಾಗಿ ಶ್ರೀಮತಿ ನಾಸೀರಾ ಬೇಗಂ ಹಣಗಿಯವರು,  ಡಾ// ಅಂಬೇಡ್ಕರರವರಿಗೆ ಅವಮಾನ ಮಾಡಿದ ನ್ಯಾಯ ದೀಶರನ್ನು ಈ ಕೂಡಲೆ ಅವರ ಹುದ್ದೆಯಿಂದ ಅಮಾನತು ಗೊಳಿಸಬೇಕು, ಅವರ ಕಾನೂನು ಕ್ರಮ ಶಿಕ್ಷೆಕ್ಕೆ ತೆಗೆದುಕೊಳ್ಳಬೇಕು ಎಂದು ತಮ್ಮ ಮನದಾಳ ಮಾತನ್ನು ಆಕ್ರೋಶದ ಮೂಲಕ ವ್ಯಕ್ತ ಪಡಿಸಿದರು. ಹಾಗೂ ವೀರಭದ್ರಪ್ಪ ನಾಲತವಾಡ್ ಮಾಜಿ ಅಧ್ಯಕ್ಷರು, ಮುಸ್ಲಿಂ ಸಮಾಜದ ಹಿತಾ ಚಿಂತಕರು ಈ ಉಪವಾಸ ಸತ್ಯಾಗ್ರಹದಲ್ಲಿ  ಭಾಗಿಯಾಗಿದ್ದರು.

(ಈ  ಉಪವಾಸ ಸತ್ಯಗ್ರಾಹದಲ್ಲಿ ಪಾಲುಗೊಂಡಿದ್ದವರಲ್ಲಿ ಹೇಮರಾಜ ವೀರಾಪುರರವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಕಾರ್ಯ ನಡೆಯಿತು.)

ಸಂಬಂದಪಟ್ಟ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಈ ಹೋರಾಟವು ಮುಂದಿನ ದಿನಮಾನಗಳಲ್ಲಿ ಕಠೀಣ ಉಪವಾಸ ಸಂತ್ಯಗ್ರಾಹ ಮುಂದುವರೆಯುತ್ತದೆ ಎಂದು ತಾವರಗೇರಾ ಪಟ್ಟಣದ ಸಂವಿಧಾನ ಹಿತಾ ರಕ್ಷಣಾ ಸಮೀತಿಯು ತೀರ್ಮಾನ ಕೈಗೊಂಡಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *