ಬಜೆಟ್​ನಲ್ಲಿ ‘ಬಡವರು’ ಪದ ಉಲ್ಲೇಖ: ದೇಶದಲ್ಲಿ ಬಡವರಿದ್ದಾರೆಂಬುದನ್ನ ನೆನಪಿಸಿದ ಸಚಿವರಿಗೆ ಧನ್ಯ; ಚಿದಂಬರಂ

Spread the love

ಬಜೆಟ್ನಲ್ಲಿಬಡವರುಪದ ಉಲ್ಲೇಖ: ದೇಶದಲ್ಲಿ ಬಡವರಿದ್ದಾರೆಂಬುದನ್ನ ನೆನಪಿಸಿದ ಸಚಿವರಿಗೆ ಧನ್ಯ; ಚಿದಂಬರಂ

ನವದಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಸುಮಾರು 90 ನಿಮಿಷಗಳ ಕಾಲ ಆಯವ್ಯಯ ಪ್ರತಿಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಕೇಂದ್ರದಿಂದ ಮಂಡನೆಯಾಗಿರುವ ಬಜೆಟ್​ಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಮಾತನಾಡಿ, ಹಣಕಾಸು ಸಚಿವೆ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್​​ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಂಡವಾಳಶಾಹಿ ಪರವಾದ ಬಜೆಟ್​​ ಆಗಿದೆ ಎಂದರು. ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ನಲ್ಲಿ ಕೇವಲ ಎರಡು ಸಲ ‘ಬಡವರು'(poor) ಎಂಬ ಪದದ ಉಲ್ಲೇಖವಾಗಿದೆ. ಈ ಮೂಲಕ ದೇಶದಲ್ಲಿ ಬಡವರು ಇದ್ದಾರೆ ಎಂಬುದನ್ನ ನೆನಪಿಸಿಕೊಂಡಿರುವ ಅವರಿಗೆ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯವಾಡಿದರು. ಬಡವರು ಈ ಬಜೆಟ್​​ ಅನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಎಂದರು.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *