12ನೇ ವರ್ಷದ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಮಹಾಪ್ರಸಾದ ಮಾಡಿಸಿ ಕಾರುಣ್ಯ ಕುಟುಂಬದ ಕೂಸುಗಳ ಹಸಿವು ನೀಗಿಸುವ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಆಶ್ರಮಕ್ಕೆ ಅಕ್ಕಿ ವಿತರಿಸಿದರು…..

Spread the love

12ನೇ ವರ್ಷದ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಮಹಾಪ್ರಸಾದ ಮಾಡಿಸಿ ಕಾರುಣ್ಯ ಕುಟುಂಬದ ಕೂಸುಗಳ ಹಸಿವು ನೀಗಿಸುವ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಆಶ್ರಮಕ್ಕೆ ಅಕ್ಕಿ ವಿತರಿಸಿದರು…..

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾರುಣ್ಯ ಕುಟುಂಬದ ಮಾರ್ಗದರ್ಶಕರು ಕಾರುಣ್ಯ ಕಣ್ಮಣಿಗಳು  ಕಾರುಣ್ಯ ಕುಟುಂಬದ ಯಜಮಾನರಾದ ಕಾರುಣ್ಯ ಕರುಣಾಮಯಿಗಳಾದ ಕಾರುಣ್ಯ ಮಾತೆ ಶ್ರೀ ಮತಿ ತಾರಾಬಾಯಿ ಅಮರೇಶ ಬಳಗುಂಡ ಶಿಕ್ಷಕರು ಸಹನಾ ಮಾಂಟೆಸ್ಸರಿ ಸ್ಕೂಲ್ ಶ್ರೀ ಅಮರೇಶ ಬಳಗುಂಡ ಸಹನಾ ಮಕ್ಕಳ ಆಸ್ಪತ್ರೆ ಸಿಂಧನೂರು ಇವರ ಪ್ರೀತಿಯ ಮಗನಾದ ಕುಮಾರ ಪೃಥ್ವಿರಾಜ ಬಳಗುಂಡ ಇವರ 12ನೇ ವರ್ಷದ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಮಹಾಪ್ರಸಾದ ಮಾಡಿಸಿ ಕಾರುಣ್ಯ ಕುಟುಂಬದ ಕೂಸುಗಳ ಹಸಿವು ನೀಗಿಸುವ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಆಶ್ರಮಕ್ಕೆ ಅಕ್ಕಿ ವಿತರಿಸಿ  ಎಲ್ಲಾ ವೃದ್ಧರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಹಣ್ಣುಹಂಪಲುಗಳನ್ನು ಹಾಗೂ ಬ್ರೆಡ್ ಬಿಸ್ಕೆಟ್ ಹಾಲು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.ಈ ಕಾರ್ಯಕ್ರಮದಲ್ಲಿ ಶ್ರೀಮತಿ ಗಂಗಮ್ಮ ಶಾಂತಪ್ಪ ಗಬ್ಬೂರು ತಾ/ದೇವದುರ್ಗ ಇವರು ಪೃಥ್ವಿರಾಜ ಅವರ ಹುಟ್ಟುಹಬ್ಬದ ಅಂಗವಾಗಿ ಆಶ್ರಮಕ್ಕೆ 25 ಕೆಜಿ ಅಕ್ಕಿ ವಿತರಿಸಿದರು. ವಿರುಪಾಕ್ಷಿ ಗೌಡ ಪಾಟೀಲ್  ಹಾಗೂ ಅವರ ಅಪಾರ ಕುಟುಂಬ ಬಳಗ ಪಾಲ್ಗೊಂಡು ಪೃಥ್ವಿರಾಜ ಬಳಗುಂಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿದರು. ಈ ಸಮಯದಲ್ಲಿ ಎಲ್ಲಾ ವೃದ್ಧರು ಹಾಗೂ ಬುದ್ದಿಮಾಂದ್ಯರು ಒಳಬಳ್ಳಾರಿ ಲಿಂಗೈಕ್ಯ ಶ್ರೀ ಚನ್ನಬಸವ ಮಹಾ ಶಿವಯೋಗಿಗಳ ಹಾಗೂ ಸಕಲ ದೇವಾನುದೇವತೆಗಳಲ್ಲಿ ಪ್ರಾರ್ಥನೆ ಮಾಡಿ ನಮ್ಮ ಕಾರುಣ್ಯ ಕುಟುಂಬದ ಮಗ ಮೊಮ್ಮಗ ನಾಗಿರುವ ಕುಮಾರ ಪೃಥ್ವಿರಾಜ ವಿಶ್ವಮಟ್ಟದಲ್ಲಿ ಅತ್ತುನ್ನತ ಸ್ಥಾನಮಾನವನ್ನು ಗಳಿಸಿ ಅವರ ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿ ಉತ್ತಮ ಆರೋಗ್ಯ ಆಯಸ್ಸು ಕರುಣಿಸಿ ಅವರಿಗೂ ಹಾಗೂ ಅವರ ಅಪಾರ ಕುಟುಂಬದವರಿಗೆ ಇನ್ನೂ ಹೆಚ್ಚಿನ ಸಕಲ ಐಶ್ವರ್ಯ ಸಿರಿ ಸಂಪತ್ತು ಆಯಸ್ಸು ಆರೋಗ್ಯವನ್ನು ಕರುಣಿಸಿರಿ ಎಂದು ಬೇಡಿಕೊಂಡು ಪೃಥ್ವಿರಾಜ  ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿ ಆಶೀರ್ವದಿಸಿದರು.ಈ ಸಮಯದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವಸ್ವಾಮಿ ಹಿರೇಮಠ ಮಾತನಾಡಿ ಸಹನಾ ಆಸ್ಪತ್ರೆ ಹಾಗೂ ಶಾಲೆಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಈ ದಂಪತಿಗಳು ತಮ್ಮ ಮಗನ ಹುಟ್ಟು ಹಬ್ಬವನ್ನು ಇಂತಹ ಕಾರುಣ್ಯ ಕುಟುಂಬದಲ್ಲಿ ಆಚರಿಸುತ್ತಿರುವುದು ಸಮಾಜಕ್ಕೆ ವಿಶೇಷ ಸಂದೇಶವನ್ನು ಕೊಡುತ್ತದೆ. ಅಲ್ಲದೆ ಸಹನಾ ಆಸ್ಪತ್ರೆಯಿಂದ ನಮಗೆ ನಿರಂತರ ಸಹಾಯ ದೊರೆಯುತ್ತಿದೆ. ಅಲ್ಲದೆ ಇಲ್ಲಿನ ಸಿಬ್ಬಂದಿಗಳು ಸಹಿತ ಆಶ್ರಮದ ಎಲ್ಲಾ ಕಷ್ಟ-ಸುಖಗಳಿಗೆ ಭಾಗಿಯಾಗಿ ಅನಾಥಪರ ಸೇವೆಗೆ ಶಕ್ತಿ ತುಂಬುತ್ತಿದ್ದಾರೆ.ಈ ಕುಟುಂಬ ನಮ್ಮಂತಹ ನೊಂದು ಬೆಂದ ಜೀವಿಗಳಿಗೆ ಹಸಿವು ನೀಗಿಸಿ  ಮಹಾಪ್ರಸಾದ ಮಾಡಿಸಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಆತ್ಮೀಯತೆಯ ಮಮತೆಯ ಪ್ರೀತಿಯನ್ನು ಧಾರೆ ಎರೆಯುವುದರ ಮೂಲಕ  ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕುಮಾರ ಪೃಥ್ವಿರಾಜ ಅವರ ಕುಟುಂಬ  ಸಮಾಜಕ್ಕೆ ಮಾದರಿಯಾಗಿದೆ.ಎಂದು ಭಾವುಕರಾಗಿ ಮಾತನಾಡಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿ ಸನ್ಮಾನಿಸಿ ಗೌರವಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *