ಅಮರಣಾಂತ ಉಪವಾಸ ಸತ್ಯಾಗ್ರಹ ಸಿರುಗುಪ್ಪ …..

Spread the love

ಅಮರಣಾಂತ ಉಪವಾಸ ಸತ್ಯಾಗ್ರಹ ಸಿರುಗುಪ್ಪ …..

ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ನಗರದಲ್ಲಿನ ವಿವಿಧ ಅಕ್ಕಿಗಿರಿಣಿಗಳಿಂದ ಬರುವ ಕಪ್ಪು ಬೂದಿ ನಿಯಂತ್ರಣ, ರಸ್ತೆಯಲ್ಲಿನ ದೂಳು ನಿಯಂತ್ರಣ, ತಾಲೂಕಿನಲ್ಲಿ ಗೋಶಾಲೆ ನಿರ್ಮಿಸುವಂತೆ ಒತ್ತಾಯಿಸಿ ಶ್ರೀರಾಮ ಸೇನಾ  ಜಿಲ್ಲಾಧ್ಯಕ್ಷ ಕಂಬಳಿ ಮಲ್ಲಿಕಾರ್ಜುನ ನೇತೃತ್ವದಲ್ಲಿ 2ನೇ ದಿನದ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ದಿ ಜಿಲ್ಲಾ ಘಟಕ, ತಾಲೂಕು ಅರ್ಚಕ ಮತ್ತು ಪುರೋಹಿತ ಪರಿಷತ್ ತಾಲೂಕು ಘಟಕ, ತಾಲೂಕು ಕುರುಬ ಸಮಾಜ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಗೋವುಗಳ ಮತ್ತು ನಗರದ ಹಿತರಕ್ಷಣೆಗಾಗಿ ಬೆಂಬಲ ನೀಡಿದರು. ಸತ್ಯಾಗ್ರಹದ ನಡೆಯುತ್ತಿರುವ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾಧಿಕಾರಿ ಕಿರಣ ಕುಮಾರ ತಂಡವು ಭೇಟಿ ನೀಡಿ ಆಮರಣಾಂತ ಉಪವಾಸ ನಿರತ ಸಂಘಟನೆಗಾರೊ0ದಿಗೆ ಚರ್ಚಿಸಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾಧಿಕಾರಿ ಕಿರಣ್‌ಕುಮಾರ್ ಮಾತನಾಡಿ ಈ ನಗರದಲ್ಲಿ ಅಕ್ಕಿ ಗಿರಣಿಗಳಾದ ಕೈಗಾರಿಕಾ ಕಾರ್ಖಾನೆಗಳಿಂದ ಬರುವ ಕಪ್ಪು  ಬೂದಿಯ ನಿಯಂತ್ರಣ ಕುರಿತು ಮನವಿ ಸಲ್ಲಿಸಿದ್ದಾರೆ, ಈ ಅರ್ಜಿಯ ಮೇರೆಗೆ ತಾಲೂಕಿನ ಅಕ್ಕಿಗಿರಿಣಿ ಮಾಲೀಕರೊಂದಿಗೆ ಹಾಗೂ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಚರ್ಚಿಸಲಾಗಿದೆ ಎರಡು ಮೂರು ದಿನಗಳ ಒಳಗೆ ನಿರ್ಧಾರವ್ನನು ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು. ಈ ಮೊದಲು ಸೋಮವಾರ ರಾತ್ರಿ 7ಕ್ಕೆ ತಹಶೀಲ್ದಾರರು ಭೇಟಿ ನೀಡಿ ಕಳೆದ ಕೆಲವು ದಿನಗಳ ಹಿಂದೆ ಇದಕ್ಕೆ ಸಂಬ0ದಿಸಿದ0ತೆ ವಾಯುಮಾಲಿನ್ಯ ಅಧಿಕಾರಿಗಳು ಮತ್ತು ಅಕ್ಕಿಗಿರಣಿ ಮಾಲಿಕರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಕ್ಕಾಗಿ ಸೂಚಿಸಿದ್ದು, ನಿಮ್ಮೆಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಕೆಲವೇ ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸಿ ವ್ಯವಸ್ಥೆ ಸರಿಪಡಿಸುವುದಾಗಿ ನಿಮ್ಮ ಆರೋಗ್ಯದ ದೃಷ್ಟಿಯಿಂದ ಸತ್ಯಾಗ್ರಹಕ್ಕೆ ತಾತ್ಕಾಲಿಕ ವಿರಾಮ ನೀಡುವಂತೆ ಹಣ್ಣಿನ ಜ್ಯೂಸ್ ಕುಡಿಯುವಂತೆ ಮನವೊಲಿಸಿದರು. ಅದಕ್ಕೊಪ್ಪದ ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಸಮಸ್ಯೆಗೆ ಪರಿಹಾರ ಸಿಗಬೇಕೆಂದು ಒತ್ತಾಯಿಸಿದರು. ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published.