ಐನಾಪುರ: ಮಕ್ಕಳಗೆ ಸರಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು ಇಲ್ಲಿ ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿಸಲಾಗುತ್ತದೆ ಎಂದು ಮುಖ್ಯೋಪಾಧ್ಯಾಯ ಬಿ.ಎಸ್.ಹುವಣ್ಣವರ  ಹೇಳಿದರು.

Spread the love

ಐನಾಪುರ: ಮಕ್ಕಳಗೆ ಸರಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು ಇಲ್ಲಿ ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿಸಲಾಗುತ್ತದೆ ಎಂದು ಮುಖ್ಯೋಪಾಧ್ಯಾಯ ಬಿ.ಎಸ್.ಹುವಣ್ಣವರ  ಹೇಳಿದರು.

ದಿ 4ರಂದು ಪಟ್ಟಣದ ನಮ್ಮೂರ ಸರಕಾರಿ ಹೆಣ್ಣು ಮಕ್ಕಳ  ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಅಭಿವೃದ್ಧಿ ,ರಚನೆ ಕರ್ತವ್ಯ ಜವಾಬ್ದಾರಿಹಾಗೂಎನ್ ಇಪಿ ಎಸ್,ಎಸ್ ಡಿ ಪಿ,ಎಸ್ ಎ ಪಿ,ಎಪ್ ಎಲ್ ಎನ್ ಒ ಒ ಎಸ್ ಸಿ ಸಿ ಡಬ್ಲು ಕುರಿತು ಮೊದಲ ಸಭೆಯಲ್ಲಿ ಅವರು ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಪಾಲಕರು ಖಾಸಗಿ ಶಾಲೆಗಳ ಕಡೆಗೆ ಮುಖಮಾಡುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಹಲವು ಯೋಜನೆಗಳಿದ್ದು ಅಕ್ಕರೆಯೊಂದಿಗೆ ಪರಿಣಾಮಕಾರಿ ಹಾಗು ರಾಂಕ ಪಡೆದವರು ಸರಕಾರಿ ಶಾಲೆಯಲ್ಲಿ ಪಾಠ ಬೋಧನೆ ಮಾಡಲಾಗುತ್ತಿದೆ ಇದ್ದರಿಂದ ಉನ್ನತ ಶಿಕ್ಷಣ ಪಡೇದ ಹಲವಾರು ವಿದ್ಯಾರ್ಥಿಗಳು ಉನ್ನತ ಸ್ಥಾನ ಅಲಂಕರಿಸಿದಾರೆ. ಮಕ್ಕಳ ದಿನ ನಿತ್ಯದ ಚಟುವಟಿಕೆಯ ಬಗ್ಗೆ ಪಾಲಕರು ತಿಳಿದಿಕೊಳ್ಳುವುದು ಅವಶ್ಯಕವಾಗಿದ್ದು ಈ ರೀತಿ ಸಭೆಗಳಿಗೆ ಬಾಗಿಯಾಗಿ ನಿಮ್ಮ ಮಕ್ಕಳ ಚಟುವಟಿಕೆ ಮತ್ತು ಶಾಲಾ ಕಾರ್ಯಕ್ರಮಗಳನ್ನು ತಿಳಿದಿಕೊಳ್ಳಬೇಕು ಎಂದು  ಪಾಲಕರಿಗೆ ಮನವಿ ಮಾಡಿದರು. ಸರಕಾರದ ಆದೇಶದ ಮೇರೆಗೆ ಪ್ರತಿ ತಿಂಗಳು ಎಸ್.ಡಿ.ಎಮ್.ಸಿ ಮತ್ತು ಪಾಲಕರ ನೇತೃತ್ವದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಚಯ ಮಾಡಿಸುವುದು ಮತ್ತು ಸರಕಾರಿ ಶಾಲೆಯಲ್ಲಿರುವ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ವಿವರಣೆ ನೀಡುವ ಕಾರಣಕ್ಕಾಗಿ ಈ ಸಭೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಸರಕಾರಿ ಶಾಲೆಯ ಸವಲತ್ತು ಮತ್ತು ಮಕ್ಕಳ ಹಾಜರಾತಿ ಹಾಗೂ ಕಲಿಕೆಯ ಗುಣಮಟ್ಟವನ್ನು ಪಾಲಕರೊಂದಿಗೆ ಚರ್ಚಿಸುವ ಉದ್ದೇಶದಿಂದ ಸರಕಾರವು ಈ ಸಭೆಯನ್ನು ಜಾರಿಗೆ ತಂದಿದೆ.  ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿ ತಿಂಗಳು ಶಾಲೆಗಳಲ್ಲಿ ಸಭೆಯನ್ನ ಹಮ್ಮಿಕೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ  ಎಸ್ ಡಿ ಎಂ ಸಿ ಅಧಕ್ಷ ಲಕ್ಷ್ಮೀ ರೋಹಿದಾಸ ವಂಜರೆ   ಎಸ್ ಡಿ ಎಂಸಿ ಸದಸ್ಯ ಹಾಗು ಪತ್ರಕರ್ತ ರಾದ ಮುರಗೇಶ ಗಸ್ತಿ,ಸೇರಿದಂತೆ ಎಲ್ಲ ಎಸ್ ಡಿ ಎಂಸಿ ಸದಸ್ಯರು ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *