ಎಸ್‌ಎಫ್‌ಐ ವತಿಯಿಂದ ಗೌಡೂರು ಗ್ರಾಪಂ ನಿಧಿಯ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪಿಡಿಓ ಹಾಗೂ ಅಧ್ಯಕ್ಷರ ಮೇಲೆ ಕ್ರಮ ತೆಗೆದುಕೋಳ್ಳಲು ತಾಲೂಕು ಪಂಚಾಯತಿ ಲಿಂಗಣ್ಣೂರುರವರಿಗೆ  ಮನವಿ….

Spread the love

ಎಸ್ಎಫ್ಐ ವತಿಯಿಂದ ಗೌಡೂರು ಗ್ರಾಪಂ ನಿಧಿಯ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪಿಡಿಓ ಹಾಗೂ ಅಧ್ಯಕ್ಷರ ಮೇಲೆ ಕ್ರಮ ತೆಗೆದುಕೋಳ್ಳಲು ತಾಲೂಕು ಪಂಚಾಯತಿ ಲಿಂಗಣ್ಣೂರುರವರಿಗೆ  ಮನವಿ….

ಭಾರತ ವಿದ್ಯಾರ್ಥಿ ಫೆಡರೇಶನ್ ( ಎಸ್‌ಎಫ್‌ಐ ) ತಾಲೂಕು ಸಮಿತಿ ಲಿಂಗಣ್ಣೂರು ದಿನಾಂಕ : 08/12/2021 ಗ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ ಲಿಂಗಣ್ಣೂರು ಇವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿನ ವಿವರ : ಗೌಡೂರು ಗ್ರಾಪಂ ನಿಧಿಯ 25 % ಅನುದಾನದಲ್ಲಿ ಎಸ್ಸಿ , ಎಸ್ಟಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪಿಡಿಓ ಹಾಗೂ ಅಧ್ಯಕ್ಷರ ಮೇಲೆ ಕ್ರಮ ತೆಗೆದುಕೊಂಡು ಮಸ್ತಕ ವಿತರಿಸುವ ಕುರಿತು . ಭಾರತ ವಿದ್ಯಾರ್ಥಿ ಫೆಡರೇಶನ್ ( ಎಸ್‌ಎಫ್‌ಐ ) ತಾಲೂಕು ಸಮಿತಿ, ಕಾಲೇಜುಗಳು ಪ್ರಾರಂಭಗೊಂಡು 4 ತಿಂಗಳು ಕಳೆದರೂ ಗೌಡೂರು ಗ್ರಾಪಂ ವ್ಯಾಪ್ತಿಯ ಎಸ್ಸಿ , ಎಸ್ಟಿ ವಿದ್ಯಾರ್ಥಿಗಳಿಗೆ ಗ್ರಾಪಂ ನಿಧಿಯ 25 % ಅನುದಾನದಲ್ಲಿ ಪಠ್ಯ ಪುಸ್ತಕ ವಿತರಿಸಿಲ್ಲ . ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯುಂಟಾಗಿದೆ . ಇದು ವಿದ್ಯಾರ್ಥಿ ವಿರೋಧಿ ಹಾಗೂ ಶಿಕ್ಷಣ ವಿರೋಧಿ ನೀತಿಯಾಗಿದೆ . ಈ ಧೋರಣೆಯನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸುತ್ತದೆ . ಆದ್ದರಿಂದ ಈಗಾಗಲೇ ನಿಗದಿಪಡಿಸಿದ ಮೊತ್ತವನ್ನು ಪರಿಶೀಲಿಸಿ ಪಿಯುಸಿ ವಿದ್ಯಾರ್ಥಿಗಳಿಗೆ 2000 , ಪದವಿ ವಿದ್ಯಾರ್ಥಿಗಳಿಗೆ 2500 ರೂಪಾಯಿ , ವೃತ್ತಿಪರ ಹಾಗೂ ಉನ್ನತ ಶಿಕ್ಷಣಕ್ಕೆ 3000 ರೂಪಾಯಿಗಳನ್ನು ನೀಡಬೇಕು . ಗ್ರಾಪಂ ಗೆ ಸಾಕಷ್ಟು ಅನುದಾನ ಹರಿದು ಬರುತ್ತದೆ . ಆ ಅನುದಾನದ 25 % ಅನುದಾನವನ್ನು ಎಸ್ಸಿ , ಎಸ್ಪಿ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಸರ್ಕಾರ ಆದೇಶ ನೀಡಿದ್ದರೂ ಅದನ್ನು ಪಾಲಿಸುವಲ್ಲಿ ಪಂಚಾಯತ್ ಆಡಳಿತ ಹಿಂದೇಟು ಹಾಕುತ್ತಿರುವುದು ಎಸ್ಸಿ , ಎಸ್ಟಿ ವಿರೋಧಿ ನೀತಿಯಾಗಿದೆ . ಅಲ್ಲದೇ ಸರಿಯಾದ ಸಮಯಕ್ಕೆ ವಾರ್ಡ್ ಸಭೆ , ಗ್ರಾಮ ಸಭೆ , ಕೆಡಿಪಿ ಸಭೆಗಳನ್ನು ನಡೆಸದೇ ಪಿಡಿಒ , ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಕ್ರಿಯಾ ಯೋಜನೆ ಮಾಡಿ ಹಣವನ್ನು ಬೇಕಾ ಬಿಟ್ಟಿ ಪೋಲು ಮಾಡಲಾಗುತ್ತಿದೆ . ಇದನ್ನು ಈ ಕೂಡಲೇ ನಿಲ್ಲಿಸಿ ಪಾರದರ್ಶಕ ಆಡಳಿತಕ್ಕೆ ಮುಂದಾಗಬೇಕು . ಅಲ್ಲದೇ ಈ ಕೂಡಲೇ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕ ಒದಗಿಸಲು ಮುಂದಾಗಬೇಕು . ಪಿಡಿಒ ಮಹ್ಮದ್ ಇಸಾಕ್ ಹಾಗೂ ಗ್ರಾಪಂ ಅಧ್ಯಕ್ಷರು ಪಂಚಾಯಿತಿಗೆ ಬರದೇ ಜನರಿಂದ ತಪ್ಪಿಸಿಕೊಂಡು ಓಡಾಡುತ್ತಾರೆ . ಕಾಲ್ ಮಾಡಿದರೆ ಕಾಲ್ ಕೂಡಾ ತೆಗೆಯುವುದಿಲ್ಲ . ಕಳೆದ ಎರಡು ತಿಂಗಳಿಂದ 1 ವಾರ , ನಾಳೆ , ನಾಡಿದ್ದು ಎಂದು ಸುಳ್ಳು ಹೇಳುತಯ್ತಾ ಕಾಳ ಹರಣ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಆಟ ಆಡಿದ್ದಾರೆ . ಗ್ರಾಪಂ ನಲ್ಲಿ ಸಾಕಷ್ಟು ಹಣವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಣ ಲಪಟಾಯಿಸುತ್ತಿದ್ದಾರೆ.  ಕಾಲಕಾಲಕ್ಕೆ ಗ್ರಾಮ ಸಭೆ ಹಾಗೂ ವಾರ್ಡ್ ಸಭೆ ನಡೆಸದೇ ಮನಬಂದಂತೆ ಕ್ರಿಯಾ ಯೋಜನೆ ರಚಿಸಿ, ಹಣ ಲೂಟಿ ಒಡಿಯುತ್ತಿದ್ದಾರೆ. ಎಸ್ಸಿ ಎಸ್ಟಿ ಕಲ್ಯಾಣ ಕಾರ್ಯಕ್ರಮಕ್ಕೆಂದೆ ಮೀಸಲಿರುವ ಹಣದಲ್ಲಿ ಪಠ್ಯ ಪುಸ್ತಕ ನೀಡುವಂತೆ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಪುಸ್ತಕ ವಿತರಿಸಲು ಹಿಂದೇಟು ಹಾಕುತ್ತಿದ್ದಾರೆ . ಈ ಮೂಲಕ ಪಿಡಿಓ ಅವರು ಎಸ್ಸಿ , ಎಸ್ಟಿ ವಿರೋಧಿ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ . ಇನ್ನೆರಡು ದಿನಗಳಲ್ಲಿ ಪುಸ್ತಕ ವಿತರಿಸಲು ಮುಂದಾಗದಿದ್ದರೆ ಪಂಚಾಯ್ತಿಗೆ ಭೀಗ ಹಾಕಿ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಸ್‌ಎಫ್‌ಐ ಎಚ್ಚರಿಸುತ್ತದೆ . ವರದಿ – ಸಂಪಾದಕೀಯ

Leave a Reply

Your email address will not be published. Required fields are marked *