ಜುಮಲಾಪೂರ ಗ್ರಾಮದಲ್ಲಿ ಸಮಾನ ಮನಸ್ಕರರಿಂದ ಶ್ರೀ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪುಣ್ಯ ಸ್ಮರಣೆ……

Spread the love

ಜುಮಲಾಪೂರ ಗ್ರಾಮದಲ್ಲಿ ಸಮಾನ ಮನಸ್ಕರರಿಂದ ಶ್ರೀ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪುಣ್ಯ ಸ್ಮರಣೆ……

ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದಲ್ಲಿ ಸಮಾನ ಮನಸ್ಕರರಿಂದ ಶ್ರೀ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ನಂತರ ಪುಣ್ಯ ಸ್ಮರಣೆ ಅಂಗವಾಗಿ ಮೆಣದ ಬತ್ತಿ ಹಚ್ಚುವ ಮುಖಾಂತರ ಮಹಿಳೆಯರು ಹಾಗೂ ಪುರುಷರು ಶ್ರೀ ಅಂಬೇಡ್ಕರವರಿಗೆ ಪುಣ್ಯ ಸ್ಮರಣೆ ನಿಮಿತ್ತ ಸಂತಾಪ ಸೂಚಿಸಿದರು. ಶೋಷಿತ ವರ್ಗದ ಜನರಿಗೆ ಅಂಬೇಡ್ಕರ್ ಎಂಬ ಕಾನೂನು ಕನ್ನಡಿಯಿಂದ ಮೇಲೆಳಲು ಸಾಧ್ಯವಾಗಿದೆ. ಸಂವಿಧಾನ ಸಭೆಯ ತಮ್ಮ ಸುದೀರ್ಘ ಪಯಣದಲ್ಲಿ ಶೋಷಿತ ವರ್ಗಕ್ಕೆ ಕೊಟ್ಟಂತ ಸ್ಥಾನ ಮಾನ ಎಂದಿಗೂ ಅಜರಾಮರದಂತೆ. ಹಾಗೆ ಅವರ ಜೀವನದಲ್ಲಿ ಪ್ರಮುಖವಾಗಿ  ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎನ್ನುವ  ಬಾವನೆಯೊಂದಿಗೆ ದೇಶಕ್ಕಾಗಿ ಅಪಾರ ಸಂವಿಧಾನದ ಮೂಲಕ ತಿಳಿಸಿದ್ದಾರೆ.  ಇವರು ಸಾಮಾಜಿಕವಾಗಿ ಶೊಷಣೆಗೆ ಒಳಪಟ್ಟು  ನಂತರದಲ್ಲಿ ಎಲ್ಲಾ ಕಷ್ಟಗಳನ್ನು ಎದುರಿಸುವ ನಿಟ್ಟಿನಲ್ಲಿ ಪತ್ರಕರ್ತರಾಗಿ ಸಮಾಜ ಚಿಂತಕರಾಗಿ  ಅತ್ಯಂತ ಕ್ರಿಯಾಶೀಲತೆಯಿಂದ   ಮುಂದಿನ ಯುವಪಿಳಿಗೆ ಅನುಗುಣವಾಗಿ ಸಂವಿಧಾನತ್ಮಕ ಸಂದೇಶ ಕೊಟ್ಟು ಹೋಗಿರುವದು.  ಹಿಂದೂಳಿದ ವರ್ಗದ ಭಾಗ್ಯ ಅಂದರು ತಪ್ಪಾಗಲಾರದು. ಈ ಸಂಧರ್ಭದಲ್ಲಿ 50ರಿಂದ 60 ಮಹಿಳೆಯರ ಜತೆಗೂಡಿ ಹಾಗೂ ಊರಿನ ಸಮಾನ ಮನಸ್ಕರರಿಂದ ಅವರಿಗೆ ಮೆಣದಬತ್ತಿಯೊಂದಿಗೆ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಊರಿನ ಎಲ್ಲ ಹಿರಿಯ ಜೀವಿಗಳು ಹಾಗೆ ಊರಿನ ಪ್ರಮುಖ ನಾಯಕರು ಗ್ರಾಮದ ಯೀವಕರು ಪಾಲ್ಗೊಂಡಿದ್ದರು. ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *