ಇಷ್ಟಲಿಂಗದೀಕ್ಷೆ ಪಡೆಯುತ್ತಿರುವ ಕ್ರೈಸ್ತ ಸಾಫ್ಟ್ ವೇರ್‌ ಉದ್ಯಮಿ ಸ್ಟೀವ್‌  ರೋಚ್‌.

Spread the love

ಇಷ್ಟಲಿಂಗದೀಕ್ಷೆ ಪಡೆಯುತ್ತಿರುವ ಕ್ರೈಸ್ತ ಸಾಫ್ಟ್ ವೇರ್ಉದ್ಯಮಿ ಸ್ಟೀವ್‌  ರೋಚ್‌.

 

ನಿರ್ಮಾಣಕ್ಕಿಂತ ಅವರ ವಿಚಾರಧಾರೆಗಳು ಎದೆಗಿಳಿಸಿಕೊಂಡು ಮುನ್ನಡೆಯ ಬೇಕಾಗಿದೆ. ವಂಚಿತರನ್ನು ಮೇಲೆತ್ತುವ ಬಸವಣ್ಣನವರ ಚಿಂತನೆಗಳನ್ನು ಈಡೆರಿಲ್ಲ . ಅವರ ಹೆಸರಿನಲ್ಲಿ ದೊಡ್ಡ ದೊಡ್ಡ ವಿಚಾರಗೋಷ್ಟಿ.ಪ್ರವಚನ, ಸಮಾರಂಭಗಳು ಜರುಗುತ್ತಿವೆ. ಆದರೆ ಅವರು ಕೊಟ್ಟ ವಚನ ಸಾಹಿತ್ಯದ ಮೌಲ್ಯಾಧಾರಿತ ತತ್ವ ಸಿದ್ಧಾಂತವನ್ನು ಕಾಲ ಕೆಳಗೆ ಹಾಕಿ, ತುಳಿಯುವ ಕೆಲಸವನ್ನು ಇಂದು ನಾವೆಲ್ಲರೂ ಮಾಡುತ್ತಿರುವುದು ಹೇಸಿಗೆ ಕೆಲಸ ಅಲ್ಲದೆ ಮತ್ತೇನು ತಾನೇ ! ಹೌದಲ್ಲವೇ ಶರಣ ಬಂಧುಗಳೇ ? ಚಿಂತನೆ ಮಾಡುವ ಕಾಲ ಬಂದಿದೆ, ಸತ್ಯ ಸುಳ್ಳು ಯಾವುದು ಎನ್ನುವುದು ಮುಕ್ತವಾಗಿ ಮನಸ್ಸು ಬಿಚ್ಚಿ ಚಿಂತನೆ ಮಾಡಬೇಕಾಗಿದೆ ಮಾಡುವ ಮೂಲಕ ಸತ್ಯದ ಹಾದಿಯಲ್ಲಿ ಹೋಗುವ ಕೆಲಸ ನಮ್ಮೆಲ್ಲರಿಂದ ಆಗಬೇಕಾಗಿದೆ. ಇವತ್ತು ಬೇಟೆಯ ನಾಯಿಯ ಜೊತೆಗೂ ಮೊಲದ ಜೊತೆಗೂ ನಾವಿದ್ದೇವೆ ಎಂಬ ಆಷಾಡಭೂತಿತನವನ್ನು ನಮ್ಮನ್ನಾಳುವವರಲ್ಲಿ (ಕೆಲ ಸ್ವಾಮೀಜಿಗಳು ಸೇರಿದಂತೆ)  ಕಾಣುತ್ತಿದ್ದೆವೆ. ಇದು ಬಸವಣ್ಣನವರಿಗೆ ಮಾಡಿದ ಬಹು ದೊಡ್ಡ ಅವಮಾನ,ಅಪಮಾನ ಎಂದರೆ ತಪ್ಪಾಗಕ್ಕಿಲ್ಲ. ಈದಿಗ ಬಸವಣ್ಣನವರು ಸೇರಿದಂತೆ ಹಲವು ಶರಣರು ಬಹುತೇಕ ರಾಜಕೀಯ ರೂಪವಾಗಿ ನಮ್ಮಗೆಲ್ಲರಿಗೂ ಸಿಕ್ಕಿದ್ದಾರೆ. ವಿನಃ. ಅವರ ಸಮಾನತೆಯ ತತ್ವಗಳ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಾವೆಲ್ಲರೂ ಹಿಂದೆ ಬಿದ್ದಿದ್ದೇವೆ ಜೊತೆಗೆ ಮನಸ್ಸು ಮಾಡುತ್ತಿಲ್ಲ ಎಂಬುದು ಅಷ್ಟೇ ನಿಜ. ಇನ್ನು ಉಣ್ಣದ ವಿಗ್ರಹಕ್ಕೆ ಬೋನವಿಡುವ ಡಾಂಭಿಕತನ ಕೆಲಸವನ್ನು ನಾವೆಲ್ಲರೂ ಮಾಡುತ್ತಿರುವುದು ದುರಂತ ಎಂದರೆ ತಪ್ಪಾಗಲಾರದು.  ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳಬೇಕೆಂಬ ಬಸವಾದಿ ಶರಣರ ಆಶಯಗಳನ್ನು ಗಾಳಿಗೆ ತೂರಿ, ನಮಗೆ ಸಂಬಂಧ ವಿಲ್ಲದ ಹಾಗೆ ಸಾಗುತ್ತಿದ್ದೇವೆ. ಇನ್ನು ಪ್ರಗತಿಪರ ಚಿಂತಕರು, ವಿಚಾರಸ್ಥರು ಮೂಕರಾಗಿದ್ದಾರೆ. ಬಸವಣ್ಣನವರು  ಸರ್ವ ಶ್ರೇಷ್ಠರು ಎಂದು ಜಗದಲ್ಲಿ ಸಾರಿದ್ದಾರೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕದೆ, ಇರೋದು ವಿಪರ್ಯಾಸವಾಗಿದೆ. ಆದರೆ ದೂರದ ಅಮೆರಿಕದಲ್ಲಿ ನೆಲೆಸಿರುವ ಬಸವತತ್ವದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಸಾಫ್ಟ್ ವೇರ್‌ ಉದ್ಯಮಿ ಸ್ಟೀವ್‌ ರೋಚ್‌ ಅವರು ಬಸವಣ್ಣನವರ ಸಮಾನತೆಯ ಸಮಾಜದ ಪರಿಕಲ್ಪನೆ ವಿಚಾರಗಳನ್ನು ತಿಳಿದುಕೊಂಡು ಇಷ್ಟಲಿಂಗದೀಕ್ಷೆ ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ವಿಷಯಗಳು ತಮ್ಮ ಮುಂದೆ ಹಂಚಿಕೊಳ್ಳಲು ಬಯಸಿರುವೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಮತಾವಾದದ, ಮೌಲ್ಯಾಧಾರಿತ ನಡೆ ನಡಿ ಅನುಭಾವ ಜೀವನದ ಮೂಲಕ ಹರಿದು ಬಂದ ವಚನಗಳ ಆಶಯಗಳ ಚಿಂತನೆಗಳನ್ನು ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿರುವ ಶಿವಶರಣರ ವಚನ ತತ್ವಗಳು,ಅವರ ಆದರ್ಶ ಜೀವನ ಶೈಲಿಯಿಂದ ಪ್ರೇರಣೆ ಪಡೆದಿರುವ ಅಮೇರಿಕಾ  ದೇಶದ ದೊಡ್ಡ ಸಾಫ್ಟ್ವೇರ್ ಉದ್ಯಮಿಯೊಬ್ಬರು ಬೆಂಗಳೂರಿನ ರಾಜಾಜಿ ನಗರದ ಬಸವ ಮಂಟಪದಲ್ಲಿ ಲಿಂಗದೀಕ್ಷೆ ಪಡೆದುಕೊಳ್ಳುತ್ತಿರುವ ವಿಚಾರ ಬಹಳ ಖುಷಿ ನೀಡಿದೆ.  ಸಾಫ್ಟ್ ವೇರ್‌ ಉದ್ಯಮಿ ಸ್ಟೀವ್‌ ರೋಚ್‌ ಅವರು ಬಸವಣ್ಣನವರ ಸಮಾನತೆಯ ಸಮಾಜದ ಪರಿಕಲ್ಪನೆ ಕಂಡು, ಹೆಣ್ಣು – ಗಂಡಿನ ನಡುವಿನ ಸಮಾನತೆ, ಜಾತಿ ರಹಿತ ಸಮಾಜ ನಿರ್ಮಾಣ,ತತ್ವಗಳಿಂದ ಆಕರ್ಷಿತರಾಗಿ ಲಿಂಗದೀಕ್ಷೆಗೆ ಪಡೆದುಕೊಳ್ಳುತ್ತಿರುವುದು ಸಂತಸದ ವಿಚಾರ. ಸ್ಟೀವ್‌ ರೋಚ್‌ ಹಿಂದಿನಿಂದಲೂ ಅಧ್ಯಾತ್ಮದ ಕಡೆಗೆ ಒಲವು ಹೊಂದಿದ್ದರು ಎಂಬ ಮಾಹಿತಿ, ಮೂಲತಃ ಇವರು ಕ್ರಿಶ್ಚಿಯನ್‌ ಆಗಿದ್ದಾರೆ. ಇತರ ಧರ್ಮಗಳ ಜೀವನ ಪದ್ಧತಿ ಹಾಗೂ ಆಚರಣೆಗಳ ಕುರಿತು ಬಹಳ ಹುಡುಕಾಟ ನಡೆಸಿದಾರೆ. ನಡೆಸಿದ ಪ್ರತಿಫಲವಾಗಿ ಅವರು, ಉತ್ತರ ಅಮೆರಿಕದಲ್ಲಿರುವ ಬಸವ ಕೇಂದ್ರದ ಹಾಗೂ ಬಸವಾಭಿಮಾನಿಗಳ ಸಂಪರ್ಕಕ್ಕೆ ಬಂದಿದ್ದಾರೆ. ಅಲ್ಲಿನ ಬಸವ ಕೇಂದ್ರದ ಮುಖ್ಯಸ್ಥರಾಗಿರುವ ಶ್ರೀಶೈಲ್‌ ಹಾದಿಮನಿ ಅವರೊಂದಿಗೆ ಉತ್ತಮ ಒಡನಾಟಿಯಾಗಿ ಬೆಳೆದು,ಲಿಂಗಾಯತ ಧರ್ಮದ ಆಚಾರ – ವಿಚಾರ, ವಚನ ಸಾಹಿತ್ಯದ ಕುರಿತು ಅಧ್ಯಯನ, ಬಸವಾದಿ ಶರಣರ ವೈಚಾರಿಕ – ವೈಜ್ಞಾನಿಕ ಜೀವನ ಪದ್ಧತಿ, ಇಷ್ಟಲಿಂಗ ಪೂಜೆಯ ಮಹತ್ವ, ಲಿಂಗ ಪೂಜೆಯಿಂದ ಆಗುವ ಪರಿಣಾಮಗಳ ಕುರಿತು ಹಲವು ದಿನಗಳಿಂದ ಪರಿಪೂರ್ಣ ಮಾಹಿತಿ ಪಡೆದುಕೊಂಡು,ತಿಳಿದುಕೊಂಡು, ಈದಿಗ ಲಿಂಗಾಯತ ಧರ್ಮದ ಇಷ್ಟಲಿಂಗ ದೀಕ್ಷೆ ಪಡೆಯುತ್ತಿದ್ದಾರೆ,ಶರಣ ಬಂಧುಗಳೆ. ಕೊನೆಯ ಮಾತು – ಹೊರದೇಶದವರಿಗೆ ಬಸವಣ್ಣನವರ ತತ್ವಗಳು ಅರ್ಥವಾಗುತ್ತಿವೆ. ಆಚರಣೆ ತರುವಲ್ಲಿ ಅವರು ಮುಂದಾಗುತ್ತಿದ್ದಾರೆ. ಆದರೆ ದುರ್ದೈವದ ಸಂಗತಿಯೆಂದರೆ ನಾವು ಬಸವಣ್ಣನವರ ವಂಶಸ್ಥರೆಂದು ಹೇಳಿಕೊಳ್ಳುವ ನಾವುಗಳು ಬಸವಣ್ಣನವರ ವಿಚಾರಗಳಿಗೆ ಕೊಡಲಿಪೆಟ್ಟು ಹಾಕಿ, ವಿರೋಧ ಮಾಡುವ, ವಿರೋಧ ದಿಕ್ಕಿನಲ್ಲಿ ಸಾಗುವ ಕೆಲಸ ಮಾಡುತ್ತಿರುವುದು ನಾಚಿಕೆಯ ವಿಚಾರ ಜೊತೆಗೆ ಅತ್ಯಂತ ನೋವಿನ ವಿಷಯ ಶರಣ ಬಂಧುಗಳೇ, ಆದಕಾರಣ ಈಗಲಾದರೂ ಬಸವಣ್ಣನವರ ತತ್ವಗಳನ್ನು, ಅರ್ಥಮಾಡಿಕೊಳ್ಳಿ ಕಾಲ ಮಿಂಚಿಲ್ಲ, ಸತ್ಯ ಯಾವತ್ತಿದ್ದರೂ ಸತ್ಯವಾಗುತ್ತದೆ. ಸತ್ಯಕ್ಕೆ ಸಾವಿಲ್ಲ ಎನ್ನುವುದು ತಿಳಿದುಕೊಳ್ಳಲು ಪ್ರಯತ್ನ ಮಾಡುವುದು ಅತಿ ಅವಶ್ಯಕತೆ ಇದೆ. ಹೀಗಾದಾಗ ಮಾತ್ರ ನಮ್ಮ ಉಜ್ವಲ ಭವಿಷ್ಯ ಬಂಗಾರವಾಗುತ್ತದೆ.

ವರದಿಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *