ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೀರೆಮುಕುರ್ತನಾಳ ಗ್ರಾಮದಲ್ಲಿ ಕೊರನಾ ಪಾಸಿಟಿವ್ ಪ್ರಕರಣ..

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೀರೆಮುಕುರ್ತನಾಳ ಗ್ರಾಮದಲ್ಲಿ ಇಂದು ಕೊರನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದು ಹೀರೆಮುಕುರ್ತನಾಳ ಗ್ರಾಮದ ಜನರಲ್ಲಿ ಎರಡನೇ ಅಲೆಯ ಭಯ ಆತಂಕ ಸೃಷ್ಟಿಯಾಗಿದೆ.  ಬೆಳಗಾವಿಗೆಂದು  ವಿದ್ಯಾಭ್ಯಾಸಕ್ಕಾಗಿ ಹೊಗಿದ್ದ  23 ವರ್ಷ ದ ಯುವಕ ಮರಳಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ಹೀರೆಮುಕುರ್ತನಾಳ ಗ್ರಾಮಕ್ಕೆ ಬಂದಿದ್ದಾನೆ ಬಂದ ತಕ್ಷಣ ಆ ಯುವಕ  ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೋಗಿ ಕರೋನ ಪರಿಕ್ಷೆ ಮಾಡಿಸಿಕೊಂಡಿದ್ದರಿಂದ  ಕರೋನ ಪಾಸಿಟಿವ್  ದೃಢಪಟ್ಟಿದೆ  ಆ ಯುವಕ ನ ಕುಟುಂಬದ ಎಲ್ಲ ಪ್ರಥಮ ಕಾಂಟಾಕ್ಟ್ ಇರುವ ಎಲ್ಲರಿಗೂ ಕೊರೋನ ಟೆಸ್ಟ್ ಮಾಡುವದು ಅನಿವಾರ್ಯ ವಾಗಿದೆ  ಹಾಗಾಗಿ ಊರಿನ ಜನರೆಲ್ಲರೂ ಭಯದ ವಾತಾವರಣದಲ್ಲಿ ಇದ್ದಾರೆ  ಈ ಹೊಸ ಸೃಷ್ಠಿಯ  ಈ ವೈರಸ್ ಹೆಚ್ಚಾನು ಹೆಚ್ಚು ಯುವಕರನ್ನೆ ಟಾರ್ಗೆಟ್ ಮಾಡುತ್ತದೆ ಎನ್ನುವ ಪ್ರಶ್ನೆ ಎಲ್ಲರನ್ನೂ ಎಡಬಿಡದೆ ಕಾಡ್ತಾಯಿದೆ  ಆ ಕಾರಣಕ್ಕಾಗಿ ಪೋಲೀಸ್ ಇಲಾಖೆ ಆರೋಗ್ಯ ಇಲಾಖೆಯವರು     ಯುವಕರ ಆರೋಗ್ಯ ದ ಮುಂಜಾಗ್ರತೆ ಗಾಗಿ. ತಮ್ಮ ಕುಟುಂಬವನ್ನೆ ಲೆಕ್ಕಿಸದೆ ನಮಗಾಗಿ ನಮ್ಮ ಜೀವನ ಉದ್ದಾರಕ್ಕಾಗಿ. ಅವರು ಒಂದು ಕೆಟ್ಟ ಪದದಿಂದ ಬೈದರೂ  ಅದು ನಮ್ಮ ಜಿವನ ಉದ್ದಾರಕ್ಕಾಗಿ ಎಂದು ಭಾವಿಸಿ  ಸರ್ಕಾರ ನಿಯಮದಂತೆ ಪ್ರತಿಯೊಬ್ಬರೂ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಎಲ್ಲರೂ ಕೋರೊನ ವಿರುದ್ಧ ಗೆಲ್ಲಿ  ಎನ್ನುವುದೆ ಪತ್ರಿಕೆಯ ಆಶಯ

ವರದಿ – ಅಮಾಜಪ್ಪ ಹೆಚ್. ಜುಮಾಲಾಪೂರ

Leave a Reply

Your email address will not be published. Required fields are marked *