ಹೆಚ್ಐವಿ ಸೋಂಕಿತರಿಗೆ ವಿವಾಹ: ರಾಜ್ಯದಲ್ಲಿ ವಿನೂತನ ಹೆಜ್ಜೆಯಿಟ್ಟ ಕೊಪ್ಪಳ ಡಿಸಿ…..

Spread the love

ಹೆಚ್ಐವಿ ಸೋಂಕಿತರಿಗೆ ವಿವಾಹ: ರಾಜ್ಯದಲ್ಲಿ ವಿನೂತನ ಹೆಜ್ಜೆಯಿಟ್ಟ ಕೊಪ್ಪಳ ಡಿಸಿ…..

ಜಿಲ್ಲೆಯಲ್ಲಿ ಒಟ್ಟು ಐದು ಸಾವಿರ ಹೆಚ್​ಐವಿ ಸೋಂಕಿತರಿದ್ದಾರೆ. ಇವರಲ್ಲಿ ಯಾರಾದರೂ ಅಪೇಕ್ಷೆ ಪಟ್ಟರೆ ವಧು – ವರರ ಸೂಕ್ತ ಅನ್ವೇಷಣೆ ಮಾಡಲಾಗುವುದು. ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ. ಗಂಗಾವತಿ: ಹೆಚ್ಐವಿ ಸೋಂಕಿತರು ಎಂದರೆ ಸಾಕು ಅವರನ್ನು ಯಾರೊಬ್ಬರು ಮದುವೆಯಾಗಲು ಮುಂದೆ ಬರಲ್ಲ. ಆದರೆ ಈ ಸೋಂಕಿತರಿಗೆ ಮದುವೆ ಮಾಡಿಸಿ ಸಂಸಾರದ ಸಂತೋಷ ಸಿಗುವಂತೆ ಮಾಡಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಿನೂತನ ಪ್ರಯೋಗವೊಂದಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಹೆಜ್ಜೆ ಇಟ್ಟಿದ್ದಾರೆ. ಹೆಚ್ಐವಿ ಸೋಂಕಿತರಿಗೆ ವಿವಾಹ – ಡಿಸಿ ಹೇಳಿಕೆ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ಕೊಪ್ಪಳದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ಜಿಲ್ಲೆಯಲ್ಲಿ ಒಟ್ಟು ಐದು ಸಾವಿರ ಹೆಚ್​ಐವಿ ಸೋಂಕಿತರು ಇದ್ದಾರೆ. ಇವರಲ್ಲಿ ಯಾರಾದರೂ ಅಪೇಕ್ಷೆ ಪಟ್ಟರೆ ವಧು – ವರರ ಸೂಕ್ತ ಅನ್ವೇಷಣೆ ಮಾಡಲಾಗುವುದು. ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು. ವಧು – ವರರು ಅಪೇಕ್ಷೆ ಪಟ್ಟರೆ ಮಾತ್ರ ಮಾಹಿತಿ ಬಹಿರಂಗ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಐವಿ ಸೋಂಕಿತರಿಗೆ ಪೂರಕವಾಗುವಂತೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಿಂದ ವಿನೂತನ ಯೋಜನೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *