ಕೂಡ್ಲಿಗಿ:ಅಡಿಗೆ ಅನಿಲ ವಿತರಕರು ಜನರ ಜೀವ ಜೀವನದೊಂದಿಗೆ ಚೆಲ್ಲಾಟ-ಕರವೇ ಆರೋಪ-

Spread the love

ಕೂಡ್ಲಿಗಿ:ಅಡಿಗೆ ಅನಿಲ ವಿತರಕರು ಜನರ ಜೀವ ಜೀವನದೊಂದಿಗೆ ಚೆಲ್ಲಾಟಕರವೇ ಆರೋಪ

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ, ಅಡಿಗೆ ಅನಿಲವನ್ನು ಕಾಳಸಂತೆಯಲ್ಲಿ ಹಾಗೂ ನಿಗಧಿತ ದರಕ್ಕಿಂತ ಅತಿ ಹೆಚ್ಚು ಧರದಲ್ಲಿ ಮಾರಾಟದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಾಲೂಕಾಡಳಿತಕ್ಕೆ ದೂರು ನೀಡಲಾಯಿತು.ಕರವೇ ಅಧ್ಯಕ್ಷ ಕಾಟೇರ ಹಾಲೇಶ ನೇತೃತ್ವದಲ್ಲಿ ವಿವಿದ ಸಂಘಟನೆಗಳ ಮುಖಂಡರು ಹಾಗೂ ಕರವೇ ಕಾಯಕರ್ತರು ತಹಶಿಲ್ದಾರರಾದ ಟಿ ಜಗಧೀಶರವರಿಗೆ ಮನವಿ ಪತ್ರನೀಡಿದರು. ಈ ಸಂದರ್ಭದಲ್ಲಿ ಕಾಟೇರ ಹಾಲೇಶ  ಮಾತನಾಡಿ,ಅನಿಲ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟಮಾಡಲಾಗುತ್ತಿದೆ ಹಾಗೂ ನಿಗಧಿತ ದರಕ್ಕಿಂತ ಅತಿಹೆಚ್ಚು ಧರಕ್ಕೆ ಮಾರಾಟಮಾಡಲಾಗುತ್ತಿದೆ ಸಂಬಂಧಿಸಿದ ಇಲಾಖಾಧಿಕಾರಿಗಳು ಕ್ರಮ ಜರುಗಿಸಿಲ್ಲ ಎಂದು ದೂರಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅನಶಿಕೃತವಾಗಿ ಅನಿಲ ತುಂಬಿದ ಸಿಲಿಂಡರ್ ಗಳನ್ನು ದಾಸ್ತಾನು ಮಾಡಲಾಗುತ್ತಿದೆ,ಈ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.ಅನಿಲ ಸಿಲಿಂಡರ್ ಅಕ್ರಮ ದಾಸ್ತಾನು  ಮತ್ತು ಮಾರಾಟ ಸಾಗಾಣಿಕೆ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರ‍ಾಮಗಳಲ್ಲಿ ಜರುಗುತ್ತಿದ್ದು,ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಬೆಧರು ಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಹಾಲೇಶ ದೂರಿದ್ದಾರೆ. ಅಡಿಗೆ ಅನಿಲ ಹೋಟೆಲ್ ಹಾಗೂ ಡಾಬಾ ಮತ್ತು ಖಾಸಗೀ ಯಾಗಿ ಬಳಕೆಗೆ ಮಾರಾಟ ಮಾಡಲಾಗುತ್ತಿದೆ,ಮೆನಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದೆ.ಅಕ್ರಮವಾಗಿ ಸಾಗಿಸಲಾಗುತ್ತಿದೆ ಹಾಗೂ ಕಾಳಸಂತೆಯಲ್ಲಿ ಮಾರಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಹಾಡು ಹಗಲೇ ಅನಿಲ ಸಿಲಿಂಡರ್ ಅಕ್ರಮ ಸಾಗಿಸುತ್ತಿದ್ದರೂ ಯಾರೂ ಕ್ರಮ ಜರುಗಿಸಲಾಗುತ್ತಿಲ್ಲ.ಈ ವಿಷಯದಲ್ಲಿ ಅವರು ಅಕ್ರಮ ಅನಿಲ ಸಿಲಿಂಡರ್ ದಾಸ್ತಾನು ಸಾಗಾಣಿಕೆ ಮಾರಾಟದಲ್ಲಿ ಜಾಣ ಕುರುಡುತನ ತೋರಿದ್ದು,ಈ ಮೂಲಕ ಅವರೂ ಈ ದಂಧೆಗೆ ಮೌನ ಸಮ್ಮತಿ ಸೂಚಿಸಿದ್ದಾರೆ ಅದನ್ನು  ಪರೋಕ್ಷವಾಗಿ ಅವರು ಒಪ್ಪಿಕೊಂಡಂತಾಗಿದೆ ಎಂದು ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ,ಅನಿಲ ತುಂಬಿರುವ ಸಿಲಿಂಡರ್ ಗಳನ್ನು  ಎಗ್ಗಿಲ್ಲದೇ ಸಾಗಿಸಲಾಗುತ್ತಿದೆ ಮತ್ತು ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದೆ.ಯ‍ಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ದಾಸ್ತಾನು ಮಾಡಲಾಗುತ್ತಿದ್ದು,ಇದು ಬಲು ಅಪಾಯಕಾರಿಯಾದ ಅಕ್ರಮ ದಂಧೆಯಾಗಿದೆ ಇಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ದಲಿತ ಮುಖಂಡರಾದ ಗೆದ್ದಲಗಟ್ಟೆ ಹನುಮೇಶ ಒತ್ತಾಯಿಸಿದ್ದಾರೆ.ಮಾಜಿ ಸೈನಿಕ ರಮೇಶ ಸೇರಿದಂತೆ ತಾಲೂಕಿನ ವಿವಿದ ಭಾಗದ ವಿವಿದ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *