ಸಂಗಮೇಶ ಕಲಬುರ್ಗಿ ಅವರಿಗೆ ಚಿನ್ನದ ಪದಕ: ರೈಲ್ವೆ ಇಲಾಖೆ ಅಭಿಂನದನೆ…….

Spread the love

ಸಂಗಮೇಶ ಕಲಬುರ್ಗಿ ಅವರಿಗೆ ಚಿನ್ನದ ಪದಕ: ರೈಲ್ವೆ ಇಲಾಖೆ ಅಭಿಂನದನೆ…….

ಬೆಳಗಾವಿ: ಭಾರತೀಯ ರೈಲ್ವೆ ಇಲಾಖೆ  ವತಿಯಿಂದ ಇತ್ತಿಚೇಗೆ ಆಯೋಜಿಸಿದ್ದ ಬಾಕ್ಸಿಂಗ್ ಮತ್ತು ವೇಟ್ ಲಿಫ್ಟಿಂಗ್, ವುಶು’  ಸ್ಪರ್ಧೆಯಲ್ಲಿ ಬೆಳಗಾವಿಯ ನೈಋತ್ಯ ರೈಲ್ವೆ ಇಲಾಖೆ  ಸಹಾಯಕ ಸಬ್ ಇನ್ಸ್‌ಪೆಕ್ಟರ್( ಆರ್‌ಪಿಎಫ್ ) ಆಗಿ ಕಾರ್ಯನಿರ್ವಸುತ್ತಿರುವ  ಸಂಗಮೇಶ ಕಲಬುರ್ಗಿ ಚಿನ್ನ, ಬೆಳ್ಳಿ , ಕಂಚಿನ ಪದಕ ಪಡೆದಿದ್ದಾರೆ. ಧನಬಾದ್‌ನಲ್ಲಿ ನಡೆದ ಅಖಿಲ ಭಾರತ  ಆರ್‌ಪಿಎಫ್ ‘ ವುಶು’ ಸ್ಪರ್ಧೆ  ಯಲ್ಲಿ ಭಾಗವಹಿಸಿ, 75-80 ಕೆಜಿಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ  ವಿಶಾಖ್ ಪಟ್ಟಣಂನಲ್ಲಿ ನಡೆದ ಅಖಿಲ ಭಾರತ ಆರ್‌ಪಿಎಫ್ ಬಾಕ್ಸಿಂಗ್ ಮತ್ತು ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ,  ಲೈಟ್ ಹೆವಿ ವೇಟ್ ವಿಭಾಗದಲ್ಲಿ ಬೆಳ್ಳಿ ಪದಕ (75-80 ಕೆಜಿ) ಪಡೆದಿದ್ದಾರೆ ಮತ್ತು ವೇಟ್ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಸ್ಪರ್ಧೆಯಲ್ಲಿ  ಭಾಗವಹಿಸಿ ಗೆಲುವು ಸಾಧಿಸಿ 3 ಪದಕಗಳೊಂದಿಗೆ ಚಿನ್ನದ ಪದಕ  ಮುಡಿಗೇಡಿರಿಸಿಕೊಂಡು, ಬೆಳಗಾವಿ ರೈಲ್ವೆ ಇಲಾಖೆ ಕೀರ್ತಿ ಹೆಚ್ಚಿಸಿದ್ದು.  ಇವರ ಈ ಸಾಧನೆಗೆ ಬೆಳಗಾವಿ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದನೆ  ಸಲ್ಲಿಸಿದ್ದಾರೆ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *