ತಾವರಗೇರಾ ಪಟ್ಟಣದ ಸಿಂಧನೂರು ಮುಖ್ಯ ರಸ್ತೆಯಲ್ಲಿ ಬರುವ ( ಗೌಂವಠಾಣ ) ಸರಕಾರಿ ಜಮೀನಿನಲ್ಲಿ ಟಾಟಾ.ಎಸಿ. ವಾಹನ ವಾಹನ ನಿಲ್ಲುಗಡೆ ಸ್ಥಳ ಮಾಡುವ ಕುರಿತು ಮನವಿ..

Spread the love

ತಾವರಗೇರಾ ಪಟ್ಟಣದ ಸಿಂಧನೂರು ಮುಖ್ಯ ರಸ್ತೆಯಲ್ಲಿ ಬರುವ ( ಗೌಂವಠಾಣ ) ಸರಕಾರಿ ಜಮೀನಿನಲ್ಲಿ ಟಾಟಾ.ಎಸಿ. ವಾಹನ ವಾಹನ ನಿಲ್ಲುಗಡೆ ಸ್ಥಳ ಮಾಡುವ ಕುರಿತು ಮನವಿ..

ತಾವರಗೇರಾ ಪಟ್ಟಣದ ಸಿಂಧನೂರು ಮುಖ್ಯ ರಸ್ತೆಯಲ್ಲಿ ಬರುವ ( ಗೌಂವಠಾಣ ) ಸರಕಾರಿ ಜಮೀನಿನಲ್ಲಿ ಟಾಟಾ.ಎಸಿ . ವಾಹನಗಳನ್ನು ಈ ಸ್ಥಳದಲ್ಲಿ ವಾಹನ ನಿಲ್ಲುಗಡೆ ಸ್ಥಳ ಮಾಡುವ ಕುರಿತು W.P.I. ತಾವರಗೇರಾ ಹೋಬಳಿ ಘಟಕದ ಶ್ರೀ ಯಮನೂರಪ್ಪ ಬಿಳೆಗುಡ್ಡ ಅಧ್ಯಕ್ಷರು ಹಾಗೂ ಇತರೆ ಸಮಾಜೀಕ ಹೋರಾಟಗಾರರು ಜೋತೆಗೂಡಿ ಇಂದು ತಾವರಗೇರಾ ಪಟ್ಟಣ ಪಂಚಾಯತ ಕಾರ್ಯಲಯಕ್ಕೆ ಹಾಗೂ ಪೋಲಿಸ್ ಠಾಣೆ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.

ಮನವಿಯಲ್ಲಿ ವಿವರ :- ತಾವರಗೇರಾ ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ಧಿ ದತ್ತ ಸಾಗುತ್ತಿರುವುದು ಹೇಮ್ಮೆಯ ವಿಷಯವಾಗಿದೆ. ಆದ್ದರಿಂದ ತಾವರಗೇರಾ ಪಟ್ಟಣಕ್ಕೆ ದಿನ ನಿತ್ಯ ವ್ಯವಹಾರಕ್ಕೆಂದು ಟಾಟಾ.ಎಸಿ.ವಾಹನ ಹಾಗೂ ಇತರೆ ವಾಹನಗಳ ಮೂಲಕ ಬರುವ ಹಳ್ಳಿಯ ಜನರು ವಾಹನಗಳನ್ನು ಎಲ್ಲಿ ಅಂದರೆ ಅಲ್ಲಿ ವಾಹನಗಳನ್ನು ಅಡ್ಡ/ದಿಡ್ಡ ನಿಲ್ಲಿಸಿ ಸಾರ್ವಜನಿಕರಿಗೂ ಹಾಗೂ ಇತರರಿಗೂ ಟ್ರಾಪೀಕ್ ಜಾಮ್ ತೊಂದರೆಯಾಗುತ್ತಿದ್ದು, ಇದರ ನಿಮಿತ್ಯವಾಗಿ ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಸರ್ವೆ ನಂ 52 / ಸ.ನಂ 54 / ಸರ್ವೆ ನಂ 48 / ಸರ್ವೆ ನಂ 49 / ಜೊತೆಗೆ 221 1 ರ ಮದ್ಯ ಭಾಗದಲ್ಲಿ ಬರುವ ಈ ನಿ.ಸಿ. ಜಮೀನು ಇದ್ದು . ಅಂದರೆ ( ಗೌಂವಠಾಣ ) ಸರಕಾರಿ ಜಮೀನು ಇದ್ದು.  ಈ ಜಮೀನು ಮುಂದಿನ ಪೀಳಿಗೆಗಾಗಿ ಅತ್ಯವಾಶಕವಾಗಿದ್ದು , ಈ ಜಮೀನಿನಲ್ಲಿ ಹಲವರು ಅಕ್ರಮಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಹಲವು ಭಾರಿ ಮನವಿ ಪತ್ರದ ಜೋತೆಗೆ ಹೋರಾಟ ಹಮ್ಮಿಕೊಂಡಿದ್ದು, ಈ ಹೋರಾಟದ ಫಲವಾಗಿ ಮಾನ್ಯ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಸ್ಥಳ ಪರೀಶಿಲಿಸಿ ತತಕ್ಷಣ ಸೆರ್ವೇ ಮಾಡಿಸಿ ಕೊಟ್ಟಿರುವುದು ಹೇಮ್ಮೆಯ ವಿಷೆಯವಾಗಿದ್ದು,  ಆದ್ದರಿಂದ ಈ ತಾವರಗೇರಾ ಪಟ್ಟಣದ ಸಿಂಧನೂರು ಮುಖ್ಯ ರಸ್ತೆಯಲ್ಲಿ ಬರುವ (ಗೌಂವಠಾಣ) ಸರಕಾರಿ ಜಮೀನಿನ ಸ್ಥಳಕ್ಕೆ ಆಗಮಿಸಿ, ಈ ಸ್ಥಳವನ್ನು ವಿಕ್ಷೀಸಿ, ಈ ಸ್ಥಳದಲ್ಲಿ ಟಾಟಾ.ಎಸಿ  ವಾಹನ ನಿಲ್ಲುಗಡೆ ಸ್ಥಳ ಮಾಡಿಸಿ ತಾವರಗೇರಾ ಪಟ್ಟಣದಲ್ಲಿರುವ ಟ್ರಾಪೀಕ್ ಸಮಸ್ಯೆಯನ್ನು ಬಗೆಹರಿಸಬೇಕೆಂದು ಇವರುಗಳ ಮನವಿ. ಈ ಸಂದರ್ಭದಲ್ಲಿ W.P.I. ತಾವರಗೇರಾ ಹೋಬಳಿ ಘಟಕದ ಶ್ರೀ ಯಮನೂರಪ್ಪ ಬಿಳೆಗುಡ್ಡ ಅಧ್ಯಕ್ಷರು ಹಾಗೂ ಸದಸ್ಯರು ಜೊತೆಗೆ ಇತರೆ ಸಮಾಜೀಕ ಹೋರಾಟಗಾರರು ಪಾಲುಗೊಂಡಿದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *