ಜಂಗಮಸೋವೇನಹಳ್ಳಿ ಕಟ್ಟಡ ಕಾರ್ಮಿಕರ ಎಐಟಿಯುಸಿ ಗ್ರಾಮ ಘಟಕ ಉದ್ಘಾಟನೆ……

Spread the love

ಜಂಗಮಸೋವೇನಹಳ್ಳಿ ಕಟ್ಟಡ ಕಾರ್ಮಿಕರ ಎಐಟಿಯುಸಿ ಗ್ರಾಮ ಘಟಕ ಉದ್ಘಾಟನೆ……

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜಂಗಮಸೋವೇನಹಳ್ಳಿ  ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ. ಕಾರ್ಮಿಕರ ಸಂಘ ಎಐಟಿಯುಸಿ ಗ್ರಾಮ ಘಟಕವನ್ನು ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಯು ಪೆನ್ನಪ್ಪ ಗ್ರಾಮದ ಮಾಜಿ ಸದಸ್ಯರು ಹಿರಿಯರಾದ ಗ್ರಾಮದ ಯಜಮಾನರಾದ ಗೌಡರ ಜಯಣ್ಣ  ಇವರುಗಳು ನಾಮಫಲಕ ಉದ್ಘಾಟಿಸಿದ್ದು ಕಾರ್ಮಿಕ ಮುಖಂಡ ಹೆಚ್ಚು ವೀರಣ್ಣ ಮಾತನಾಡಿ ಮಂಡಳಿಯಲ್ಲಿ ಸಾವಿರಾರು ಕೋಟಿ ಅನುದಾನ ಇದ್ದು ಆದ್ದರಿಂದ ರಾಜ್ಯದ ಕಾರ್ಮಿಕರಿಗೆ ಅನೇಕ ಸೌಲಭ್ಯಗಳು ನೀಡಲಿದ್ದು ನಿಜವಾದ ಕಾರ್ಮಿಕರು ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ನಿಗದಿತ ಸಮಯದ ಒಳಗಡೆ ತಮ್ಮ ಕಾಡುಗಳನ್ನು ನವೀಕರಣ ಮಾಡಿಸಿಕೊಂಡು ತಮ್ಮ ಕುಟುಂಬಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ಇನ್ನೂ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಕೆಲವರು ಸುಳ್ಳುಗಳನ್ನು ಹೇಳಿ ಕಾರ್ಮಿಕ ಮಂಡಳಿಯಲ್ಲಿರುವ ಸೌಲಭ್ಯಗಳ ವಿಷಯಗಳನ್ನು ಹೇಳಿ ನಂಬಿಸಿ ಕಾರ್ಮಿಕರ ಅಲ್ಲದವರನ್ನು ಈಗಾಗಲೇ ಹಣಕ್ಕಾಗಿ ಮಧ್ಯವರ್ತಿಗಳು ಕಳಪೆ ಕಾಡುಗಳನ್ನು ಮಾಡಿಸಿ ಕೊಡುತ್ತಿದ್ದು ಹಳ್ಳಿಹಳ್ಳಿಗಳಲ್ಲಿ ದಲ್ಲಾಳಿಗಳು ಬರುತ್ತಿದ್ದಾರೆ ಇದನ್ನು ತಡೆಯಲು ಮಂಡಳಿಯಲ್ಲಿ ಹೊಸ ಕಾರ್ಡ್ ಮಾಡಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಿರುವುದು ಸಂಘಟನೆ ಸ್ವಾಗತಿಸುತ್ತದೆ ಮಂಡಳಿ ಕಳಪೆ ಕಾರ್ಡುಗಳನ್ನು ತಡೆಯಲು ಹೊಸ ನೀತಿಯನ್ನು ಜಾರಿಗೊಳಿಸಿದ್ದು ಸೇವಾ ಸಿಂಧು ಗಳಲ್ಲಿ ಅರ್ಜಿ ಸಲ್ಲಿಸುವ ನಿಯಮವನ್ನು ರದ್ದುಪಡಿಸಿಲ್ಲ ಇದರಿಂದ ದಲ್ಲಾಳಿಗಳು ಹಳ್ಳಿಹಳ್ಳಿಗಳಲ್ಲಿ ರಾಜಾರೋಷವಾಗಿ ಕೆಲವು ಎನ್ಜಿಒಗಳು ಹಳ್ಳಿಯ ಜನರಿಗೆ ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸಿಗುವ ಸೌಲಭ್ಯಗಳನ್ನು ತಿಳಿಸಿ ಸಾವಿರ ಎರಡು ಸಾವಿರ ರೂಪಾಯಿಗಳಿಗೆ ಕಾರ್ಮಿಕರ ಅಲ್ಲದವರಿಗೆ ಸೇವ ಸಿಂದು ಗಳಿಂದ ಕಾಡುಗಳನ್ನು ಮಾಡುತ್ತಿದ್ದು ಕಳಪೆ ಕಾರರಿಗೆ ಕಡಿವಾಣ ಹಾಕುವುದರಲ್ಲಿ ಮಂಡಳಿ ವಿಫಲವಾಗಿದೆ ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸಲು ಸೇವಾ ಸಿಂಧು ಗಳಿಗೆ ನೀಡಿದ್ದು ಸೇವಾ ಸಿಂಧು ಗಳನ್ನು  ಬಂದು ಮಾಡದಿದ್ದಲ್ಲಿ ಮಂಡಳಿ ಅಪಾಯವನ್ನು ಎದುರಿಸಬೇಕಾಗಿದ್ದು ನಿಜವಾದ ಕಟ್ಟಡ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ನಿಜವಾದ ಕಾರ್ಮಿಕರಿಗೆ ಸಂಘಟನೆಗಳು ನ್ಯಾಯ ನೀಡಲು  ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಬೀದಿಗಿಳಿಯ ಬೇಕಾಗುವ ಪರಿಸ್ಥಿತಿ ಅನಿವಾರ್ಯವಾಗಿದೆ ಇದರಿಂದ ಮಂಡಳಿ ಎಚ್ಚೆತ್ತುಕೊಂಡು ಸೇವಾಸಿಂಧು ಗಳನ್ನ ಕೂಡಲೇ ಸ್ಥಗಿತಗೊಳಿಸಬೇಕು ಕಟ್ಟಡ ಕಾರ್ಮಿಕ ಇಲಾಖೆಯಿಂದ ಮಾತ್ರ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಮಾನ್ಯತೆ ಪಡೆದ ಸಂಘಗಳಿಗೆ ಮಾತ್ರ ಕಾರ್ಮಿಕರ ಕಾರ್ಡ್ ಮಾಡಿಸಲು ಅವಕಾಶ ನೀಡಬೇಕು  ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ಇಡೀ ರಾಜ್ಯ ವ್ಯಾಪ್ತಿ ಕಾರ್ಮಿಕರಿಗೆ ಜಾಗೃತಿ ಮೂಡಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು ಪ್ರತಿ ಗ್ರಾಮಗಳಲ್ಲಿ ಘಟಕ ಮಾಡುತ್ತಿರುವುದು ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡಿಸಲು ಹಾಗೂ ಪ್ರತಿಗ್ರಾಮದಲ್ಲಿ ಗ್ರಾಮ ಘಟಕ ಗಳನು ಮಾಡುವುದರ ಮೂಲಕ ಕಾರ್ಮಿಕರ ರಕ್ಷಣೆ ಮಾಡಲಾಗುವುದು ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ವೇದಿಕೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷರಾದ ಯು ಪೆನ್ನಪ್ಪ ಅಧ್ಯಕ್ಷತೆ ವಹಿಸಿದ್ದು ಜಂಗಮಸೋವೇನಹಳ್ಳಿ ಗ್ರಾಮದ ಯಜಮಾನರಾದ ಗೌಡರ ಜಯಣ್ಣ ಗ್ರಾಮದ ಮುಖಂಡರಾದ ಕಡಿಮನಿ ಬರಮಪ್ಪ ಹಾಲಿ ಗ್ರಾಮ ಪಂಚಾಯತಿ ಸದಸ್ಯರಾದ ನಿರ್ಮಲ ಕೊಟ್ರೇಶ್ ಸ್ವಾಗಿ ಈರಪ್ಪ ಬಣಕಾರ್ ಕೊಟ್ರೇಶ್ ವಡ್ಡರಹಳ್ಳಿ ಶರಣಪ್ಪ ಗುನ್ನಹಳ್ಳಿ ಹನುಮಂತಪ್ಪ ಸಿಎಂ ಮಲ್ಲಿಕಾರ್ಜುನಯ್ಯ ಶಾಲೆಯ ಮುಖ್ಯಗುರುಗಳಾದ ಸೋಮನಗೌಡ ಉಪಸ್ಥಿತರಿದ್ದು ಇನ್ನೊಬ್ಬ ಶಿಕ್ಷಕ ಹರೀಶ್ ಕಾರ್ಯಕ್ರಮ ನಿರೂಪಣೆ ಮಾಡಿದರು ಇದೇ ಸಂದರ್ಭದಲ್ಲಿ ನೂತನ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಕೊಟ್ರೇಶ್ ಗಂದುಡಿ ಉಪಾಧ್ಯಕ್ಷರಾಗಿ ಗುನ್ನಹಳ್ಳಿ ನಾಗರಾಜ್ ಖಜಾಂಚಿ ನಂದಿ ರಾಜಪ್ಪ ಕಾರ್ಯದರ್ಶಿ ಡಿ ಹುಲಿಕುಂಟೆ 26 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು ಗ್ರಾಮದ ಎಲ್ಲಾ ಕಟ್ಟಡ ಕಾರ್ಮಿಕರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು ಗ್ರಾಮ ಎಲ್ಲ ಕಟ್ಟಡ ಕಾರ್ಮಿಕ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *