“ಶ್ರೀಗಳಿಂದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ”

Spread the love

ಶ್ರೀಗಳಿಂದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾನ್ಫಿಡೆಂಟ್ ಸ್ಪರ್ಧ ಕೋಚಿಂಗ್  ಕ್ಲಾಸಿನಿಂದ ವಿದ್ಯಾರ್ಥಿಗಳು ರಾಣಿ ಚೆನ್ನಮ್ಮ ಆದರ್ಶ ವಿದ್ಯಾಲಯ ನವೋದಯ, ಮುರಾರ್ಜಿ ಶಾಲೆಗಳಿಗಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಅತಿ ಹೆಚ್ಚು ಅಂಕ ಗಳಿಸಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಬೀಳ್ಕೊಡುವ ಸಮಾರಂಭ ನಂತರ ಸಂಸ್ಕೃತಿಯ ಕಾರ್ಯಕ್ರಮ ದಿನಾಂಕ 8/11/21 ರಂದು ಪಟ್ಟಣದ ರಾಮೇಶ್ವರ  ದೇವಾಲಯದಲ್ಲಿ ಕಾರ್ಯಕ್ರಮ  ಜರಗಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಅಭಿನವ ಸಂಗನಬಸವ ಶಿವಾಚಾರ್ಯರು ದೀಪ ಬೆಳಗಿಸಿ ಪ್ರಾರಂಭ ಮಾಡಿದರು. ನಂತರ ಭಾರತದಲ್ಲಿ ದೇವಾಲಯ ಗಂಟೆಗಳ  ಶಬ್ದಕ್ಕಿಂತ ಶಾಲೆಯ ಘಂಟೆಯ ಶಬ್ದ ಹೆಚ್ಚು ಬಾರಿಸಿದರೆ ಅದುವೇ ಪರಿವರ್ತನೆ, ಅದುವೇ ಶಿಕ್ಷಣದ ಪರಿವರ್ತನೆ ಶಿಕ್ಷಣ ಎಂಬುದು ವ್ಯಾಪಾರ ಅಲ್ಲ, ಪೀಳಿಗೆಯಿಂದ ಹೊಸಪೀಳಿಗೆ ನೀಡುವ ಉಡುಗೊರೆಯಾಗಬೇಕು. ಮಲ್ಲಿಕಾರ್ಜುನ ಬಾಳಪ್ಪ ಜಮಖಂಡಿ ನವೋದಯ ಶಾಲೆಗೆ, ಆದರ್ಶ ವಿದ್ಯಾಲಯ s.v.s. ವಸತಿ ಶಾಲೆ ವಿಭೂತಿಪುರ ಮಠ ಬೆಂಗಳೂರು,ಕಾರ್ತಿಕ್ ವಿಜಯಕುಮಾರ್ ಬೂದಿಹಾಳ ಮುರಾರ್ಜಿ ಶಾಲೆಗೆ ಹಾಗೂ s.v.s. ವಸತಿ ಶಾಲೆ ವಿಭೂತಿಪೂರ ಮಠ ಬೆಂಗಳೂರು, ಆದರ್ಶ ವಿದ್ಯಾಲಯ ಶಾಲೆಗೆ  ಸ್ಪೂರ್ತಿ ರವಿ ಬಿದರಿ ಆದರ್ಶ ವಿದ್ಯಾಲಯ ಬಸವನಬಾಗೇವಾಡಿ ತಾಲೂಕಿಗೆ ಪ್ರಥಮ ಸ್ಥಾನ ಮುರಾರ್ಜಿ ದೇಸಾಯಿ ಶಾಲೆಗೆ ಜಿಲ್ಲೆಗೆ ಐದನೆಯ ಸ್ಥಾನ ಆಯ್ಕೆಯಾಗಿದ್ದಾರೆ. ಸ್ಪೂರ್ತಿ ಸುರೇಶ್ ಬೂದಿಹಾಳ  ಮೊರಾರ್ಜಿ ಶಾಲೆಗೆ   ಹಾಗೂ ಆದರ್ಶ ವಿದ್ಯಾಲಯ, ಸಂಪತ್ ಸಂಗಮೇಶ್ ಸಾತಲಗಾಂವಿ ಆದರ್ಶ ವಿದ್ಯಾಲಯ ಹಾಗೂ s.v.s. ವಸತಿ ಶಾಲೆ ವಿಭೂತಿಪೂರ ಮಠ ಶಾಲೆ ಬೆಂಗಳೂರು, ಭೂಮಿಕಾ ರಾಘವೇಂದ್ರ ಮನಗೂಳಿಕರ ಆದರ್ಶ ವಿದ್ಯಾಲಯ ಹಾಗೂ ಮುರಾರ್ಜಿ ಶಾಲೆಗೆ, ಸ್ನೇಹ ಸಂಗಮೇಶ ಚಿಗರಿ ಆದರ್ಶ ವಿದ್ಯಾಲಯ, ಇಮ್ರಾನ್ ಖಾದ್ರಿ ಇನಾಮದಾರ s.v.s. ವಸತಿ ಶಾಲೆ ವಿಭೂತಿಪುರ ಮಠ ಬೆಂಗಳೂರು, ರೋಹಿತ ಬಾ ಬೂದಿಹಳ  s.v.s. ವಸತಿ ಉಚಿತ ಶಾಲೆ ವಿಭೂತಿಪೂರ್ ಮಠ ಬೆಂಗಳೂರು, ರಿತ್ವಿಕ್ ಪ್ರಶಾಂತ್  ಹುಲಗಬಾಳ s.v.s. ಉಚಿತ ವಸತಿ ಶಾಲೆ ವಿಭೂತಿಪೂರ ಮಠ ಬೆಂಗಳೂರು, ಸಮರ್ಥ ಸಿದ್ದನಗೌಡ ಬಿರಾದಾರ್ s.v.s. ಉಚಿತ ವಸತಿ ಶಾಲೆ ವಿಭೂತಿಪುರ ಮಠ ಬೆಂಗಳೂರು , 18 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಅದರಲ್ಲಿ 11 ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಈ ನಮ್ಮ ಸಂಸ್ಥೆಯಿಂದ ಸ್ಪರ್ಧೆ ಮಾಡಿ ಆಯ್ಕೆಯಾಗಿರುತ್ತಾರೆ ನಮಗೆಲ್ಲರಿಗೂ ಸಂತೋಷವಾಗಿದೆ ಇದೇ ಸಮಯದಲ್ಲಿ ವಿದ್ಯಾರ್ಥಿಯ ಪಾಲಕರಿಗೂ ಧನ್ಯವಾದಗಳು ಮುಂದಿನ ದಿನಗಳಲ್ಲಿ ಇದಕ್ಕಿಂತ ಹೆಚ್ಚಾಗಿ ಮುಂದೆ ಬರುವ ದಿನಗಳಲ್ಲಿ ವಿದ್ಯಾರ್ಥಿಗಳನ್ನು ನವೋದಯ,ಮುರಾರ್ಜಿ  ಶಾಲೆಗೆ ಹೆಚ್ಚಿನ ಅಂಕಗಳನ್ನು ಪಡೆದು ಕೊಳ್ಳುವ ರೀತಿ ಎಲ್ಲಾ ರೀತಿ ನಮ್ಮ ಗುರುಗಳು ಹಾಗೂ ಶಿಕ್ಷಕಿಯರು ಪ್ರಯತ್ನ ಮಾಡುತ್ತೇವೆ ಎಂದು ಕಾನ್ಫಿಡೆಂಟ್ ಕೋಚಿಂಗ್ ಕ್ಲಾಸ್ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗ ಬನ್ನೂರ್ ಅವರು ಪತ್ರಿಕೆಯ ಪ್ರತಿನಿಧಿಗಳಿಗೆ ಹೇಳಿದರು. ಈ ಕಾರ್ಯಕ್ರಮದಲ್ಲಿ  ಶ್ರೀ ಮುದುಕನಗೌಡ ಪಾಟೀಲ್, ನಿತೀಶ್ ಗೌಡ ಪಾಟೀಲ್, ಬಸವರಾಜ ಜಂಗಮಶೆಟ್ಟಿ, ಶಿವಾಜಿ ಮೋರೆ, ರವಿ ಹಾವಣ್ಣನವರ್ , ಅಪ್ಪು ಗುಂಡ, ಉಪಸ್ಥಿತರಿದ್ದರು ಹಾಗೂ ಗುರುಗಳು ಪಾಲಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮ ಸಂಗಮೇಶ ನಿರೂಪಿಸಿದರು, ಪ್ರಶಾಂತ ಸ್ವಾಗತಿಸಿದರು, ಬಸವರಾಜ ಚಿಮ್ಮಲಗಿ ವಂದಿಸಿದರು.

ವರದಿ : ಮಲ್ಲಿಕಾರ್ಜುನ ಬುರ್ಲಿ

Leave a Reply

Your email address will not be published. Required fields are marked *