ಕತರ್ನಾಕ್ ಅಂತರ ಜಿಲ್ಲಾ ಸುಲಗೆಕೋರರ  ಬಂಧನ ಮಾಡಿದ ಜಮಖಂಡಿ ಪೊಲೀಸ್……

Spread the love

ಕತರ್ನಾಕ್ ಅಂತರ ಜಿಲ್ಲಾ ಸುಲಗೆಕೋರರ  ಬಂಧನ ಮಾಡಿದ ಜಮಖಂಡಿ ಪೊಲೀಸ್……

ಬಾಗಲಕೋಟೆ ಜಿಲ್ಲೆಯ ಜಮಖಂಡಿ ವೃತ್ತದ ಜಮಖಂಡಿ ಶಹರ, ಗ್ರಾಮೀಣ ಮತ್ತು ಸಾವಳಗಿ ಪೊಲೀಸ್ ಠಾಣಿಗಳ ವ್ಯಾಪ್ತಿಯಲ್ಲಿ ರಸ್ತೆಯ ಮೇಲಿನ ಸುಲಿಗೆ ಪ್ರಕರಣಗಳುತ ವರದಿಯಾಗುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಅಧೀಕ್ಷಕರು, ಎಂ. ಪಾಂಡುರಂಗಯ್ಯ ಡಿ.ಎಸ್.ಪಿ.  ಸಲಹೆಯಂತೆ ತನಿಖಾಧಿಕಾರಿ ಐ.ಎಂ. ಮಠಪತಿ ಸಿಪಿಐ  ಬಸವರಾಜ ಕೊಣ್ಣುರೆ ಪಿ.ಎಸ್.ಐ. ಮತ್ತು ಸಿಬ್ಬಂದಿ ಜನರ ತಂಡದ ಆಧಾರದ ಮೇಲೆ ಜಂಬಗಿ ಕೆನಾಲ ಹತ್ತಿರ ಬಾಯಪಾಸ ರೋಡಿನಲ್ಲಿ 5 ಜನ ಅಪರಿಚಿತರು 2 ಮೋಟಾರ ಸೈಕಲ್ ಸಮೇತ ನಿಂತಾಗ  ಸ್ಥಳಕ್ಕೆ ಹೋಗಿ 5 ಜನರನ್ನು ಹಿಡಿದುಕೊಂಡು ಅಧಿಕಾರಿಗಳು ವಿಚಾರಿಸಿದಾಗ 2 ಮೋಟಾರ ಸೈಕಲ ಮೇಲೆ ಆರೋಪಿತರಾದ 1] ಗಜಾನನ ಸದಾಶಿವ ಹನಮಾಪೂರ, ಸಾ: ಹೊಸಟ್ಟ ತಾ: ಅಥಣಿ 2] ಜ್ಯೋತಿಬಾ ಸಿದ್ದಅಂಗಪ್ಪ ಬಂಗಿ ಸಾ: ಅಥಣಿ ರೇಣುಕಾ ನಗರ ಹಾಗೂ ಕೆಂಪು ಬಣ್ಣದ ಸೈನ ಮೋಟಾರ ಸೈಕಲ್ ಮೇಲೆ ಆರೋಪಿಗಳಾದ 3] ಕುಮಾರ ಯಲ್ಲಪ್ಪ ಖಿಲಾರೆ ಸಾ: ರಾಜಾಪೂರ ತಾ: ಗೋಕಾಕ [4] ಆನಂದ ಭೀಮಪ್ಪ ಜನೋಜಿ ಸಾ: ಸವದಿ ತಾ: ಅಥಣಿ [5] ದಿಲೀಪ ನಾನಾಸಾಬ ಚವಾಣ ಸಾ: ಅಥಣಿ ಇವರು ಮೂರು ಜನ ಇದ್ದರು. ಇವರನ್ನು ವಿಚಾರಿಸಲಾಗಿ ಕಳೆದ ಕೆಲವು ತಿಂಗಳುಗಳಿಂದಾ ಅಥಣಿ, ಗೋಕಾಕ, ನಿಪ್ಪಾಣಿ, ಸಂಕೇಶ್ವರ, ಮೀರಜ, ಚಿಕ್ಕೋಡಿ, ಘಟಪ್ರಭಾ, ಯರಗಟ್ಟಿ, ಮುಗಳಖೋಡ ಮತ್ತು ಜಮಖಂಡಿ ತಾಲೂಕಿನ ಅಡಿಹುಡಿ, ಮದುರುಖಂಡಿ ಗ್ರಾಮದ ಕೆಂಪು ಕೆರೆ ಹತ್ತಿರ ಮತ್ತು ಜಮಖಂಡಿ ಬೈ ಪಾಸ ರಸ್ತೆಯಲ್ಲಿ ಸುಲಿಗೆ ಮಾಡಿ ಜನರಿಂದಾ ಮೋಟಾರ ಸೈಕಲ, ಮೋಬೈಲ್, ಹಣ, ಬಂಗಾರ ಸುಅಗೆ ಮಾಡಿದ್ದು ಇದ್ದು, ಒಟ್ಟು ಸದರಿ ಆರೋಪಿಗಳಿಂದಾ 7 ಸುಅಗೆ ಪ್ರಕರಣಗಳು, 5 ಕಳ್ಳತನ ಪ್ರಕರಣಗನ್ನು ಪತ್ತೆ ಹಚ್ಚಿದ್ದು, ಇವರಿಂದಾ 12 ಮೋಟಾರ ಸೈಕಲ್ 3 ಮೋಬೈಲ 8 ಗ್ರಾಂ ಚಿನ್ನದ ತಾಳ ಸರ ಜನರನ್ನು ಹೆದರಿಸಲು ಬಳಸಿದ 4 ಚಾಕುಗಳನ್ನು ಜಪ್ತ ಮಾಡಿದ್ದು ಇವುಗಳ ಅಂದಾಜು ಕಿಮ್ಮತ್ತು 5,65,500 ರೂಪಾಯಿ ಆಗುತ್ತದೆ. ಈ ಕೃತ್ಯದಲ್ಲಿ ಭಾಗಿಯಾದ ೮ ಜನ ಆರೋಪಿತರಿಗೆ ದಸ್ತಗೀರ ಮಾಡಿ ನ್ಯಾಯಾಂಗ ಭಂದನಕ್ಕೆ ಒಪ್ಪಿಸಿದ್ದು ಇರುತ್ತದೆ. ಈ ಕಾರ್ಯದಲ್ಲಿ ವೃತ್ತದ ಪಿ.ಎಸ್.ಐ.ಗಳಾದ ಶ್ರೀ ಬಸವರಾಜ ಕೊಣ್ಣೂರೆ.. ಶ್ರೀ ವಸಂತ ಬಂಡಗಾರ ಸಚೀನ ಆಲಮೇಲಕರ, ಎ.ಎಸ್.ಐ. ಎಸ್.ಎಸ್. ನಾಯಕ, ಎನ್.ಡಿ. ದಡ್ಡಿಮನಿ, ಜಿ.ಎಂ. ಕುಂಬಾರ ಎಚ್.ಎಸ್. ಮೆಂಡೇಗಾರ , ಸಿಬ್ಬಂದಿಗಳಾದ ಕೆ.ಪಿ. ಸವದತ್ತಿ, ಬಿ.ಎಂ. ಜಂಬಗಿ ಮತ್ತು ಎಸ್.ಪಿ.ತುಪ್ಪದ, ಐ.ಜಿ. ದಾಶ್ಯಾಳ ಬಂಗಿ ಎಂ.ಕೆ. ಕೋಡಳ್ಳಿ ಪಿ.ಎಚ್. ಘಾಟಗೆ, ಎಸ್.ಎ. ಗೌಡರ ಹಾಗೂ ಎಸ್.ಬಿ. ಹನಗಂಡಿ ಮತ್ತು ಎಂ.ಎನ್. ಮಾಂಗ ಇವರು ಭಾಗವಹಿಸಿದ್ದರು. ಜಮಖಂಡಿ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಈ ಕಾರ್ಯ ವೈಕರಿಯನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಬಾಗಲಕೋಟ ರವರು ಶ್ಲಾಘಿಸಿರುತ್ತಾರೆ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *