ಇಂದು ಬಿಡುಗಡೆ ಗೊಳ್ಳುತ್ತಿರುವ ಒಂದು ಪ್ರೀತಿ ಎರಡು ಕನಸು ಕಿರುಚಿತ್ರ .ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ……

Spread the love

ಇಂದು ಬಿಡುಗಡೆ ಗೊಳ್ಳುತ್ತಿರುವ ಒಂದು ಪ್ರೀತಿ ಎರಡು ಕನಸು ಕಿರುಚಿತ್ರ .ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ……

ಇಂದು ಬಿಡುಗಡೆ ಗೊಳ್ಳುತ್ತಿರುವ ಒಂದು ಪ್ರೀತಿ ಎರಡು ಕನಸು ಕಿರುಚಿತ್ರ .ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೋಳ್ಳ್ ಲಿದೆ   niharika creations  ನಲ್ಲಿ ನೀವು ನೋಡ್ಬಬಹುದು. ನೈಜ ಪ್ರೇಮಕಥೆಯನ್ನು ಪ್ರೇಕ್ಷಕರ ಮನಗಳಿಗೆ ಮುಟ್ಟಿಸುವಂತಹ ಪ್ರಯತ್ನವನ್ನು ಅಭಿಲಾಷ್ ಮತ್ತು ಮೌನೇಶ್ ರಾಥೋಡ್ ತಂಡ ಮಾಡುತ್ತಿದ್ದು, ಈಗ ಚಿತ್ರೀಕರಣ ಮುಕ್ತಾಯ ಗೊಂಡಿದೆ . ಒಂದು ಪ್ರೀತಿ ಎರಡು ಕನಸು ಕಿರುಚಿತ್ರಕ್ಕೆ ನಿರ್ಮಾಪಕಿ ಮಂಜುಳಾ ಪವರ್  ಬಂಡವಾಳ ಹಾಕಿದ್ದು, ಕಿರುತೆರೆಯಲ್ಲಿ ನಟಿಸುತ್ತಿದ್ದ ಸಹನಟ ಮೌನೇಶ್ ರಾಥೋಡ್ ಹಾಗೂ ದಾವಣಗೆರೆ ಮೂಲದ ಪಲ್ಲವಿ ಚಿತ್ರದ  ನಾಯಕಿಯಾಗಿ ನಟಿಸಿದ್ದಾರೆ.  ಅಭಿಲಾಷ್ ಹಾಸನ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇನ್ನು ಈ ಕಿರುಚಿತ್ರವನ್ನು ಬೆಂಗಳೂರಿನ ಮೋಹನ್ ರಾಜ್ ಅದ್ಬುತವಾಗಿ ಚಿತ್ರಿಕರಿಸಿದ್ದಾರೆ,  ಮೌನೇಶ್ ರಾಥೋಡ್ ರವರು (youtube channel) niharika creations ಎಂಬ ತಮ್ಮದೇ ಬ್ಯಾನರ್ ನಲ್ಲಿ ಈಗಾಗಲೇ ಪ್ರೀತಿ ಬೆಸೆದ ಕರೋನಾ ಹಾಗೂ ಯಮಧರ್ಮರಾಜ ಎಂಬ ಎರಡು ಕಿರುಚಿತ್ರಗಳನ್ನು  ನಿರ್ಮಾಣ/ನಾಯಕ ನಟನಾಗಿ  ಮಾಡಿದ್ದು,  ಒಂದು ಪ್ರೀತಿ ಎರಡು ಕನಸು ಎಂಬ ಈ ಕಿರುಚಿತ್ರ ಬ್ಯಾನರ್ ನಡಿ ಮೂಡಿಬರುತ್ತಿರುವ ಮೂರನೆ ಚಿತ್ರ ಇದು,  ಇನ್ನು ಈ ಕಿರುಚಿತ್ರದಲ್ಲಿ ಕೊಪ್ಪಳದ ಮಲ್ಲಿಕಾರ್ಜುನ್ ಬೆಂಗಳೂರು, ಮೂಲದ ರೂಪ ಮತ್ತಿತರರು ನಟಿಸಿದ್ದಾರೆ.ನಾಳೆ ಈ ಕಿರುಚಿತ್ರ ಬಿಡುಗಡೆ ಗೊಳ್ಳಲಿದೆ. ನಾಯಕನಟನಾಗಿ  ಅಭಿನಯಿಸುತ್ತಿರುವ  ಮೌನೇಶ್ ರಾಥೋಡ್ , ಮತ್ತು ಹಾಸನ ಮೂಲದ ಅಭಿಲಾಷ್ ನಿರ್ದೇಶಿಸಿರುವ ಚಿತ್ರವು ಯಶಸ್ಸು ಕಾಣಲಿ, ಎಂಬುದು ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆಯ  ಆಶಯ ಕೂಡಾ. . .

ವರದಿ – ಮೌನೇಶ ರಾಥೋಡ್

Leave a Reply

Your email address will not be published. Required fields are marked *