ಸಾಮಾಜಿಕ ಸೇವಾ ಮನೋಭಾವ ಅಗತ್ಯ : ಶ್ರೀ ಸಿದ್ದರಾಮಾನಂದ ಸ್ವಾಮಿಜೀ …

Spread the love

ಸಾಮಾಜಿಕ ಸೇವಾ ಮನೋಭಾವ ಅಗತ್ಯ : ಶ್ರೀ ಸಿದ್ದರಾಮಾನಂದ ಸ್ವಾಮಿಜೀ …

ಸಹಕಾರಿ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಆಡಳಿತ ಮಂಡಳಿಯ ಸಾಮಾಜಿಕ ಸೇವೆಯ ಮನೋಭಾವ ಹೊಂದಿರಬೇಕು ಎಂದು ಕಲಬುರ್ಗಿ ವಿಭಾಗದ ತಿಂಥಿಣಿ ಬ್ರಿಡ್ಜ್ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದ ಸ್ವಾಮಿಜೀ ಹೇಳಿದರು

ಪಟ್ಟಣದ ಜೂಲೂರಿ ಆದಿನಾರಾಯಣ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿವಿದೋದ್ದೇಶ ಸಹಕಾರ ಸಂಘದ ಮಾನ್ವಿ ಶಾಖೆಯ ಪ್ರಥಮ ವರ್ಷದ ಗ್ರಾಹಕರ ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು..

ನಂತರ ಸಹಕಾರಿಯ ಅಧ್ಯಕ್ಷ ಶಿವಣ್ಣ ವಕೀಲರು ಮಾತನಾಡಿ ಸಹಕಾರಿಯ ಮಾನ್ವಿ ಶಾಖೆಯು ೪ಲಕ್ಷ ಷೇರು ಹಣ,೧೩,೮೦,೦೦೦ ರೂ ಲಕ್ಷ ನಿಧಿ,೧೯ಲಕ್ಷ ದುಡಿಯುವ ಬಂಡವಾಳ,೧ಕೋಟಿ೬೪ಲಕ್ಷ ರೂ ಸಾಲ ವಿತರಿಸಲಾಗಿದೆ ,೮,೪೬,೦೦೦ರೂ ಲಾಭ ಪಡೆದಿದೆ ಎಂದು ತಿಳಿಸಿದರು.  ಸಹಕಾರಿ ಸಂಘವು ಸಾಲ ನೀಡುವ ಮುಂಚೆ ಸೂಕ್ತ ಗ್ರಾಹಕರನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ನೀಡಿದ ಸಾಲ ಮರುಪಾವತಿಸಲು ಸಿಬ್ಬಂದಿ ಗ್ರಾಹಕರೊಂದಿಗೆ ಸಹೋದರ ಸಹಕಾರ ಮನೋಭಾವ ಹೊಂದಿರಬೇಕು ಎಂದು ಹೇಳಿದರು ಮಾಜಿ ಶಾಸಕ ಹಂಪಯ್ಯ ಸಾಹುಕಾರ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕಿರಿಲಿಂಗಪ್ಪ. ಬಿ. ಕೆ. ಅಮರೇಶಪ್ಪ ವಕೀಲರು. ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಉತ್ತಮ ಗ್ರಾಹಕರಿಗೆ ಸನ್ಮಾನ,ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದ ನಿರೂಪಣೆಯನ್ನು ನಿರ್ದೇಶಕರಾದ ಬಾಬು ಬೆಟ್ಟದೂರು ಅವರು ನೆರವೇರಿಸಿದರು.  ಸಂಘದ ಉಪಾಧ್ಯಕ್ಷರಾದ ಕರಿಯಪ್ಪ ಪೂಜಾರಿ ಯಕ್ಲಾಸಪೂರ  ಜಡ್ಡೆ ಕರಿಯಪ್ಪ ಪೂಜಾರಿ,ಶಿವಣ್ಣ ಪೂಜಾರಿ.  ಶ್ರೀ ಕನಕ ನೌಕರರ ಸಂಘದ ಅಧ್ಯಕ್ಷ ಶರಣಪ್ಪ ರೂಡಗಿ ಕವಿತಾಳ. ಮಾನವಿ. ಲಿಂಗಸೂಗೂರು ಶಾಖೆಯ ನಿರ್ದೇಶಕರು ಉಪಸ್ಥಿತರಿದ್ದರು. ಪ್ರದಾನ ಕಚೇರಿಯ  ಸಿಇಒ ಶಿವಕುಮಾರ ಹಣಗಿ,ಮಾನವಿ ಶಾಖೆಯ ವ್ಯವಸ್ಥಾಪಕ ಅಮರನಾಥ, ಲಿಂಗಸುಗೂರು ಶಾಖೆಯ ಆನಂದ ಸಿಂಗ್ ಸೇರಿದಂತೆ ಇನ್ನಿತರರು ಇದ್ದರು.

ವರದಿ – ಆನಂದ ಸಿಂಗ್ ಕವಿತಾಳ

Leave a Reply

Your email address will not be published. Required fields are marked *