ಆರಿತು ಚಂದನವನದ ಬೆಳಕು ಪುನೀತ್ ರಾಜ್ (ರತ್ನ) ಇನ್ನಿಲ್ಲ.

Spread the love

ಆರಿತು ಚಂದನವನದ ಬೆಳಕು ಪುನೀತ್ ರಾಜ್ (ರತ್ನ) ಇನ್ನಿಲ್ಲ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಬೆಳಿಗ್ಗೆ  ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ ಕಾಣಿಸಿಕೊಂಡಿದ್ದ ಎದೆನೋವು ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎದೆನೋವು ಗಂಭೀರವಾದ ಕಾರಣ ಚಿಕಿತ್ಸೆ ಸ್ಪಂದಿಸದೆ ಅವರು ವಿಧಿವಶರಾಗಿದ್ದರೆ ಎಂದು ವಿಕ್ರಂ ಆಸ್ಪತ್ರೆ ವೈದ್ಯ ಡಾ. ರಂಗನಾಥ್​ ತಿಳಿಸಿದ್ದಾರೆ. ಅಭಿಮಾನಿಗಳ ಆಕ್ರಂದನ ಮುಗಿಲು‌ ಮುಟ್ಟಿದ್ದು ತಲೆ ಚುಚ್ಚಿಕೊಂಡು ಕಣ್ಣೀರಿಡುತ್ತಿದ್ದಾರೆ. ಅಣ್ಣಾವರ ನಂದಾದೀಪ.. ಅಪ್ಪು.. ಅಪ್ಪು ಎಂದು ಅಭಿಮಾನಿಗಳು ಕಣ್ಣೀರುಟ್ಟು ಬ್ಬೊಬ್ಬೆ ಹಾಕುತ್ತಿದ್ದಾರೆ. ಪವರ್ ಪುನೀತ್ ರಾಜಕುಮಾರ್ ಹೃದಯ ಘಾತದಿಂದ ಇಂದು ಮೃತಪಟ್ಟಿದು ಇಡೀ ಕರ್ನಾಟಕ ಸ್ತಬ್ಧವಾಗಿದೆ. ಇಂದು ಮುಂಜಾನೆ ಜಿಮ್ ಮಾಡುವ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ವಿಕ್ರಂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಆಸ್ಪತ್ರೆಗೆ ಬರುವ ಮೊದಲೇ ಪುನೀತ್ ಅವರ ಸ್ಥಿತಿ ಗಂಭೀರವಾಗಿತ್ತು ಎಂದು ಹೇಳಲಾಗುತ್ತಿದ್ದರು, ಆದ್ರೆ ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾರೆ.  ಬೆಳಗ್ಗಿನಿಂದಲೇ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಅರ್ಧದಲ್ಲೇ ರದ್ದಾಗಿದೆ. 26 ಅನಾಥಾಶ್ರಮ, 45 ಉಚಿತ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿ ಧಾಮ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕನ್ನಡದ ಏಕೈಕ ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲ.. ಇವರ ಕೀರು ಪರಿಚಯ : ಪುನೀತ್ ರಾಜ್ ಕುಮಾರ್ (17 ಜನನ ಮಾರ್ಚ್ 1975) ಭಾರತೀಯ ಚಿತ್ರ ನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಪ್ರಾಥಮಿಕವಾಗಿ ಕನ್ನಡ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಾರೆ. ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜ್ ಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), 2ನಕ್ಷತ್ರಗಳು(1983), ಬೆಟ್ಟದ ಹೂವು(1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ 2002 ಅಪ್ಪು ರಲ್ಲಿ ಅಭಿಯಿಸಿದರು. ಅವರ ಅಭಿ(2003), ಆಕಾಶ್(2005), ಅರಸು(2007), ಮಿಲನ(2007), ಜಾಕಿ (2010),ಹುಡುಗರು (2011), ಅಣ್ಣಾ ಬಾಂಡ್( 2012), ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಾಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ. ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಬೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಥನೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *